newsfirstkannada.com

ಪ್ಯಾಸೆಂಜರ್​ ಬಸ್ ಭಯಾನಕ ಆಕ್ಸಿಡೆಂಟ್​.. 30 ಪ್ರಯಾಣಿಕರ ಪೈಕಿ 29 ಜನ ಸ್ಥಳದಲ್ಲೇ ಸಾವು

Share :

Published August 25, 2024 at 3:58pm

    ಘಟನೆಯಲ್ಲಿ ಓರ್ವ ಬದುಕಿದ್ದೆ ಪವಾಡ, ಅಪಘಾತ ಆಗಿದ್ದೇಲ್ಲಿ?

    ಉರುಳಿ ಬಿದ್ದ ರಭಸಕ್ಕೆ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜು

    ಪಟ್ಟಣದಿಂದ ಜಿಲ್ಲೆಗೆ ತೆರಳುವಾಗ ನಡೆದ ಭಯಾನಕ ಆಕ್ಸಿಡೆಂಟ್

ಪರ್ವತ ಪ್ರದೇಶದಲ್ಲಿ ತೆರಳುತ್ತಿದ್ದ ಬಸ್​​ವೊಂದು ಕಂದಕಕ್ಕೆ ಉರುಳಿ ಬಿದ್ದು 30 ಪ್ರಯಾಣಿಕರ ಪೈಕಿ 29 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ಮಾತ್ರ ಬದುಕುಳಿದಿದ್ದಾನೆ. ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಪನಾ ಬ್ರಿಡ್ಜ್​ ಬಳಿ ಈ ದುರ್ಘಟನೆ ನಡೆದಿದೆ.

ಪ್ಯಾಸೆಂಜರ್​ ಬಸ್ ಪಂಜಾಬ್​ನ ಹವೇಲಿ-ಕಹುತದಿಂದ ರಾವಲ್ಪಿಂಡಿ ಕಡೆಗೆ ಹೋಗುತ್ತಿತ್ತು. ಈ ವೇಳೆ ಪನಾ ಬ್ರಿಡ್ಜ್​ ಬಳಿ ಬರುತ್ತಿದ್ದಂತೆ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಬಸ್​ನಲ್ಲಿದ್ದ ಮೂವತ್ತು ಜನರ ಪೈಕಿ 29 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬ ಪ್ರಯಾಣಿಕ ಮಾತ್ರ ಪವಾಡ ರೀತಿಯಲ್ಲಿ ಬದುಕುಳಿದಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ.

​ಇದನ್ನೂ ಓದಿ: ಉರುಳಿ ಬಿದ್ದ ಯಾತ್ರಾರ್ಥಿಗಳ ಬಸ್.. 35 ಜನರು ಸಾವು, 7 ಮಂದಿ ಗಂಭೀರ

ಇನ್ನು ಬಸ್​ ಕಂದಕಕ್ಕೆ ಉರುಳಿ ಬಿದ್ದ ಮಾಹಿತಿ ತಿಳಿದು ಸ್ಥಳೀಯ ಗ್ರಾಮದ ಜನರು ಬಂದು ಮೃತದೇಹಗಳನ್ನು ಮೇಲೆತ್ತಿದ್ದಾರೆ. ಬಳಿಕ ಪೊಲೀಸರು ರಕ್ಷಣಾ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಬಸ್​ ಮೇಲಿನಿಂದ ಉರುಳಿ ಬಿದ್ದ ರಭಸಕ್ಕೆ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಹುತದಿಂದ ರಾವಲ್ಪಿಂಡಿ ಜಿಲ್ಲೆಗೆ ಹೋಗಲು ಇದೊಂದೆ ಮಾರ್ಗವಿದ್ದು ಒಂದು ಗಂಟೆ ಸಮಯ ಹಿಡಿಯುತ್ತದೆ. ಆದರೆ ಈ ವೇಳೆ ತೆರಳುವಾಗ ಈ ಬಸ್ ಅಪಘಾತವಾಗಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

​ಇದನ್ನೂ ಓದಿ: ಭೀಕರ ಬಸ್ ಅಪಘಾತ.. ಸಾವಿನ ಸಂಖ್ಯೆ 28ಕ್ಕೂ ಹೆಚ್ಚು; 23 ಮಂದಿಗೆ ಗಂಭೀರ ಗಾಯ; ಪ್ರಧಾನಿ ತೀವ್ರ ಕಂಬನಿ

ಇರಾಕ್‌ನಿಂದ ಇರಾನ್ ಮೂಲಕ ಪಾಕಿಸ್ತಾನಕ್ಕೆ ಹಿಂದಿರುಗುತ್ತಿದ್ದ ಶಿಯಾ ಮುಸ್ಲಿಂ ಯಾತ್ರಿಕರ ಬಸ್​ವೊಂದು ಕಂದಕಕ್ಕೆ ಬಿದ್ದು ಕನಿಷ್ಠ 12 ಜನರು ಸಾವನ್ನಪ್ಪಿದ್ದರು. ಘಟನೆಯಲ್ಲಿ 32 ಮಂದಿ ಗಾಯಗೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ರಾವಲ್ಪಿಂಡಿ ಜಿಲ್ಲೆಯಲ್ಲಿ ಬಸ್​ ಕಂದಕಕ್ಕೆ ಉರುಳಿ ಬಿದ್ದಿದೆ.

ಮೊನ್ನೆ ಮೊನ್ನೇಯಷ್ಟೇ ಇರಾಕ್‌ಗೆ ತೆರಳುತ್ತಿರುವಾಗ ನೆರೆಯ ಇರಾನ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 35 ಪಾಕಿಸ್ತಾನಿ ಯಾತ್ರಾರ್ಥಿಗಳು ಮೃತಪಟ್ಟಿದ್ದರು. 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಈ ಅಪಘಾತ ಸಂಭವಿಸಿರುವುದು ಆತಂಕಕ್ಕೆ ಗುರಿಮಾಡಿದೆ. ಈ ಸಂಬಂಧ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮೃತರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಯಾಸೆಂಜರ್​ ಬಸ್ ಭಯಾನಕ ಆಕ್ಸಿಡೆಂಟ್​.. 30 ಪ್ರಯಾಣಿಕರ ಪೈಕಿ 29 ಜನ ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/08/PAK_BUS_1.jpg

Load More