newsfirstkannada.com

ಕ್ರಿಕೆಟ್ ಪ್ರೇಮಿಗಳಿಗೆ ಲಾಟರಿ! 50 ರೂಪಾಯಿಂದ ಟಿಕೆಟ್ ಆರಂಭ.. ಊಟ, ಚಹಾ ಎಲ್ಲಾ ಸಿಗುತ್ತೆ..!

Share :

Published August 13, 2024 at 1:52pm

    ಈ ಮೈದಾನದಲ್ಲಿ 50 ರೂಪಾಯಿ ಕೊಟ್ಟರೆ ಪಂದ್ಯ ವೀಕ್ಷಿಸಬಹುದು!

    ಸ್ಟೇಡಿಯಂ ಸಂಪೂರ್ಣ ಭರ್ತಿಗೆ ದಿಟ್ಟ ಹೆಜ್ಜೆಯಿಟ್ಟ ಕ್ರಿಕೆಟ್ ಮಂಡಳಿ

    ಇನ್ನೊಂದು ಸ್ಟೇಡಿಯಂನಲ್ಲಿ 200 ರೂಪಾಯಿಗೆ ಸಿಗಲಿದೆ ಪಾಸ್

ಬಾಂಗ್ಲಾದೇಶ ಕ್ರಿಕೆಟ್ ತಂಡ ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಎರಡು ತಂಡಗಳ ನಡುವೆ 2 ಟೆಸ್ಟ್ ಪಂದ್ಯಗಳನ್ನು ನಡೆಯಲಿವೆ. ಈ ಸರಣಿಯು ಆಗಸ್ಟ್ 21 ರಿಂದ ಪ್ರಾರಂಭವಾಗಲಿದ್ದು, ಮೊದಲ ಪಂದ್ಯ ರಾವಲ್ಪಿಂಡಿಯಲ್ಲಿ ಮತ್ತು ಎರಡನೇ ಪಂದ್ಯ ಕರಾಚಿಯಲ್ಲಿ ನಡೆಯಲಿದೆ.

ಈ ಟೂರ್ನಿಯ ಆತಿಥ್ಯ ವಹಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒಂದು ವಿಶಿಷ್ಠ ನಿರ್ಧಾರ ತೆಗೆದುಕೊಂಡಿದೆ. ಟಿಕೆಟ್ ದರವನ್ನು ಅಚ್ಚರಿ ರೀತಿಯಲ್ಲಿ ಇಳಿಸಲು ಪ್ರಯತ್ನಿದೆ. ಮೈದಾನ ಭರ್ತಿ ಮಾಡಲು ಪ್ಲಾನ್ ಮಾಡಿರುವ ಪಿಸಿಬಿ, ಅಗ್ಗದ ಟಿಕೆಟ್ ದರ ನಿಗದಿ ಮಾಡಿದೆ. ಕೇವಲ 50 ರೂಪಾಯಿ ಆಗಿದ್ದು, ಸ್ಟೇಡಿಯಂನಲ್ಲಿರುವ ಸ್ಥಳಗಳ ಆಧಾರದ ಮೇಲೆ ಬೆಲೆ ಹೆಚ್ಚು ಮಾಡುತ್ತಿದೆ. ಕರಾಚಿಯಲ್ಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಿಕೆಟ್ ಬೆಲೆ 50 ರೂಪಾಯಿಯಿಂದ ಪ್ರಾರಂಭಿಸುತ್ತಿದೆ. 50 ರೂಪಾಯಿಯಿಂದ 2.5 ಲಕ್ಷದವರೆಗೂ ದರವನ್ನು ನಿಗದಿ ಮಾಡಿದೆ.

ಇದನ್ನೂ ಓದಿ:ಅಲ್ಲಾಡುತ್ತಿದೆ ಗಿಲ್ ಸ್ಥಾನ.. ಯಂಗ್​ ಗನ್​ನಿಂದ ಭಾರೀ ಫೈಟ್.. ಬಿಸಿಸಿಐ ಕೊಕ್ ಕೊಟ್ಟರೂ ಅಚ್ಚರಿ ಇಲ್ಲ!

ಊಟ ಮತ್ತು ಚಹಾ ಸೌಲಭ್ಯ
ಇನ್ನು ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಹೇಳೋದಾದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಇಲ್ಲಿ ಟಿಕೆಟ್ ದರ 200 ರೂಪಾಯಿಯಿಂದ ಆರಂಭವಾಗುತ್ತದೆ. ಅಭಿಮಾನಿಗಳಿಗೆ ಗ್ಯಾಲರಿ ಪಾಸ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಗ್ಯಾಲರಿ ಪಾಸ್‌ನ ಬೆಲೆಯನ್ನು 2,800 ರೂಪಾಯಿಗೆ ಇರಿಸಲಾಗಿದೆ. ಅದನ್ನು ಖರೀದಿಸುವ ವ್ಯಕ್ತಿಗೆ ಊಟ ಮತ್ತು ಚಹಾದ ಸೌಲಭ್ಯ ಇರಲಿದೆ. ಪ್ಲಾಟಿನಂ ಬಾಕ್ಸ್‌ನಲ್ಲಿ ಕುಳಿತು ಪಂದ್ಯವನ್ನು ಆನಂದಿಸೋರಿಗೆ 12,500 ರೂಪಾಯಿ ಇದೆ ಎಂದು ವರದಿಯಾಗಿದೆ.

ಇದನ್ನೂ ಓದಿ:‘ಅಪ್ಪ, ಅಮ್ಮ ಕ್ಯಾನ್ಸರ್​ನಿಂದ ತೀರಿ ಹೋದರು..’ ಕುಗ್ಗಲಿಲ್ಲ ಛಲ ಬಿಡದೇ IAS ಅಧಿಕಾರಿಯಾದ ಛಲಗಾರ್ತಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ರಿಕೆಟ್ ಪ್ರೇಮಿಗಳಿಗೆ ಲಾಟರಿ! 50 ರೂಪಾಯಿಂದ ಟಿಕೆಟ್ ಆರಂಭ.. ಊಟ, ಚಹಾ ಎಲ್ಲಾ ಸಿಗುತ್ತೆ..!

https://newsfirstlive.com/wp-content/uploads/2024/08/KARACHI-STADIUM.jpg

Load More