newsfirstkannada.com

ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದೇಕೆ? ಪೊಲೀಸರಿಗೆ ಸಿನಿಮಾ ಡೈಲಾಗ್ ಹೊಡೆದ ಚಿಕ್ಕಣ್ಣ; ಆಮೇಲೇನಾಯ್ತು?

Share :

Published August 30, 2024 at 4:28pm

Update August 30, 2024 at 4:38pm

    ಚಿಕ್ಕಣ್ಣಗೆ ಕಾನೂನು ಪಾಠ ಮಾಡಿರುವ ಬೆಂಗಳೂರು ಪೊಲೀಸರು

    ದರ್ಶನ್ ಭೇಟಿ ಮಾಡಿದ ಕುರಿತು ಚಿಕ್ಕಣ್ಣ ಹೊಡೆದ ಡೈಲಾಗ್ ಯಾವುದು?

    ವಿಚಾರಣೆಯಲ್ಲಿ ಚಿಕ್ಕಣ್ಣಗೆ ಪೊಲೀಸರು ಕೊಟ್ಟ ಖಡಕ್ ಎಚ್ಚರಿಕೆ ಏನು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆದ ದರ್ಶನ್ ಅವರು ನಿನ್ನೆವರೆಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಸೆಂಟ್ರಲ್ ಜೈಲಿನಲ್ಲಿರುವಾಗ ಭೇಟಿಯಾದ ಹಿನ್ನೆಲೆಯಲ್ಲಿ ಪೊಲೀಸರು ನಟ ಚಿಕ್ಕಣ್ಣ ಅವರನ್ನು ಮತ್ತೆ ವಿಚಾರಣೆ ಮಾಡಿದ್ದಾರೆ. ಈ ವೇಳೆ ಸಿನಿಮಾ ಸ್ಟೈಲ್​ನಲ್ಲಿ ನಟ ಚಿಕ್ಕಣ್ಣ ಡೈಲಾಗ್ ಹೊಡೆದಿದ್ದಾರೆ.

ದರ್ಶನ್ ಜೈಲಿನಲ್ಲಿರುವಾಗ ಭೇಟಿಯಾಗಿದ್ದಕ್ಕೆ ನಟ ಚಿಕ್ಕಣ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪೊಲೀಸರ ಈ ವಿಚಾರಣೆಯಲ್ಲಿ ಸಿನಿಮೀಯ ರೀತಿಯಲ್ಲಿ ಚಿಕ್ಕಣ್ಣ ಡೈಲಾಗ್ ಹೊಡೆದಿದ್ದು ‘ಖುಷಿಯಲ್ಲಿ‌ದ್ದಾಗ ಬರೋನು‌ ಸ್ನೇಹಿತ ಅಲ್ಲ, ಕಷ್ಟದಲ್ಲಿ ಬೆನ್ನು ಕೊಡುವವನು ಸ್ನೇಹಿತ ಸಾರ್’. ದರ್ಶನ್ ಅವರು ಕಷ್ಟದಲ್ಲಿದ್ದಾರೆ ಹೋಗಿ ಅವರಿಗೆ ಸಹಾಯ ಮಾಡು‌ ಎಂದು ಸ್ನೇಹಿತರು ಹೇಳಿದ್ದರು. ಹೀಗಾಗಿಯೇ ಅವರನ್ನು ಭೇಟಿಯಾಗಿದ್ದೆ ಅಷ್ಟೇ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ದರ್ಶನ್ ಬಿಡುಗಡೆ ಆಗಲಿ’-ಬಳ್ಳಾರಿ ಸೆಂಟ್ರಲ್ ಜೈಲಿನ ಮುಂದೆ ಜಮಾಯಿಸಿದ ಅಭಿಮಾನಿಗಳ ಉದ್ಧಟತನ; ಆಗಿದ್ದೇನು? 

ನಾನು, ದರ್ಶನ್ ಒಳ್ಳೆಯ ಸ್ನೇಹಿತರಾಗಿದ್ದೇವೆ. ಯಾವುದೇ ಸಮಯದಲ್ಲಾದ್ರೂ ಅವರು ನನ್ನ ಜೊತೆಯಲ್ಲಿದ್ದರು. ಅವರು ಜೈಲಿನಲ್ಲಿರುವಾಗ ಎಲ್ಲ ಸ್ನೇಹಿತರು ಹೋಗಿ ನೋಡಿಕೊಂಡು ಬಂದಿದ್ದರು. ಹೀಗಾಗಿ ನಾನು ಹೋಗಿಲ್ಲ ಅಂದರೆ ಅದು ತಪ್ಪಾಗುತ್ತೆ ಎಂದು ದರ್ಶನ್​ರನ್ನ ಭೇಟಿ ಮಾಡಿದ್ದೆ ಎಂದು ಚಿಕ್ಕಣ್ಣ ಹೇಳಿದ್ದಾರೆ.

ದರ್ಶನ್ ನಿಮಗೇನಾದರೂ ಆಮಿಷ ಅಥವಾ ಬೆದರಿಕೆ ಒಡ್ಡಿದ್ದಾರಾ ಎಂದು ಪೊಲೀಸರು ಚಿಕ್ಕಣ್ಣರನ್ನ ಪ್ರಶ್ನೆ ಮಾಡಿದ್ದಾರೆ. ಒಂದು ವೇಳೆ ಬೆದರಿಕೆ ಅಥವಾ ಆಮಿಷ ಒಡ್ಡಿದರೆ ನಮಗೆ ತಿಳಿಸುವಂತೆ ಹೇಳಿದ್ದಾರೆ. ಅಲ್ಲದೇ ಸಿಆರ್​ಪಿಸಿ 164 ಸ್ಟೇಟ್​​ಮೆಂಟ್​ ಬಗ್ಗೆ ದರ್ಶನ್ ಜೊತೆ ಮಾತನಾಡಿದ್ರಾ ಎಂಬುದಾಗಿ ಚಿಕ್ಕಣ್ಣಗೆ ಪ್ರಶ್ನೆ ಮಾಡಲಾಗಿದೆ. ಆದರೆ ಯಾವುದೇ ಮಾಹಿತಿಯನ್ನು ದರ್ಶನ್​ಗೆ ನೀಡಿಲ್ಲ ಎಂದು ಚಿಕ್ಕಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಬ್ರ್ಯಾಂಡೆಡ್‌ ಟೀ ಶರ್ಟ್‌, ಶೂ, ಡ್ರೈಫ್ರೂಟ್ಸ್‌.. ವಿಲ್ಸನ್‌ ಗಾರ್ಡನ್ ನಾಗನ ಲಕ್ಸುರಿ ಲೈಫ್ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!

ಜೈಲಿನಲ್ಲಿ ಕೊಲೆ ಆರೋಪಿಯನ್ನು ಭೇಟಿ ಮಾಡಿದ್ದಕ್ಕೆ ಚಿಕ್ಕಣ್ಣನಿಗೆ ಪೊಲೀಸರು ಕಾನೂನು ಪಾಠ ಮಾಡಿ ಕಳುಹಿಸಿದ್ದಾರೆ. ನ್ಯಾಯಾಲಯದ 164 ಹೇಳಿಕೆಯನ್ನ ತಿರುಚಬಾರದು. ನ್ಯಾಯಾಧೀಶರ ಮುಂದೆ ನೀಡಿದ ಅಧಿಕೃತ ಹೇಳಿಕೆಯನ್ನ ಬದಲಿಸಿದರೆ ತಪ್ಪಾಗುತ್ತೆ. ಕಾನೂನು ಉಲ್ಲಂಘನೆ ಆಗುತ್ತದೆ ಎಂದು ಚಿಕ್ಕಣ್ಣಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದೇಕೆ? ಪೊಲೀಸರಿಗೆ ಸಿನಿಮಾ ಡೈಲಾಗ್ ಹೊಡೆದ ಚಿಕ್ಕಣ್ಣ; ಆಮೇಲೇನಾಯ್ತು?

https://newsfirstlive.com/wp-content/uploads/2024/08/DARSHAN_CHIKKANNA.jpg

Load More