newsfirstkannada.com

3 ವರ್ಷದಲ್ಲಿ 5 ಮದುವೆ ಕೇಸ್​​ಗೆ ಬಿಗ್​ ಟ್ವಿಸ್ಟ್.. ಖತರ್ನಾಕ್ ಗ್ಯಾಂಗ್​ ಅಸಲಿ ವಿಚಾರ ಕೇಳಿದ್ರೆ ಶಾಕ್ ಆಗ್ತೀರಾ!

Share :

Published August 13, 2024 at 1:19pm

Update August 13, 2024 at 2:16pm

    ಕುಟುಂಬಸ್ಥರ ಸಮ್ಮುಖದಲ್ಲಿ ಮಗನ ಮದುವೆ ಮಾಡಿಸಿದ್ದ ತಂದೆ ಕಂಗಾಲು

    ಗುಬ್ಬಿ ತಾಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ನಡೆಯಿತು ಮೋಸದ ಮದುವೆ

    ಈ ಘಟನೆ ಸಂಬಂಧ ನಾಲ್ವರನ್ನ ಬಂಧಿಸಿದ ಗುಬ್ಬಿ ಪೊಲೀಸ್ ಅಧಿಕಾರಿಗಳು

ತುಮಕೂರು: ಈಗಿನ ಕಾಲದಲ್ಲಿ ಯಾರನ್ನು ನಂಬಬೇಕು ಅಂತ ತಿಳಿಯುವುದೇ ಇಲ್ಲ. ಅದೆಷ್ಟೋ ಮಂದಿಗೆ ಒಂದೇ ಮದುವೆಯಾದವರ ಜೊತೆ ನೆಟ್ಟಗೆ ಸಂಸಾರ ಮಾಡಲು ಆಗೋದಿಲ್ಲ. ಆದರೆ ಇಲ್ಲೊಬ್ಬ ಕಿಲಾಡಿ ಮಹಿಳೆ ಐದು ಮದುವೆಯಾಗಿ ಪೊಲೀಸರ ಅತಿಥಿಯಾಗಿದ್ದಾಳೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ಈ ಮೋಸ ನಡೆದಿದೆ. ಗ್ರಾಮದ ಪಾಲಾಕ್ಷಯ್ಯ ಅನ್ನೋರ ಮಗ ದಯಾನಂದಮೂರ್ತಿಗೆ 37 ವರ್ಷ ಆಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ದಯಾನಂದಮೂರ್ತಿಗೆ ಹೆಣ್ಣು ಹುಡುಕುತ್ತಿತ್ತು. ನೂರಾರು ಹೆಣ್ಣು ಹುಡುಕಿದರೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಪಾಲಾಕ್ಷಯ್ಯ ಅವರು ಹತ್ತಾರು ಮದುವೆ ಬ್ರೋಕರ್​ಗಳ ಮೂಲಕ ಹೆಣ್ಣು ಹುಡುಕಿಸಿದ್ದರು. ಕೋಮಲಾ ಎಂಬ ಮಹಿಳೆ ಜೊತೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಪಾಲಾಕ್ಷಯ್ಯ ತಮ್ಮ ಮಗನ ಮದುವೆಯನ್ನು ತರಾತುರಿಯಲ್ಲಿ ಮಾಡಿಸಿಬಿಟ್ಟಿದ್ದಾರೆ. ಮದುವೆಯಾದ ಎರಡು ದಿನಕ್ಕೆ ಕಿಲಾಡಿ ಮಹಿಳೆ ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಹುಡುಗರೇ..‘ಮದ್ವೆ ಆಗಿಲ್ಲ’ ಅಂತಾ ಮೋಸ ಹೋಗಬೇಡಿ.. 3 ವರ್ಷದಲ್ಲಿ 5 ಮದ್ವೆಯಾದ ಹೆಣ್ಣಿನ ಸ್ಟೋರಿ ಓದಿ, ಎಚ್ಚೆತ್ತುಕೊಳ್ಳಿ!

ಆದರೆ ಖತರ್ನಾಕ್ ಗ್ಯಾಂಗ್ ಮದುವೆ ಹೆಸರಲ್ಲಿ ದೋಖಾ ಮಾಡಲು ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿ ಮಾಡಿದ್ದರಂತೆ. ಈ ತಂಡ ಮದುವೆ ಹೆಸರಲ್ಲಿ ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದರಂತೆ. ಇದಕ್ಕಾಗಿ ನಕಲಿ ಅಡ್ರೆಸ್​ನಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿಕೊಳ್ಳುತ್ತಿದ್ದರು. ಆಧಾರ್ ಕಾರ್ಡ್ ತೋರಿಸಿ ಗಂಡಿನ‌ ಮನೆಯವರನ್ನ ನಂಬಿಸುತ್ತಿದ್ದರು. ಈ ಗ್ಯಾಂಗ್‌ ಒಟ್ಟು ನಾಲ್ವರಿಗೂ ಹೆಚ್ಚು ಜನರಿಗೆ ಮದುವೆ ಹೆಸರಿನಲ್ಲಿ ದೋಖಾ ಮಾಡಿದೆ. ಸಂಪ್ರದಾಯದಂತೆ ಮದುವೆ ಮಾಡಿಕೊಂಡು, ಬಳಿಕ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಂತೆ.

ಇನ್ನು, ಈ ಕೇಸ್​ನ ಪ್ರಮುಖ ಆರೋಪಿಯೇ ಬ್ರೋಕರ್‌ ಲಕ್ಷ್ಮೀ. ಮದುಮಗಳಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಚಿಕ್ಕಪ್ಪ-ಚಿಕ್ಕಮ್ಮನ ಹೆಸರಿನಲ್ಲಿ ಬಂದಿದ್ದವರು ಕೂಡ ನಕಲಿ ವ್ಯಕ್ತಿಗಳು. ಸದ್ಯ ನಾಲ್ವರನ್ನ ಬಂಧಿಸಿದ ಗುಬ್ಬಿ ಪೊಲೀಸರು ಜೈಲಿಗಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ವರ್ಷದಲ್ಲಿ 5 ಮದುವೆ ಕೇಸ್​​ಗೆ ಬಿಗ್​ ಟ್ವಿಸ್ಟ್.. ಖತರ್ನಾಕ್ ಗ್ಯಾಂಗ್​ ಅಸಲಿ ವಿಚಾರ ಕೇಳಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/08/tumakuru1.jpg

Load More