newsfirstkannada.com

ಆಸ್ಪತ್ರೆಗೆ ಹೋಗುವ ಮುನ್ನ ಒಮ್ಮೆ ವಿಚಾರಿಸಿ.. ಇವತ್ತು ಡಾಕ್ಟರ್​ ಸಿಗೋದೇ ಡೌಟ್​, ಯಾಕೆಂದರೆ..

Share :

Published August 12, 2024 at 8:40am

    ದೇಶದಾದ್ಯಂತ ವೈದ್ಯಕೀಯ ಸೇವೆಯ ನಾನ್​ ಎಮರ್ಜೆನ್ಸಿ

    ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಾಡುತ್ತಾ ವೈದ್ಯರ ಬರ?

    ಇವತ್ತು ದೇಶದಾದ್ಯಂತ ಡಾಕ್ಟರ್ಸ್​​ ಸ್ಟ್ರೈಕ್​​​ ಇದೆ, ಕಾರಣ..?

ಸರ್ಕಾರಿ ಆಸ್ಪತ್ರೆಗೆ ಹೋಗ್ಬೇಕು ಅಂತ ಪ್ಲಾನ್ ಮಾಡಿದ್ದೀರಾ? ವೇಟ್​​ ವೇಟ್​​.. ಸ್ವಲ್ಪ ವಿಚಾರಿಸಿ ಹೋದ್ರೆ ಒಳ್ಳೆಯದು.. ಯಾಕೆಂದ್ರೆ ಇವತ್ತು ದೇಶಾದ್ಯಂತ ಡಾಕ್ಟರ್ಸ್​​ ಸ್ಟ್ರೈಕ್​​​ ಇದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಓಪಿಡಿ, ನಾನ್ ಎಮರ್ಜೆನ್ಸಿ ಸೇವೆಗಳು ಬಂದ್ ಆಗುವ ಸಾಧ್ಯತೆ ಇದೆ.

ಬಂಗಾಳದಲ್ಲಿನ ಈ ಕೃತ್ಯ ಇಡೀ ದೇಶದಲ್ಲೇ ಆಕ್ರೋಶದ ಜ್ವಾಲೆ ಭುಗಿಲೆಬ್ಬಿಸಿದೆ. ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯೆ ವಿದ್ಯಾರ್ಥಿ ಮೇಲಿನ ಅತ್ಯಾಚಾರ, ಹತ್ಯೆ ಕೇಸ್​ ದಂಗು ಬಡಿಸಿದೆ. ಈ ಹತ್ಯಾಚಾರ ಖಂಡಿಸಿ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಇವತ್ತು ಪ್ರತಿಭಟನೆಗೆ ಕರೆ ನೀಡಿದೆ. ಈ ಬೆಳವಣಿಗೆ ದೇಶಾದ್ಯಂತ ನಾನ್ ಎಮರ್ಜೆನ್ಸಿ ಸೇವೆಗಳು ಬಂದ್ ಆಗಲಿವೆ.

ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಕರೆತರಲು NASA ಹೊಸ ಪ್ಲಾನ್; ‘ಸೂಪರ್ ಮ್ಯಾನ್’ ಆಗಲಿದೆ ಎಲಾನ್ ಮಸ್ಕ್​ನ SpaceX..!

ದೇಶಾದ್ಯಂತ ವೈದ್ಯಕೀಯ ಸೇವೆಯ ನಾನ್​ ಎಮರ್ಜೆನ್ಸಿ
ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಆರೋಪಿಗಳ ವಿರುದ್ಧ 24 ಗಂಟೆಯೊಳಗೆ ಕಠಿಣ ಕ್ರಮ ಜರುಗಿಸಬೇಕು ಎಂದು ಫೋರ್ಡಾ ಶನಿವಾರ ಗಡುವು ವಿಧಿಸಿತ್ತು. ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ವೈದ್ಯ ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು. ಆರೋಪಿಗಳ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ಆಸ್ಪತ್ರೆಗಳಲ್ಲಿ ಸೇವೆ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು.

ವೈದ್ಯೆ ವಿದ್ಯಾರ್ಥಿನಿ ರೇಪ್​ ಅಂಡ್ ಮರ್ಡರ್​!
ಪ್ರಾಥಮಿಕ ಶವಪರೀಕ್ಷೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ.. ಸ್ನಾತಕೋತ್ತರ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡ್ತಿರುವ ಕಿರಿಯ ವೈದ್ಯೆ ಗುರುವಾರ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸ್ತಿದ್ರು.. ಮರುದಿನ ಶುಕ್ರವಾರ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅರೆಬೆತ್ತಲೆಯಾಗಿ ಶವ ಪತ್ತೆಯಾಗಿದ್ರು. ಶವಪರೀಕ್ಷೆಯಲ್ಲಿ ಕೈಕಾಲು, ಬಾಯಿ ಮತ್ತು ಕಣ್ಣುಗಳಿಂದ ರಕ್ತಸ್ರಾವವಾಗಿದೆ ಎಂದು ಗೊತ್ತಾಗಿತ್ತು. ಸ್ಥಳದಲ್ಲಿ ಪತ್ತೆಯಾದ ಬ್ಲೂಟೂತ್ ಆಧಾರದ ಮೇಲೆ, ಶಂಕಿತ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲೂ ಡಾಕ್ಟರ್ಸ್ ಬಿಸಿ ತಟ್ಟುವ ಸಾಧ್ಯತೆ ಇದೆ. ವಿದ್ಯಾರ್ಥಿ ಹತ್ಯೆ ಮತ್ತು ಸ್ಟೇಫಂಡ್ ಹೆಚ್ಚಳಕ್ಕೆ ಆಗ್ರಹಿಸಿ ವೈದ್ಯರು ರಸ್ತೆಗೆ ಇಳಿಯಲಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ, ಬೌರಿಂಗ್ ಸೇರಿ ಎಲ್ಲಾ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳಲ್ಲಿ ಇವತ್ತು ಕೆಲಸಕ್ಕೆ ಸರ್ಕಾರಿ ರೆಸಿಡೆಂಟ್ ಡಾಕ್ಟರ್ಸ್ ಗೈರಾಗುವ ಸಾಧ್ಯತೆ ಇದೆ. ಕೇವಲ ಇನ್ ಪೇಷೆಂಟ್ ಹಾಗೂ ಎಮರ್ಜೆನ್ಸಿ ಸೇವೆ ಮಾತ್ರ ಲಭ್ಯವಿರಲಿದೆ ಅಂತ ಗೊತ್ತಾಗಿದೆ. ಬೆಳಗ್ಗೆ 10 ಗಂಟೆಗೆ ಫ್ರೀಡಂಪಾರ್ಕ್‌ನಲ್ಲಿ ಹೋರಾಟಕ್ಕೆ ವೈದ್ಯರು ಸಜ್ಜಾಗಿದ್ದಾರೆ. ಒಟ್ಟಾರೆ ಇವತ್ತು ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ. ತುರ್ತು ಸೇವೆ ಹೊರತು ಹಲವು ಸೇವೆಗಳಲ್ಲಿ ವ್ಯತ್ಯಯವಾಗಲಿದೆ.. ಹಾಗಾಗಿ ಆಸ್ಪತ್ರೆಗೆ ಹೋಗುವ ಮುನ್ನ ಒಮ್ಮೆ ವಿಚಾರಿಸಿ.

ಇದನ್ನೂ ಓದಿ:ಯಾರೂ ನಿರೀಕ್ಷೆ ಮಾಡಿರದ ನಿರ್ಧಾರ ತೆಗೆದುಕೊಂಡ ಸೂರ್ಯ, ಟೀಂ ಇಂಡಿಯಾದ ಸ್ಟಾರ್ಸ್​ಗೆ ಬಿಗ್ ಶಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಪತ್ರೆಗೆ ಹೋಗುವ ಮುನ್ನ ಒಮ್ಮೆ ವಿಚಾರಿಸಿ.. ಇವತ್ತು ಡಾಕ್ಟರ್​ ಸಿಗೋದೇ ಡೌಟ್​, ಯಾಕೆಂದರೆ..

https://newsfirstlive.com/wp-content/uploads/2024/08/DOCTOR.jpg

Load More