newsfirstkannada.com

ದರ್ಶನ್​ ಗ್ಯಾಂಗ್​ನಿಂದ ಕೊಲೆ ಕೇಸ್​ಗೆ ಟ್ವಿಸ್ಟ್​; ಆರೋಪಿಗಳ ಫೋನ್​​ನಲ್ಲಿ ಸ್ಫೋಟಕ ಮಾಹಿತಿ ಬಯಲು

Share :

Published August 13, 2024 at 6:12am

    ‘ಡಿ’ ​​ ಗ್ಯಾಂಗ್​​​​ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ

    ಆರೋಪಿಗಳ ಫೋನ್​​ ಕಾಲ್​​​​ ಪರಿಶೀಲಿಸಿದ ಪೊಲೀಸರು

    ಜೂನ್ 8 ರಿಂದ10 ರ ನಡುವಿನ ಫೋನ್​​ ಕಾಲ್ ಮಾಹಿತಿ ಕಲೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ನಟ ಪರಪ್ಪನ ಅಗ್ರಹಾರ ಪಾಲಾಗಿ 50 ದಿನಗಳ ಮೇಲೆ ಕಳೆದಿದೆ.. ಆರೋಪಿ ದರ್ಶನ್​ ವಿರುದ್ಧ ದಿನದಿಂದ ದಿನಕ್ಕೆ ಸಾಕ್ಷ್ಯಗಳು ಗಟ್ಟಿಯಾಗುತ್ತಿದೆ.. ಸದ್ಯ ಚಾರ್ಜ್​ಶೀಟ್​​ ಸಲ್ಲಿಸಲು ಮುಂದಾಗಿರುವ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಫೋನ್​ ಕಾಲ್​ ಡಿಟೈಲ್ಸ್​​ ಕಲೆ ಹಾಕಿದ್ದಾರೆ..
ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್​​ ಪಾಲಾಗಿ 50 ದಿನಗಳ ಮೇಲಾಗಿದೆ.. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್​​ ಒಂದು ಎರಡು ಮೂರು ಅಂತ ಕಂಬಿ ಎಣಿಸುತ್ತಾ ಮಾಡಿದ ತಪ್ಪಿನ ಬಗ್ಗೆ ಪಶ್ಚತಾಪ ಪಡ್ತಿದ್ದಾರೆ.. ಮತ್ತೊಂದೆಡೆ ರೇಣುಕಾಸ್ವಾಮಿ ಹಂತಕರಿಗೆ ಶಿಕ್ಷೆ ಕೊಡಿಸಲು ಪಣತೊಟ್ಟಿರುವ ಪೊಲೀಸರು ಅದಕ್ಕೆ ಬೇಕಾದ ಸಾಕ್ಷ್ಯ ಸಂಗ್ರಹ ಮಾಡ್ತಿದ್ದು ತನಿಖೆಯನ್ನ ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: ಪಲ್ಟಿಯಾದ ಸಾರಿಗೆ ಬಸ್.. 13ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ, ಇಬ್ಬರ ಸ್ಥಿತಿ ಚಿಂತಾಜನಕ
ದಿನದಿಂದ ದಿನಕ್ಕೆ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಒಂದೊಂದು ಸಾಕ್ಷ್ಯಗಳು ಪೊಲೀಸರ ಕೈ ಸೇರ್ತಿವೆ. ಪ್ರಕರಣದಲ್ಲಿ ಸಿಸಿಟಿವಿ ದೃಶ್ಯ, ದರ್ಶನ್​​​​ ಬಟ್ಟೆ ಮೇಲೆ ಸಿಕ್ಕಿರೋ ರಕ್ತದ ಕಲೆ ಹೀಗೆ ಆರೋಪಿಗಳ ವಿರುದ್ಧ ಪೊಲೀಸರು ನೂರಾರು ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ.. ಸದ್ಯ ಟೆಕ್ನಿಕಲ್​​ ಎವಿಡೆನ್ಸ್​​ಗಳನ್ನು ಕಲೆ ಹಾಕಲು ಮುಂದಾಗಿರುವ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳ ಫೋನ್​ ಕಾಲ್​​ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:‘ನಮ್ಮನ್ನು ಶತ್ರುವಿನ ರೀತಿ ನೋಡ್ತಿರಾ’- ಸಿದ್ದು ಸರ್ಕಾರದ ವಿರುದ್ಧ ಪ್ರಮೋದಾ ದೇವಿ ಶಾಕಿಂಗ್ ರಿಯಾಕ್ಷನ್‌!
ದರ್ಶನ್​​ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಇದುವರೆಗೂ 400ಕ್ಕೂ ಹೆಚ್ಚು ಪೋನ್ ಕಾಲ್ ಪರಿಶೀಲನೆ ನಡೆಸಿದ್ದಾರೆ.. ಕೃತ್ಯಕ್ಕೂ ಮುನ್ನಾ ಕೃತ್ಯದ ನಂತರ ಆರೋಪಿಗಳು ಪರಸ್ಪರ ಮಾತನಾಡಿರೋ ಪೋನ್ ಕಾಲ್ ಮಾಹಿತಿಯನ್ನ ಕಲೆ ಹಾಕಿದ್ದಾರೆ.. ಕೇವಲ ಫೋನ್ ಕಾಲ್​​ ಮಾತ್ರವಲ್ಲದೇ ಆರೋಪಿಗಳು ವಾಟ್ಸಾಪ್​​​ನಲ್ಲೂ ​​ನೂರಾರು ಕರೆ ಮಾಡಿದ್ದಾರೆ, ಕೃತ್ಯದ ನಂತರ ಬಂಧಿತ ಆರೋಪಿಗಳು ಐವತ್ತಕ್ಕೂ ಹೆಚ್ಚು ಮಂದಿ ಜೊತೆ ಮಾತುಕತೆ ನಡೆಸಿದ್ದಾರೆ.. ಆರೋಪಿಗಳು ಖುದ್ದು ದರ್ಶನ್​ ಜೊತೆಯೂ ಮಾತುಕತೆ ನಡೆಸಿರೋದು ಸಿಡಿಆರ್​​ನಲ್ಲಿ ಬಹಿರಂಗವಾಗಿದೆ.. ಸಿಡಿಆರ್​ ಆಧಾರದ ಮೇಲೆ ಪೊಲೀಸರು ಐವತ್ತಕ್ಕೂ ಹೆಚ್ಚು ಜನರನ್ನ ವಿಚಾರಣೆ ನಡೆಸಿದ್ದಾರೆ.. ಜೊತೆಗೆ ಜೂನ್​​ 8 ರಿಂದ ಜೂನ್​​ 10ರ ನಡುವಿನ ಪೋನ್

ಕಾಲ್​ ಡಿಟೇಲ್ಸ್​​ಗಳನ್ನ ಕಲೆ ಹಾಕಿದ್ದಾರೆ.

ಇನ್ನು,  ಪೊಲೀಸರು ಕೊಲೆ ಕೇಸ್​​ನಲ್ಲಿ ಬಂಧಿಯಾಗಿರುವ 17 ಜನರ ಫೋನ್​ ಕಾಲ್​ ಪರಿಶೀಲನೆ ನಡೆಸಿದ್ದು, ಕೃತ್ಯದ ನಂತರ ಆರೋಪಿಗಳು ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಜೊತೆ ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡಿರೋದು ಬಯಲಾಗಿದೆ..
ಸದ್ಯ ಕೊಲೆ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರುವ ನಟ ದರ್ಶನ್​ & ಗ್ಯಾಂಗ್​ ವಿರುದ್ಧ ದಿನದಿಂದ ದಿನಕ್ಕೆ ಸಾಕ್ಷ್ಯಗಳು ಗಟ್ಟಿಯಾಗ್ತಿದೆ. ಅತ್ತ ಪೊಲೀಸರು ಚಾರ್ಜ್‌ಶೀಟ್‌ ಹಾಕೋವರೆಗೆ ದರ್ಶನ್‌ಗೆ ಬೇಲ್‌ ಭಾಗ್ಯ ಸಿಗಲ್ಲ.. ಕೇಸ್‌ನಲ್ಲಿ ಮತ್ತಷ್ಟು ಸಾಕ್ಷ್ಯ ಕಲೆಗೆ ಪೊಲೀಸರು ಮುಂದಾಗಿರೋದ್ರಿಂದ ಡಿ ಗ್ಯಾಂಗ್‌ಗೆ ಸಂಕಷ್ಟ ತಪ್ಪಿದ್ದಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಗ್ಯಾಂಗ್​ನಿಂದ ಕೊಲೆ ಕೇಸ್​ಗೆ ಟ್ವಿಸ್ಟ್​; ಆರೋಪಿಗಳ ಫೋನ್​​ನಲ್ಲಿ ಸ್ಫೋಟಕ ಮಾಹಿತಿ ಬಯಲು

https://newsfirstlive.com/wp-content/uploads/2024/06/renukaswami3.jpg

Load More