newsfirstkannada.com

BCCI ಕಟ್ಟಪ್ಪಣೆಗೆ ಬೆಚ್ಚಿಬಿದ್ದ ಟೀಮ್​ ಇಂಡಿಯಾ ಸೂಪರ್ ಸ್ಟಾರ್ಸ್​.. ಕೊಹ್ಲಿ, ರೋಹಿತ್​ಗೂ ಶಾಕ್..!

Share :

Published August 13, 2024 at 2:20pm

Update August 14, 2024 at 6:35am

    ಟೀಮ್​ ಇಂಡಿಯಾ ಸೂಪರ್​ ಸ್ಟಾರ್​ಗಳಿಗೆ ಹೊಸ ಟಾಸ್ಕ್

    ಇಶಾನ್​ ಕಿಶನ್​, ಶ್ರೇಯಸ್​​ ಅಯ್ಯರ್​ಗೆ ಲೈಫ್​ಲೈನ್​..!

    ಪೂಜಾರ-ರಹಾನೆ ಕರಿಯರ್​​ಗೆ ಕೊನೆಯ ಮೊಳೆ?

ಮುಂಬರೋ ಟೆಸ್ಟ್​ ಸೀಸನ್​ಗೆ ಟೀಮ್​ ಇಂಡಿಯಾ ಸಿದ್ಧತೆ ಸದ್ದಿಲ್ಲದೆ ಆರಂಭವಾಗಿದೆ. ಲಂಕಾ ಪ್ರವಾಸ ಅಂತ್ಯದ ಬಳಿಕ ರಿಲ್ಯಾಕ್ಟ್​ ಮೂಡ್​ಗೆ ಜಾರಲು ಸಜ್ಜಾಗಿದ್ದ ಆಟಗಾರರಿಗೆ ಬಿಸಿಸಿಐ ಶಾಕ್​ ಕೊಟ್ಟಿದೆ. ಸೆಲೆಕ್ಟರ್​ ಅಜಿತ್​ ಅಗರ್ಕರ್​, ಕೋಚ್​ ಗೌತಮ್​ ಗಂಭೀರ್​ ಹೊಸ ಟಾಸ್ಕ್​ ನೀಡ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಟೀಮ್​ ಇಂಡಿಯಾ ಸ್ಟಾರ್​​​ಗಳೆಲ್ಲಾ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಶೀಘ್ರದಲ್ಲೇ ಕಣಕ್ಕಿಳಿಯಲಿದ್ದಾರೆ.

ಶ್ರೀಲಂಕಾ ಪ್ರವಾಸ ಅಂತ್ಯದ ಬಳಿಕ ಸುದೀರ್ಘ ವಿಶ್ರಾಂತಿಗೆ ಜಾರೋ ಲೆಕ್ಕಾಚಾರದಲ್ಲಿದ್ದ, ಟೀಮ್​ ಇಂಡಿಯಾ ಕ್ರಿಕೆಟರ್ಸ್​ ಪ್ಲಾನ್ ಎಲ್ಲಾ ತಲೆ ಕೆಳಗಾಗಿದೆ. ರಿಲ್ಯಾಕ್ಸ್​ ಮೂಡ್​ಗೆ ಜಾರೋ ಕನವರಿಕೆಯಲ್ಲಿದ್ದ ಆಟಗಾರರಿಗೆ ಬಿಸಿಸಿಐ ಬಾಸ್​ಗಳು ಶಾಕ್​ ಕೊಟ್ಟಿದ್ದಾರೆ. ಟೀಮ್​ ಮ್ಯಾನೇಜ್​ಮೆಂಟ್​, ಸೆಲೆಕ್ಷನ್​ ಕಮಿಟಿ ಜೊತೆ ಹೈವೋಲ್ಟೆಜ್​ ಸಭೆ ನಡೆಸಿರೋ ಬಿಸಿಸಿಐ ಬಾಸ್​ಗಳು ಆಟಗಾರರಿಗೆ ಹೊಸ ಟಾಸ್ಕ್​ ನೀಡಿದ್ದಾರೆ.

ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳಿಗೆ ಲಾಟರಿ! 50 ರೂಪಾಯಿಂದ ಟಿಕೆಟ್ ಆರಂಭ.. ಊಟ, ಚಹಾ ಎಲ್ಲಾ ಸಿಗುತ್ತೆ..!

ಟೀಮ್​ ಇಂಡಿಯಾ ಸೂಪರ್​ ಸ್ಟಾರ್​ಗಳಿಗೆ ಹೊಸ ಟಾಸ್ಕ್​​
ಬಾಂಗ್ಲಾ ಎದುರಿನ ಟೆಸ್ಟ್​ ಸರಣಿಗೂ ಮುನ್ನ ವಿಶ್ರಾಂತಿಗೆ ಜಾರೋ ಲೆಕ್ಕಾಚಾರದಲ್ಲಿದ್ದ ಟೀಮ್​ ಇಂಡಿಯಾ ಸೂಪರ್​ ಸ್ಟಾರ್​ಗಳಿಗೆ ಬಿಸಿಸಿಐ ಬಾಸ್​ಗಳು ಡೊಮೆಸ್ಟಿಕ್​ ಕ್ರಿಕೆಟ್​ ಆಡುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಟೆಸ್ಟ್​ ಸರಣಿಗಳನ್ನ ಟೀಮ್​ ಇಂಡಿಯಾ ಆಡಲಿದೆ. ಇದ್ರ ಸಿದ್ಧತೆಯ ಭಾಗವಾಗಿ ಸಪ್ಟೆಂಬರ್​ 5ರಿಂದ ಆರಂಭವಾಗಲಿರೋ ದುಲೀಪ್​ ಟ್ರೋಫಿ ಟೂರ್ನಿಯಲ್ಲಿ ಆಡುವಂತೆ ಭಾರತ ತಂಡದ ಸ್ಟಾರ್​​ಗಳಿಗೆ ಬಿಸಿಸಿಐ ಸೂಚಿಸಿದೆ.

ಹಾರ್ದಿಕ್​, ಬೂಮ್ರಾಗೆ ಟೂರ್ನಿಯಿಂದ ವಿನಾಯಿತಿ
ದುಲೀಪ್​ ಟ್ರೋಫಿ ಟೂರ್ನಿಯಿಂದ ಆಲ್​​ಫಾರ್ಮೆಟ್​ ಪ್ಲೇಯರ್​​, ವೇಗಿ ಜಸ್​ಪ್ರಿತ್​ ಬೂಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ತಿರ್ಮಾನಿಸಿದೆ. ಟೆಸ್ಟ್​ನಿಂದ ದೂರ ಉಳಿದಿರೋದ್ರಿಂದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಗೂ ವಿನಾಯಿತಿ ನೀಡಲಾಗಿದೆ. ರೋಹಿತ್​ ಶರ್ಮಾ, ವಿರಾಟ್​​ ಕೊಹ್ಲಿಗೆ ಆಡಬೇಕಾ? ಬೇಡ್ವಾ? ಅನ್ನೋ ನಿರ್ಧಾರವನ್ನ ನೀವೇ ತೆಗೆದುಕೊಳ್ಳಿ ಎಂದಿದೆ. ಇನ್ನುಳಿದಂತೆ, ಉಳಿದೆಲ್ಲಾ ಆಟಗಾರರಿಗೆ ದುಲೀಪ್​​​ ಟ್ರೋಫಿ ಟೂರ್ನಿಯ ಮೊದಲ ಹಂತದ ಪಂದ್ಯಗಳನ್ನಾಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ:ಅಲ್ಲಾಡುತ್ತಿದೆ ಗಿಲ್ ಸ್ಥಾನ.. ಯಂಗ್​ ಗನ್​ನಿಂದ ಭಾರೀ ಫೈಟ್.. ಬಿಸಿಸಿಐ ಕೊಕ್ ಕೊಟ್ಟರೂ ಅಚ್ಚರಿ ಇಲ್ಲ!

ಸ್ಟಾರ್​​ಗಳು ಅಖಾಡಕ್ಕೆ, ಬೆಂಗಳೂರಿಗೆ ಪಂದ್ಯ ಶಿಫ್ಟ್​
ಟೆಸ್ಟ್​ ಸರಣಿಗಳಿಗೆ ಸಿದ್ಧತೆಯ ಭಾಗವಾಗಿ ಸೆಲೆಕ್ಟರ್​ ಅಜಿತ್ ಅಗರ್ಕರ್​, ಕೋಚ್​ ಗೌತಮ್​ ಗಂಭೀರ್ ಮಾಡಿರೋ​ ತಿರ್ಮಾನವನ್ನ ಬಿಸಿಸಿಐ, ಆಟಗಾರರಿಗೆ ತಿಳಿಸಿದೆ. ಕೆ.ಎಲ್​ ರಾಹುಲ್​, ಶುಭ್​ಮನ್​ ಗಿಲ್​, ಆರ್​.ಅಶ್ವಿನ್​, ರವೀಂದ್ರ ಜಡೇಜಾ, ಕುಲ್ದೀಪ್​ ಯಾದವ್​ ​​ಹಾಗೂ ಅಕ್ಷರ್​ ಪಟೇಲ್​ ಸೇರಿದಂತೆ ಟೆಸ್ಟ್​ ತಂಡದ ಖಾಯಂ ಆಟಗಾರರಿಗೆ ಬಿಸಿಸಿಐ ಈ ಬಗ್ಗೆ ಸೂಚನೆಯನ್ನೂ ಕಳುಹಿಸಿದೆ. ಆಟಗಾರರು ಕೂಡ ಆಡಲು ಒಕೆ ಅಂದಿದ್ದು, ಹೀಗಾಗಿ ಅನಂತಪುರಂನಿಂದ ಬೆಂಗಳೂರಿಗೆ ಪಂದ್ಯಗಳನ್ನ ಶಿಫ್ಟ್​ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.

ಇಶಾನ್​ ಕಿಶನ್​, ಶ್ರೇಯಸ್​​ ಅಯ್ಯರ್​ಗೆ ಲೈಫ್​ಲೈನ್​
ಕಳೆದ ರಣಜಿ ಸೀಸನ್​ ವೇಳೆ ಬಿಸಿಸಿಐ ಸೂಚನೆಯನ್ನ ದಿಕ್ಕರಿಸಿದ್ದ ಇಶಾನ್​ ಕಿಶನ್, ಶ್ರೇಯಸ್​ ಅಯ್ಯರ್​ಗೆ ದುಲೀಪ್​​​ ಟ್ರೋಫಿಯಲ್ಲಿ ಅವಕಾಶ ನೀಡಲು ಬಿಗ್​ಬಾಸ್​ಗಳು ತೀರ್ಮಾನಿಸಿದ್ದಾರೆ. ರಣಜಿ ಪಂದ್ಯವನ್ನ ಸ್ಕಿಪ್​ ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಇಬ್ಬರೂ, ಸೆಂಟ್ರಲ್​ ಕಾಂಟ್ರ್ಯಾಕ್ಟ್​ ಲಿಸ್ಟ್​ನಿಂದ ಔಟ್​​ ಆಗಿದ್ದರು. ಬಳಿಕ ಪರ್ಫಾಮೆನ್ಸ್​ ಆಧಾರದಲ್ಲಿ ಶ್ರೇಯಸ್​ ಅಯ್ಯರ್​ ಟೀಮ್​ ಇಂಡಿಯಾ ರೀ ಎಂಟ್ರಿ ಕೊಟ್ಟಿದ್ದಾರೆ. ಇಶಾನ್​ ಕಿಶನ್​ ಪಾಲಿಗೆ ತಂಡದ ಡೋರ್​ ಇನ್ನೂ ತೆರೆದಿಲ್ಲ. ಇದೀಗ ದುಲೀಪ್​​​ ಟ್ರೋಫಿ ಟೂರ್ನಿಯಲ್ಲಿ ಆಡಿ, ಇಂಪ್ರೆಸ್ಸಿವ್​ ಪರ್ಫಾಮೆನ್ಸ್​ ನೀಡಿದ್ರೆ ಬಾಗಿಲು ತೆರಯಲಿದೆ.

ಇದನ್ನೂ ಓದಿ:‘ಅಪ್ಪ, ಅಮ್ಮ ಕ್ಯಾನ್ಸರ್​ನಿಂದ ತೀರಿ ಹೋದರು..’ ಕುಗ್ಗಲಿಲ್ಲ ಛಲ ಬಿಡದೇ IAS ಅಧಿಕಾರಿಯಾದ ಛಲಗಾರ್ತಿ..!

ಪೂಜಾರ – ರಹಾನೆ ಕರಿಯರ್​​ಗೆ ಕೊನೇ ಮೊಳೆ
ಟೀಮ್​ ಇಂಡಿಯಾದ ಸೀನಿಯರ್​ಗಳಾದ ಚೇತೇಶ್ವರ್​ ಪೂಜಾರ, ಅಜಿಂಕ್ಯಾ ರಹಾನೆಯನ್ನ ಬಿಸಿಸಿಐ ಹಾಗೂ ಸೆಲೆಕ್ಷನ್​ ಕಮಿಟಿ ದುಲೀಪ್​​​ ಟ್ರೋಫಿಯ ಭಾಗವಾಗಿ ಪರಿಗಣಿಸಿಲ್ಲ. ಇದ್ರೊಂದಿಗೆ ಇಬ್ಬರ ಕರಿಯರ್​ಗೆ ಬಹುತೇಕ ಕೊನೆ ಮೊಳೆ ಬಿದ್ದಂತಾಗಿದೆ. ಇವ್ರ ಬದಲಾಗಿ ಯುವ ಆಟಗಾರ ಸರ್ಫರಾಜ್​ ಖಾನ್​, ದೃವ್​ ಜುರೇಲ್​ ಮೇಲೆ ಬಿಗ್​ಬಾಸ್​ಗಳ ಕಣ್ಣು ನೆಟ್ಟಿದೆ. ಇಬ್ಬರೂ ಯುವ ಆಟಗಾರರಿಗೆ ದುಲೀಪ್​ ಟ್ರೋಫಿ ಆಡುವಂತೆ ಸೂಚಿಸಲಾಗಿದೆ.

ಮುಂದಿನ ದಿನಗಳಲ್ಲಿ ಟೀಮ್​ ಇಂಡಿಯಾ ಸಾಲು ಸಾಲು ಟೆಸ್ಟ್​ ಸರಣಿಗಳನ್ನು ಆಡಲಿದೆ. ಬಾಂಗ್ಲಾ ಸರಣಿ ಬಳಿಕ ನ್ಯೂಜಿಲೆಂಡ್​, ಆ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್​ ಪಂದ್ಯಗಳನ್ನ ಆಡಲಿದೆ. ಕಳೆದ ಕೆಲ ತಿಂಗಳಿಂದ ವೈಟ್​ ಬಾಲ್​ ಫಾರ್ಮೆಟ್​​ಗೆ ಟೀಮ್​ ಇಂಡಿಯಾ ಸ್ಟಾರ್ಸ್​ ಸೀಮಿತವಾಗಿದ್ದಾರೆ. ಇದೀಗ ರೆಡ್​ ಬಾಲ್​ ಫಾರ್ಮೆಟ್​ಗೆ ಶಿಫ್ಟ್​ ಆಗಲು ದುಲೀಫ್​ ಟ್ರೋಫಿ ಸಹಾಯ ಮಾಡಲಿದೆ. ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​ ದೃಷ್ಟಿಯಿಂದ ಮುಂಬರೋ ಎಲ್ಲಾ ಟೆಸ್ಟ್​ ಪಂದ್ಯಗಳು ಭಾರತದ ಪಾಲಿಗೆ ಮೋಸ್ಟ್ ಇಂಪಾರ್ಟೆಂಟ್​.! ಇದೆಲ್ಲವನ್ನ ಗಮನದಲ್ಲಿರಿಸಿಕೊಂಡು ಬಿಸಿಸಿಐ ಈ ತೀರ್ಮಾನ ಮಾಡಿದೆ.

ಇದನ್ನೂ ಓದಿ:ಬೂಮ್ರಾ ಮೇಲೆ ಪ್ರೀತಿಯ ಬಾಣ ಎಸೆದ ಬಾಲಿವುಡ್ ಬ್ಯೂಟಿ.. ಯಾರ್ಕರ್ ಕಿಂಗ್​ಗೆ ಈಕೆ ಬೋಲ್ಡ್ ಆಗಿದ್ದೇಗೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

BCCI ಕಟ್ಟಪ್ಪಣೆಗೆ ಬೆಚ್ಚಿಬಿದ್ದ ಟೀಮ್​ ಇಂಡಿಯಾ ಸೂಪರ್ ಸ್ಟಾರ್ಸ್​.. ಕೊಹ್ಲಿ, ರೋಹಿತ್​ಗೂ ಶಾಕ್..!

https://newsfirstlive.com/wp-content/uploads/2024/07/ROHIT_VIRAT-2-1.jpg

Load More