newsfirstkannada.com

ಕೌನ್​ ಬನೇಗಾ ಕರೋಡಪತಿ.. ₹25 ಲಕ್ಷದ ಮಹಾಭಾರತದ ಪ್ರಶ್ನೆಗೆ ಉತ್ತರಿಸಲಾಗದ ಬೆಂಗಳೂರಿಗ; ಏನದು?

Share :

Published August 13, 2024 at 9:49pm

    ಕೆಬಿಸಿಯ 16ನೇ ಆವೃತ್ತಿಯ ಮೊದಲ ಸ್ಪರ್ಧಿಯೇ ನಮ್ಮ ಬೆಂಗಳೂರಿಗ

    25 ಲಕ್ಷ ರೂಪಾಯಿ ಪ್ರಶ್ನೆಗೆ ತಗಲಾಕಿಕೊಂಡಿದ್ದು ಹೇಗೆ ರಾಜ್ಯದ ಉತ್ಕರ್ಷ್​

    ಕೌನ್​ ಬನೇಗಾ ಕರೋಡಪತಿಯಲ್ಲಿ ಕೇಳಿದ ಮಹಾಭಾರತದ ಪ್ರಶ್ನೆ ಯಾವ್ದು?

ಮುಂಬೈ: ಹಿಂದಿಯ ಕೌನ್​ ಬನೆಗಾ ಕರೋಡ್​ಪತಿಯ 16ನೇ ಸೀಸನ್ ಭರ್ಜರಿಯಾಗಿ ಆರಂಭವಾಗಿದೆ. ಆರಂಭದ ಸಂಚಿಕೆಯಲ್ಲಿ ಬಾಲಿವುಡ್​ನ ಷಹನ್ ಷಾ ಅಮಿತಾಬ್​ ಬಚ್ಚನ್ ಎಂದಿನಂತೆ ತಮ್ಮದೇ ವೈಖರಿಯ ನಿರೂಪಣೆಯೊಂದಿಗೆ ಕಾರ್ಯಕ್ರಮ ಶುರು ಮಾಡಿದರು. ಬೆಂಗಳೂರಿನ ಮೂಲದ ಉತ್ಕರ್ಷ ಭಕ್ಷಿ ಅನ್ನೋರೇ ಮೊದಲ ಸ್ಪರ್ಧಿಯಾಗಿ ಅಮಿತಾಬ್ ಎದುರು ಕುಳಿತುಕೊಂಡಿದ್ದರು.

ಇದನ್ನೂ ಓದಿ: ಮಹಿಳೆಯ ನಗ್ನ ಫೋಟೋ ಬರುತ್ತೆ.. ಆಮೇಲೆ ನಿಮ್ಮ ಬ್ರೈನ್ ಕೂಡ ಹೈಜಾಕ್ ಆಗುತ್ತೆ.. ಹುಷಾರಾಗಿರಿ!

ಉತ್ಕರ್ಷ್ ಭಕ್ಷಿಯವರ ಅದ್ಭುತ ಸಾಮಾನ್ಯ ಜ್ಞಾನ ಕಂಡು ಒಂದು ಹಂತಕ್ಕೆ ಅಮಿತಾಬ್ ಬಚ್ಚನ್ ಅವರೇ ಬೆಕ್ಕಸ ಬೆರಗಾಗಿದ್ದರು. ಮೊದಲ ಪ್ರಶ್ನೆಯಿಂದಲೇ 25 ಲಕ್ಷ ರೂಪಾಯಿ ಮೊತ್ತದ ಪ್ರಶ್ನೆಯವರೆಗೂ ಸರಾಗವಾಗಿ ಸಾಗಿದ ಉತ್ಕರ್ಷ್ 25 ಲಕ್ಷ ರೂಪಾಯಿಯ ಪ್ರಶ್ನೆಯೊಂದರಲ್ಲಿ ಸಿಲುಕಿಕೊಂಡು ಬಿಟ್ಟರು. 25 ಲಕ್ಷ ರೂಪಾಯಿಯ ಆ ಒಂದು ಪ್ರಶ್ನೆ ಮಹಾಕಾವ್ಯ ಮಹಾಭಾರತಕ್ಕೆ ಸಂಬಂಧಿಸಿತ್ತು.

ಏನದು ಮಹಾಭಾರತಕ್ಕೆ ಸಂಬಂಧಿಸಿದ ಪ್ರಶ್ನೆ?

ಕೌನ್ ಬನೇಗಾ ಕರೋಡಪತಿಯಲ್ಲಿ ಸರಾಗವಾಗಿ ಆಡುತ್ತಾ ಬಂದಿದ್ದ ಉತ್ಕರ್ಷ, 25 ಲಕ್ಷ ಗೆಲ್ಲಬೇಕಾದರೆ ಮಹಾಭಾರತಕ್ಕೆ ಸಂಬಂಧಿಸಿದ ಆ ಒಂದು ಪ್ರಶ್ನೆಗೆ ಉತ್ತರಿಸಬೇಕಿತ್ತು. ಹಾಗಿದ್ರೆ ಆ ಪ್ರಶ್ನೆ ಏನು ಅನ್ನೋ ಕುತೂಹಲ ನಿಮಗೂ ಇರಬಹುದು. ಆ ಪ್ರಶ್ನೆ ಇದ್ದಿದ್ದು ಹೀಗೆ ‘ಭೀಷ್ಮನನ್ನು ಹತ್ಯೆ ಮಾಡಲು ಅಂಬೆಗೆ ಧರಿಸಲು ಮಾಲೆಯನ್ನು ಉಡುಗೊರೆಯಾಗಿ ಕೊಟ್ಟ ದೇವರು ಯಾರು? ಅಂತ. ಇದಕ್ಕೆ ಉತ್ತರ ಗೊತ್ತಾಗದೆ ಉತ್ಕರ್ಷ್​ ಕೊಂಚ ಕಾಲ ವಿಚಲಿತರಾದರು.

ಇದನ್ನೂ ಓದಿ: ಮತ್ತೊಂದು ಭೀಕರ ದುರಂತ.. ಪ್ರಸಿದ್ಧ ಸಿದ್ದೇಶ್ವರನಾಥ್ ಮಂದಿರದಲ್ಲಿ ಕಾಲ್ತುಳಿತ; ಜೀವ ಕಳೆದುಕೊಂಡವರೆಷ್ಟು?

ಕೊನೆಗೆ ಫೋನ್ ಆಫ್ ಫ್ರೆಂಡ್ ಆಯ್ಕೆಯನ್ನು ಮಾಡಿಕೊಂಡರು. ಅವರ ಮಿತ್ರನಿಗೆ ವಿಡಿಯೋ ಕಾಲ್ ಮಾಡಿ ಕೇಳಿದಾಗ ಅವರು ಭಗವಾನ್ ಶಿವ ಎಂಬ ಉತ್ತರವನ್ನು ಕೊಟ್ಟರು ಕೂಡ ಅದು ಖಚಿತವಲ್ಲ ಎಂದು ಹೇಳಿದ್ದರು. ಕೊನೆಗೆ ಉತ್ಕರ್ಷ್ ಡಬಲ್ ಡಿಪ್ ಲೈಫ್​ಲೈನ್ ಆಯ್ಕೆ ಮಾಡಿಕೊಂಡರು. ಆಗ ಅವರು ಒಂದೇ ಪ್ರಶ್ನೆಗೆ ಎರಡು ಉತ್ತರ ನೀಡಬೇಕಿತ್ತು. ಆಗ ಅವರು ಮೊದಲು ಭಗವಾನ್ ಶಿವ ಎಂದು ಹೇಳಿದಾಗ ಅದು ತಪ್ಪಾಗಿತ್ತು. ಎರಡನೇಯದು ಭಗವಾನ್ ವಾಯು ಎಂದು ಹೇಳಿದ್ರು, ಆ ಉತ್ತರವೂ ಕೂಡ ತಪ್ಪಾಗಿತ್ತು. 25 ಲಕ್ಷ ರೂಪಾಯಿಯ ಗೆಲುವಿನ ಹತ್ತಿರಕ್ಕೆ ಬಂದು ಉತ್ಕರ್ಷ್​ ಕೊನೆಯ ಘಳಿಗೆಯಲ್ಲಿ ಸೋತು ಹೋದರು.

25 ಲಕ್ಷ ರೂಪಾಯಿಯ ಆ ಪ್ರಶ್ನೆಯ ಉತ್ತರ ಏನಾಗಿತ್ತು.?
ತಮ್ಮ ಮುಂದಿರುವ ಎಲ್ಲಾ ಲೈಫ್​ಲೈನ್​ ಆಯ್ಕೆಗಳನ್ನು ಕಳೆದುಕೊಂಡು 25 ಲಕ್ಷದವರೆಗೆ ಬಂದಿದ್ದ ಉತ್ಕರ್ಷ್ ಕೊನೆಗೆ 3.20 ಲಕ್ಷ ರೂಪಾಯಿ ಗಳಿಸಿಕೊಂಡು ವಾಪಸ್ ಆದರು. ಕೊನೆಗೆ ಉತ್ತರ ಏನು ಅನ್ನೋದರ ಕುತೂಹಲ ಅಲ್ಲಿ ನೆರೆದಿದ್ದ ಜನರಿಗೆ ಹಾಗೂ ವೀಕ್ಷಕರಿಗೂ ಇತ್ತು. ಕೊನೆಗೆ ಅಮಿತಾಬ್ ಬಚ್ಚನ್ ಸರಿಯಾದ ಉತ್ತರ ಹೇಳಿದ್ದು ಲಾರ್ಡ್‌ ಕಾರ್ತಿಕೇಯ, ಕಾರ್ತಿಕೇಯನೇ ಮಹಾಭಾರತದ ಯುದ್ಧದ ಸಮಯದಲ್ಲಿ ಅಂಬೆಗೆ ಒಂದು ಮಾಲೆಯನ್ನು ಉಡುಗೊರೆಯಾಗಿ ಕೊಡುತ್ತಾನೆ.

ಇದನ್ನೂ ಓದಿ: ವೈದ್ಯೆ ರೇಪ್‌ & ಮರ್ಡರ್ ಕೇಸ್ ಸಿಬಿಐಗೆ.. ಕೊಲ್ಕತ್ತಾ ಹೈಕೋರ್ಟ್‌ ಮಹತ್ವದ ಸೂಚನೆ; ಹೇಳಿದ್ದೇನು?

ಈ ಮಾಲೆಯನ್ನು ಹಾಕಿಕೊಂಡು ಭೀಷ್ಮನ ವಿರುದ್ಧ ನಿಂತವರು ಅವನನ್ನು ಸಂಹರಿಸುತ್ತಾರೆ ಎಂಬ ವರದೊಂದಿಗೆ ಆ ಮಾಲೆಯನ್ನು ಅಂಬೆಗೆ ನೀಡಿರುತ್ತಾರೆ. ಮರುಜನ್ಮದಲ್ಲಿ ಅದೇ ಮಾಲೆಯನ್ನು ಹಾಕಿಕೊಂಡು ಹೋದ ಅಂಬೆ ಅಥವಾ ಶಿಖಂಡಿನಿ, ಕುರುಕ್ಷೇತ್ರದಲ್ಲಿ ಅರ್ಜುನ ಎದುರು ಅವನ ರಥದಲ್ಲಿ ನಿಲ್ಲುತ್ತಾಳೆ. ಶಿಖಂಡಿನಿಯನ್ನು ಕಂಡ ಭೀಷ್ಮ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸುತ್ತಾನೆ. ಶಿಖಂಡಿನಿ ಹಿಂದಿನಿಂದಲೇ ಅರ್ಜುನ ಬಾಣ ಬಿಟ್ಟು ಭೀಷ್ಮನನ್ನು ಸಂಹರಿಸಿ, ತನ್ನ ಪಿತಾಮಹನನ್ನು ಶರಶಯ್ಯೆಯಲ್ಲಿ ಮಲಗಿಸುತ್ತಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೌನ್​ ಬನೇಗಾ ಕರೋಡಪತಿ.. ₹25 ಲಕ್ಷದ ಮಹಾಭಾರತದ ಪ್ರಶ್ನೆಗೆ ಉತ್ತರಿಸಲಾಗದ ಬೆಂಗಳೂರಿಗ; ಏನದು?

https://newsfirstlive.com/wp-content/uploads/2024/08/KBC-MAHABHART-QUSTION.jpg

Load More