newsfirstkannada.com

ಖಾಲಿ ಇರೋ ಜಾಬ್​ಗಳಿಗೆ ಆಯಿಲ್ ಇಂಡಿಯಾ ಲಿಮಿಟೆಡ್​ ಅರ್ಜಿ ಆಹ್ವಾನ.. ನೀವು ಟ್ರೈ ಮಾಡಿ..!

Share :

Published August 18, 2024 at 11:47am

    ಅಭ್ಯರ್ಥಿಗಳು ಹುದ್ದೆಗಾಗಿ ಯಾವ್ಯಾವ ಅರ್ಹತೆ ಹೊಂದಿರಬೇಕು?

    ಆಯ್ಕೆಯಾದ ಅಭ್ಯರ್ಥಿಗಳು ಕೂಡಲೇ ಹುದ್ದೆಗೆ ಸೇರಬೇಕು

    PUCಯ ಯಾವ ವಿಭಾಗದಲ್ಲಿ ವಿದ್ಯಾರ್ಥಿಗಳು ಪಾಸ್ ಆಗಿರಬೇಕು?

ಪಬ್ಲಿಕ್ ಹೆಲ್ತ್ ಅಸಿಸ್ಟೆಂಟ್‌ ನೇಮಕಾತಿಗಾಗಿ ಆಯಿಲ್ ಇಂಡಿಯಾ ಲಿಮಿಟೆಡ್ ಅರ್ಜಿಗಳನ್ನು ಆಹ್ವಾನ ಮಾಡಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು oil-india.comನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಪ್ಲೇ ಮಾಡಬಹುದಾಗಿದೆ.

ಅಭ್ಯರ್ಥಿಗಳು ಯಾವ್ಯಾವ ಅರ್ಹತೆ ಹೊಂದಿರಬೇಕು..?

  • ಅಭ್ಯರ್ಥಿಗಳು ದ್ವಿತಿಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಪಾಸ್ ಆಗಿರಬೇಕು
  • ಡಿಪ್ಲೋಮಾ ಅಥವಾ ಕಂಪ್ಯೂಟರ್​ ಅಪ್ಲಿಕೇಶನ್ ತರಬೇತಿ ಪ್ರಮಾಣಪತ್ರ ಇರಬೇಕು
  • MS Word, MS Excel, MS PowerPoint ಗಳ ಕುರಿತು ಜ್ಞಾನ ಹೊಂದಿರಬೇಕು
  • ರಾಜ್ಯ ಅಥವಾ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ 1 ವರ್ಷ ಕೆಲಸ ಮಾಡಿದ ಅನುಭವ ಇರಬೇಕು.
  • 21 ವರ್ಷದಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಪ್ಲೇ ಮಾಡಬಹುದಾಗಿದೆ.

ಆಯಿಲ್ ಇಂಡಿಯಾ ಲಿಮಿಟೆಡ್​ನ ಪಬ್ಲಿಕ್ ಹೆಲ್ತ್ ಅಸಿಸ್ಟೆಂಟ್‌ ಹುದ್ದೆಗಳು ಕಾಂಟ್ರಾಕ್ಟ್​ (ಒಪ್ಪಂದ) ಬೇಸ್ ಮೇಲೆ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ. 6 ತಿಂಗಳುಗಳವರೆಗೆ ಒಪ್ಪಂದ ಇರುತ್ತದೆ. ಈ ಅವಧಿಯನ್ನು ಇನ್ನು ವಿಸ್ತರಣೆ ಮಾಡಬೇಕು ಎಂದರೆ ಮತ್ತೆ 6 ತಿಂಗಳುಗಳು ಮುಂದುವರೆಸಲಾಗುತ್ತದೆ. ಅಭ್ಯರ್ಥಿಗೆ ಇಲಾಖೆಯ ಅಗತ್ಯತೆ, ಕೆಲಸದ ಕಾರ್ಯಕ್ಷಮತೆ, ದೈಹಿಕ ಸಾಮರ್ಥ್ಯ, ನಡವಳಿಕೆ ಇವುಗಳ ಆಧಾರದ ಮೇಲೆ ಒಪ್ಪಂದವನ್ನು ಇನಷ್ಟು ತಿಂಗಳು ಕಾಲ ವಿಸ್ತರಣೆ ಮಾಡಲು ಅವಕಾಶ ಇರುತ್ತದೆ. ಗರಿಷ್ಠ 24 ತಿಂಗಳು ಅಂದರೆ 2 ವರ್ಷದವರೆಗೆ ಕಾಂಟ್ರಾಕ್ಟ್​ ಬೇಸ್ ಮೇಲೆ ಹುದ್ದೆಯಲ್ಲಿ ಮುಂದುವರೆಯಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಸಾವಿರಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಅಪ್ಲೇ ಮಾಡಲು ಕೊನೆ ದಿನಾಂಕ..?

ತಿಂಗಳಿಗೆ ಸಂಬಳ 16,640 ರೂಪಾಯಿಳನ್ನು ನೀಡಲಾಗುತ್ತದೆ. ಒಂದು ವೇಳೆ ವಿಶೇಷ ದಿನಗಳಲ್ಲಿ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ರೆ ಅದಕ್ಕೆ ಪ್ರತಿ ದಿನಕ್ಕೆ 640 ರೂಪಾಯಿಗಳಂತೆ ಹಣ ಪಾವತಿ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಕೂಡಲೇ ಹುದ್ದೆಗೆ ಸೇರಬೇಕು. ಅಗತ್ಯವಿದ್ದಲ್ಲಿ ನಿಗದಿತ ದಿನಾಂಕದಿಂದ 15 ದಿನಗಳವರೆಗೆ ಹುದ್ದೆಗೆ ಸೇರಲು ಅವಕಾಶ ಇರುತ್ತದೆ. ಈ ಸಮಯವನ್ನು ಮೀರಿ ಅಭ್ಯರ್ಥಿಗಳು ಕೆಲಸಕ್ಕೆ ಹಾಜರಾಗಲಿಲ್ಲ ಎಂದರೆ ಅವರ ಅರ್ಜಿಯನ್ನು ರದ್ದು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಪಬ್ಲಿಕ್ ಹೆಲ್ತ್ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಸೆಪ್ಟೆಂಬರ್- 03 ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖಾಲಿ ಇರೋ ಜಾಬ್​ಗಳಿಗೆ ಆಯಿಲ್ ಇಂಡಿಯಾ ಲಿಮಿಟೆಡ್​ ಅರ್ಜಿ ಆಹ್ವಾನ.. ನೀವು ಟ್ರೈ ಮಾಡಿ..!

https://newsfirstlive.com/wp-content/uploads/2024/08/JOB_INDIAN_OIL.jpg

Load More