newsfirstkannada.com

ಅಲ್ಲಾಡುತ್ತಿದೆ ಗಿಲ್ ಸ್ಥಾನ.. ಯಂಗ್​ ಗನ್​ನಿಂದ ಭಾರೀ ಫೈಟ್.. ಬಿಸಿಸಿಐ ಕೊಕ್ ಕೊಟ್ಟರೂ ಅಚ್ಚರಿ ಇಲ್ಲ!

Share :

Published August 13, 2024 at 1:22pm

    ಚಾಂಪಿಯನ್ಸ್ ಟ್ರೋಫಿಗೆ ಯಾರು ಬೆಸ್ಟ್​ ಆಪ್ಷನ್​​​..?

    ಕ್ಯಾಪ್ಟನ್​​​-ಹೆಡ್​​​ಕೋಚ್​ಗೆ ಯಾರ ಮೇಲಿದೆ ಒಲವು..?

    ಗಿಲ್​ರನ್ನ ಓವರ್​​ಟೇಕ್ ಮಾಡ್ತಾರಾ ಈ ಆಟಗಾರ..?

ಶ್ರೀಲಂಕಾ ಸರಣಿ ಕೈಚೆಲ್ಲಿದ ಟೀಮ್ ಇಂಡಿಯಾದ ನೆಕ್ಸ್ಟ್​ ಟಾರ್ಗೆಟ್​ ಚಾಂಪಿಯನ್ಸ್ ಟ್ರೋಫಿ. ಈ ಗ್ಲೋಬಲ್ ಇವೆಂಟ್​ನಲ್ಲಿ ರೋಹಿತ್​ ಶರ್ಮಾ ಜೊತೆಗಾರ ಆಗಲು ಶುಭ್​​ಮನ್​ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್​ ನಡುವೆ ಫೈಟ್ ಏರ್ಪಟ್ಟಿದೆ.

ಸರಣಿ ಸೋಲಿನೊಂದಿಗೆ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸಕ್ಕೆ ಗುಡ್​ಬೈ ಹೇಳಿದೆ. ಸರಣಿಯುದ್ದಕ್ಕೂ ಬ್ಯಾಟ್ಸ್​​ಮನ್​ಗಳು ತೋರಿದ ಕಳಪೆ ಪ್ರದರ್ಶನ ಆತಂಕಕ್ಕೆ ಕಾರಣವಾಗಿದೆ. ಇದೇ ಸೈನ್ಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದ್ರೆ ತಂಡದ ಕಥೆ ಏನು? ಅಪ್ರೋಚ್ ಜೊತೆ ಆಯ್ಕೆಯಲ್ಲಿ ಬದಲಾವಣೆ ಆಗಬೇಕು ಅನ್ನೋ ಕೂಗು ಕ್ರಿಕೆಟ್ ವಲಯದಲ್ಲಿ ಕೇಳಿ ಬರ್ತಿದೆ. ಎಸ್ಪೆಷಲಿ ಕ್ಯಾಪ್ಟನ್ ರೋಹಿತ್​ ಶರ್ಮಾ ಜೊತೆಗಾರ ಯಾರು ಆಗ್ಬೇಕು ಅನ್ನೋದು ಹಾಟ್​ ಟಾಫಿಕ್ ಆಗಿದೆ.

ಇದನ್ನೂ ಓದಿ:‘ಅಪ್ಪ, ಅಮ್ಮ ಕ್ಯಾನ್ಸರ್​ನಿಂದ ತೀರಿ ಹೋದರು..’ ಕುಗ್ಗಲಿಲ್ಲ ಛಲ ಬಿಡದೇ IAS ಅಧಿಕಾರಿಯಾದ ಛಲಗಾರ್ತಿ..!

ಜೈಸ್ವಾಲ್​​ V/S ಗಿಲ್​​​..!
ಯಶಸ್ವಿ ಜೈಸ್ವಾಲ್​​ ವರ್ಸಸ್​​ ಶುಭ್​ಮನ್​ ಗಿಲ್​. ಟೀಮ್ ಇಂಡಿಯಾ ಸೆನ್ಷೆಷನಲ್​ ಯಂಗ್​ಸ್ಟರ್ಸ್​. ಆರಂಭಿಕರಾಗಿ ಈ ಜೋಡಿ ಕ್ರಿಕೆಟ್ ಪ್ರೇಮಿಗಳ ದಿಲ್ ಗೆದ್ದಿದೆ. ಲೆಫ್ಟಿ ಬ್ಯಾಟರ್​​​​​ ಜೈಸ್ವಾಲ್​ ಅಗ್ರೆಸ್ಸಿವ್ ಆಟದಿಂದ, ಗಿಲ್ ಕ್ಲಾಸ್​​ ಅಂಡ್ ಮಾಸ್​ ಆಟದಿಂದ ಸಖತ್ ಸದ್ದು ಮಾಡ್ತಿದ್ದಾರೆ. ಇದೀಗ ಈ ಯಂಗ್​​​​​​​ ಜೋಡಿಗಳ ನಡುವೆ ಫೈಟ್​ ಏರ್ಪಟ್ಟಿದೆ. ಚಾಂಪಿಯನ್ಸ್ ಟ್ರೋಫಿಗೆ ಯಾರು ಬೆಸ್ಟ್​ ​ ಅನ್ನೋ ಡಿಬೇಟ್​​​​​​​​​​ ನಡೀತಿದೆ.

ಪಂಜಾಬ್​ ಪುತ್ತರ್​ಗಿಂತ ಯಶಸ್ವಿ ಜೈಸ್ವಾಲ್​​ ಬೆಸ್ಟ್​
ಗಿಲ್​​ ಇತ್ತೀಚೆಗೆ ಮುಗಿದ ಶ್ರೀಲಂಕಾ ಒನ್ಡೆ ಸರಣಿಯಲ್ಲಿ ಅಟ್ಟರ್ ಪ್ಲಾಫ್​ ಶೋ ನೀಡಿದ್ರು. ಸಿಂಹಳೀಯರ ಸ್ಪಿನ್​ ಜಾಲಕ್ಕೆ ಸಿಲುಕಿ ಗಿಲ್ ವಿಲ ವಿಲ ಒದ್ದಾಡಿದ್ರು. ಇದ್ರ ಬೆನಲ್ಲೇ ಪಂಜಾಬ್​​ ಪುತ್ತರ್​​​​​​ ಬದಲು ಜೈಸ್ವಾಲ್​​ಗೆ ತಂಡದಲ್ಲಿ ಚಾನ್ಸ್ ನೀಡ್ಬೇಕು ಅನ್ನೋ ಆಗ್ರಹ ಕೇಳಿ ಬಂದಿದೆ.

ಇದನ್ನೂ ಓದಿ:ದ್ರಾವಿಡ್ ಯಾವತ್ತೂ ಇವರನ್ನು ಬೇಸರಗೊಳಿಸಿಲ್ಲ.. ಮತ್ತೊಮ್ಮೆ ಹೃದಯಗೆದ್ದ ಸಿಂಪಲ್​ ಮ್ಯಾನ್..!

ಗಿಲ್​ ಪ್ರದರ್ಶನ..!
ಶುಭ್​ಮನ್ ಗಿಲ್​​ ಶ್ರೀಲಂಕಾ ಎದುರಿನ ಏಕದಿನ ಸರಣಿಯಲ್ಲಿ 3 ಪಂದ್ಯಗಳಲ್ಲಿ ಕಾಣಿಸಿಕೊಂಡ್ರು. 19ರ ಎವರೇಜ್​ನಲ್ಲಿ ಜಸ್ಟ್​​ 57 ರನ್ ಗಳಿಸಿ ಟೀಕಾಕಾರರ ಬಾಯಿಗೆ ಆಹಾರವಾದ್ರು. ಒಂದೆಡೆ ಗಿಲ್​ ಹೀಗೆ ಲಂಕಾ ಸರಣಿಯಲ್ಲಿ ಮುಗ್ಗರಿಸ್ತಿದ್ರೆ ಜೈಸ್ವಾಲ್​​ ಸಿಕ್ಕ ಅವಕಾಶಗಳಲ್ಲಿ ಲೀಲಾಜಾಲವಾಗಿ ರನ್​ ಗಳಿಸ್ತಿದ್ದಾರೆ. ಫೈರಿ ಲೆಫ್ಟಿ ಬ್ಯಾಟರ್​ಗೆ ಏಕದಿನದಲ್ಲಿ ಕಣಕ್ಕಿಳಿಯುವ ಭಾಗ್ಯ ಸಿಕ್ಕಿಲ್ಲ ನಿಜ. ಟೆಸ್ಟ್ ಹಾಗೂ ಟಿ20 ಕ್ರಿಕೆಟ್​ನಲ್ಲಿ ಇಂಪ್ರೆಸ್ಸಿವ್ ಆಟವಾಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಜೈಸ್ವಾಲ್​​​..!
ಯಶಸ್ವಿ ಜೈಸ್ವಾಲ್ ಇವರೆಗೆ 9 ಟೆಸ್ಟ್​​ ಪಂದ್ಯಗಳನ್ನಾಡಿದ್ದು, 1028 ರನ್​ ಚಚ್ಚಿದ್ದಾರೆ. ಇದ್ರಲ್ಲಿ ಅಮೋಘ 3 ಶತಕ ಹಾಗೂ 4 ಅರ್ಧಶತಕ ಸೇರಿಕೊಂಡಿವೆ. ಇನ್ನೂ ಟಿ20 ಕ್ರಿಕೆಟ್​ನಲ್ಲಿ ಜೈಸ್ವಾಲ್​ ರನ್ ಭರಾಟೆ ಜೋರಾಗಿದೆ. ಆಡಿದ 23 ಪಂದ್ಯಗಳಿಂದ 723 ರನ್​ ಗಳಿಸಿದ್ದಾರೆ. 5 ಅರ್ಧಶತಕದ ಜೊತೆ 1 ಸೆಂಚುರಿ ಮೂಡಿ ಬಂದಿದೆ. ಈ ಇಂಪ್ರೆಸ್ಸಿವ್​​ ಟ್ರ್ಯಾಕ್​ ರೆಕಾರ್ಡ್​​ ಅಷ್ಟೇ ಅಲ್ಲ. ಮುಂಬರೋ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಿಲ್​​ ಬದಲು ಜೈಸ್ವಾಲ್​​​​​​​​​​​​ ಆರಂಭಿಕನಾಗಿ ಆಡಿದ್ರೆ ತಂಡಕ್ಕೆ ಹೆಚ್ಚು ಲಾಭವಾಗಲಿದೆ.

ಇದನ್ನೂ ಓದಿ:ನೀರಜ್ ಚೋಪ್ರಾ ಕೋಟಿ ಕೋಟಿ ಆಸ್ತಿ ಒಡೆಯ.. ಚಿನ್ನ ಗೆದ್ದ ನದೀಮ್ ಬಳಿ ಎಷ್ಟು ಕೋಟಿ ಆಸ್ತಿ ಇದೆ..?

ಜೈಸ್ವಾಲ್​ ಉತ್ತಮ ಆಯ್ಕೆ ಏಕೆ..?

  • ಅಗ್ರೆಸ್ಸಿವ್​ ಬ್ಯಾಟರ್​​, ಪವರ್​​ ಪ್ಲೇ ಸದುಪಯೋಗ
  • ಲೆಫ್ಟ್​-ರೈಟ್​ ಕಾಂಬಿನೇಷನ್​​ನಿಂದ ಒತ್ತಡ ಹೇರಬಹುದು
  • ಜೈಸ್ವಾಲ್​​ ಆಡಿದ್ರೆ ರೋಹಿತ್ ಒತ್ತಡ ಕಮ್ಮಿ ಆಗಲಿದೆ
  • ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಇದೆ
  • ನಿರ್ಭೀತ ಆಟವಾಡಿ ಪಂದ್ಯ ಗತಿಯನ್ನೇ ಬದಲಿಸಬಲ್ಲರು

ಈ ಎಲ್ಲಾ ಕಾರಣಗಳಿಂದ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕ್ಯಾಪ್ಟನ್ ರೋಹಿತ್ ಜೊತೆ ಜೈಸ್ವಾಲ್​​ ಇನ್ನಿಂಗ್ಸ್ ಆರಂಭಿಸಿದ್ರೆ ತಂಡಕ್ಕೆ ಹೆಚ್ಚು ಲಾಭವಿದೆ. ಈ ಸತ್ಯವನ್ನ ಟೀಮ್ ಮ್ಯಾನೇಜ್​ಮೆಂಟ್​​​​​​ ಅರ್ಥ ಮಾಡಿಕೊಳ್ಳುತ್ತಾ? ಗಿಲ್​​​​​​​​​​​​ಗೆ ಕೊಕ್​ ಕೊಟ್ಟು ಜೈಸ್ವಾಲ್​​ಗೆ ಬಹುಪರಾಕ್ ಅನ್ನುತ್ತಾ.? ಅನ್ನೋದನ್ನ ಕಾದು ನೋಡೋಣ.

ಇದನ್ನೂ ಓದಿ:ಬೂಮ್ರಾ ಮೇಲೆ ಪ್ರೀತಿಯ ಬಾಣ ಎಸೆದ ಬಾಲಿವುಡ್ ಬ್ಯೂಟಿ.. ಯಾರ್ಕರ್ ಕಿಂಗ್​ಗೆ ಈಕೆ ಬೋಲ್ಡ್ ಆಗಿದ್ದೇಗೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಲ್ಲಾಡುತ್ತಿದೆ ಗಿಲ್ ಸ್ಥಾನ.. ಯಂಗ್​ ಗನ್​ನಿಂದ ಭಾರೀ ಫೈಟ್.. ಬಿಸಿಸಿಐ ಕೊಕ್ ಕೊಟ್ಟರೂ ಅಚ್ಚರಿ ಇಲ್ಲ!

https://newsfirstlive.com/wp-content/uploads/2024/04/Shubhman_Gill.jpg

Load More