newsfirstkannada.com

ಕನ್ನಡಿಗ KL ರಾಹುಲ್​ಗೆ ಬಿಗ್ ಶಾಕ್​.. ಲಕ್ನೋ ಟೀಮ್ ಕ್ಯಾಪ್ಟನ್ಸಿ ಕಿತ್ತುಕೊಂಡ ಸಂಜೀವ್ ಗೋಯೆಂಕಾ; ಹೇಳಿದ್ದೇನು?

Share :

Published August 27, 2024 at 4:29pm

Update August 27, 2024 at 4:42pm

    ಲಕ್ನೋ ಟೀಮ್​ನ ಮುಂದಿನ ನಾಯಕ ಆಗೋದು ಯಾರು ಗೊತ್ತಾ?

    ಫ್ರಾಂಚೈಸಿ ಓನರ್ ಜತೆ 4 ಗಂಟೆ ಮಾತನಾಡಿದ ಕನ್ನಡಿಗ ರಾಹುಲ್

    ನಾಯಕ ಸ್ಥಾನದಿಂದ ಕೆಳಗಿಳಿಸಲು ಫ್ರಾಂಚೈಸಿ ನಿರ್ಧಾರ ಮಾಡಿತಾ?

ಮುಂಬರುವ ಐಪಿಎಲ್ ಸೀಸನ್​ನ ರಿಲೀಸ್, ರಿಟೈನ್ ಕುರಿತು ಚರ್ಚೆಗಳು ಆಗುತ್ತಿವೆ. ಅದರಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರ ಬಗ್ಗೆ ಭಾರೀ ಮಾತುಕತೆ ನಡೆಯುತ್ತಿದೆ. ಇಲ್ಲಿವರೆಗೆ ಲಕ್ನೋ ಸೂಪರ್ ಜೈಂಟ್ಸ್​ ತಂಡದಿಂದ ಕೆ.ಎಲ್​ ರಾಹುಲ್​ರನ್ನ ಕೈಬಿಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಮತ್ತೊಂದು ಬಿಗ್ ಅಪ್​ಡೇಟ್ ಸಿಕ್ಕಿದ್ದು ರಾಹುಲ್ ಅವರನ್ನ ನಾಯಕ ಸ್ಥಾನದಿಂದ ಕೆಳಗಿಳಿಸಲು ಫ್ರಾಂಚೈಸಿ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನಾಯಕನಾದರೂ ಏನು ಬಂತು.. ಛೇ..! ಸೂರ್ಯನ ಅದೊಂದು ಆಸೆ ಇನ್ನೂ ಈಡೇರಿಲ್ಲ

ಕೆ.ಎಲ್ ರಾಹುಲ್ ಅವರು ಲಕ್ನೋ ಟೀಮ್​ನಲ್ಲಿ ಎರಡೇರಡು ಜವಾಬ್ದಾರಿಗಳನ್ನು ಪೂರೈಸಲು ಒತ್ತಡ ಆಗುತ್ತಿದೆ. ಆದಷ್ಟು ಅವರು ಬ್ಯಾಟಿಂಗ್​ ಕಡೆ ಇನ್ನಷ್ಟು ಗಮನ ಹರಿಸಿ, ಉತ್ತಮವಾಗಿ ಬ್ಯಾಟಿಂಗ್ ಮಾಡಲಿ. ಹೀಗಾಗಿ 2025ರ ಸೀಸನ್​ನಲ್ಲಿ ರಾಹುಲ್ ತಂಡದಲ್ಲೇ ಇರುತ್ತಾರೆ. ಆದರೆ ಎಲ್​​ಎಸ್​​ಜಿ ನಾಯಕಕ ಸ್ಥಾನವನ್ನು ಬೇರೆ ಆಟಗಾರರಿಗೆ ನೀಡಬೇಕಾಗುತ್ತದೆ ಎಂದು ಎಲ್​​ಎಸ್​ಜಿ ಓನರ್​ ಸಂಜೀವ್ ಗೋಯೆಂಕಾ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಾನ್​​ಸ್ಟೆಬಲ್ ಹುದ್ದೆಗಳಿಗೆ ಕಾಲ್​ಫಾರ್ಮ್​.. PUC ಪಾಸ್ ಆದವರಿಗೆ ಗುಡ್​ನ್ಯೂಸ್

ರಾಹುಲ್ ಬದಲಿಗೆ ಕ್ಯಾಪ್ಟನ್ ಯಾರು ಎಂಬುದು ಇನ್ನು ನಿರ್ಧಾರ ಮಾಡಿಲ್ಲ. ಆದರೆ ಸದ್ಯಕ್ಕೆ ಆಲ್​ರೌಂಡರ್​ ಕೃನಾಲ್ ಪಾಂಡ್ಯ ಹಾಗೂ ನಿಕೋಲಸ್ ಪೂರನ್ ಹೆಸರನ್ನು ಆಯ್ಕೆ ಮಾಡಲಾಗಿದೆ. ಇಬ್ಬರಲ್ಲಿ ಒಬ್ಬರನ್ನ ನಾಯಕನನ್ನಾಗಿ ಮಾಡಲಾಗುವುದು ಎಂದು ಸಭೆಯಲ್ಲಿ ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಲಕ್ನೋ ಸೂಪರ್ ಜೈಂಟ್ಸ್​ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಕೆ.ಎಲ್ ರಾಹುಲ್ ಭೇಟಿ ಮಾಡಿದ್ದಾರೆ. ಈ ವೇಳೆ ಇಬ್ಬರು ಸೇರಿ 4 ಗಂಟೆಗೂ ಅಧಿಕ ಸಮಯ ಚರ್ಚೆ ಮಾಡಿದ್ದಾರೆ. ಆದರೆ ಏನೇನು ಮಾತನಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಈ ಸಭೆ ಬಳಿಕ ರಾಹುಲ್ ಅವರು ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕನ್ನಡಿಗ KL ರಾಹುಲ್​ಗೆ ಬಿಗ್ ಶಾಕ್​.. ಲಕ್ನೋ ಟೀಮ್ ಕ್ಯಾಪ್ಟನ್ಸಿ ಕಿತ್ತುಕೊಂಡ ಸಂಜೀವ್ ಗೋಯೆಂಕಾ; ಹೇಳಿದ್ದೇನು?

https://newsfirstlive.com/wp-content/uploads/2024/08/KL_RAHUL_NEW-1.jpg

Load More