newsfirstkannada.com

VIDEO: ಬೆಂಕಿ, ನೀರು ಸಮ್ಮಿಲನದೊಂದಿಗೆ ಬರ್ತಿದೆ ಬಿಗ್​ಬಾಸ್​ ಸೀಸನ್​ 11; ಈ ಬಾರಿಯ ವಿಶೇಷತೆ ಏನು?

Share :

Published September 2, 2024 at 7:15am

    ಪ್ರೋಮೋ ರಿಲೀಸ್ ಮಾಡಿ​ ಕುತೂಹಲ ಮೂಡಿಸಿದ ಬಿಗ್​ಬಾಸ್​

    ಶೀಘ್ರದಲ್ಲೇ ಬರಲಿದೆ ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​

    ಈ ಬಾರಿಯ ಬಿಗ್​ಬಾಸ್​ಗೆ ಯಾರೆಲ್ಲಾ ಸ್ಪರ್ಧಿಗಳು ಬರಬಹುದು?

ಅಂತೂ ಇಂತೂ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಬಂದೇ ಬಿಡ್ತು. ಇಷ್ಟು ದಿನ ಇದಕ್ಕಾಗಿಯೇ ಕಾಯುತ್ತಿದ್ದ ವೀಕ್ಷಕರು ಫುಲ್​ ಖುಷ್ ಆಗಿದ್ದಾರೆ. ಬಿಗ್​ಬಾಸ್​ ಸೀಸನ್​ 11ರ ಮೊಟ್ಟ ಮೊದಲ ಪ್ರೋಮೋ ರಿಲೀಸ್ ಆಗಿದೆ.

ಸದ್ಯ ಬಹುನಿರೀಕ್ಷಿತ ಕನ್ನಡದ ಬಿಗ್​ಬಾಸ್ 11 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೊಸ ಸೀಸನ್ ಪ್ರಾರಂಭಕ್ಕೆ ಬಿಗ್​ಬಾಸ್​ ತಂಡ ತೆರೆ ಮರೆ ಹಿಂದೆ ಎಲ್ಲ ರೀತಿಯಲ್ಲೂ ತಯಾರಿ ನಡೆಯುತ್ತಿದೆ. ಈಗ ಕಲರ್ಸ್​ ಕನ್ನಡ ತನ್ನ ಅಧಿಕೃತ ಖಾತೆಯಲ್ಲಿ ಬಿಗ್​ಬಾಸ್​​ ಮೊದಲ ಪ್ರೋಮೋ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಈ ಬಾರಿ ಬಿಗ್​ಬಾಸ್​ಗೆ ಸನ್ನಿ ಲಿಯೋನ್..! ಯಾರೆಲ್ಲಾ ಬರಬಹುದು..?

ವಿಶೇಷ ಎಂದರೆ ಅದು ಕೂಡ ಸೆಪ್ಟೆಂಬರ್ 1 ಭಾನುವಾರದಂದೇ ಪ್ರೋಮೋ ರೀಲಿಸ್​ ಆಗಿದ್ದು, ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಇದೇ ಪ್ರೋಮೋ ಈಗ 2.1 ಮಿಲಿಯನ್​​ ವೀಕ್ಷಣೆ ಪಡೆದುಕೊಂಡಿದೆ. ಅಷ್ಟರ ಮಟ್ಟಗೆ ಬಿಗ್​​ಬಾಸ್​ ಪ್ರೋಮೋ ವೈರಲ್​ ಆಗಿದೆ. ಇನ್ನೂ ಮೊದಲ ಸೀಸನ್​ನಿಂದ ಹಿಡಿದು ಹತ್ತು ಸೀಸನ್​ಗಳು ಯಶಸ್ವಿಯಾಗಿ ಪ್ರಸಾರ ಕಂಡಿದೆ. ಪ್ರತಿ ಸೀಸನ್​ನಲ್ಲಿ ಭಿನ್ನ ವಿಭಿನ್ನವಾಗಿರೋ ಲೋಗೋಗಳು ಅನಾವರಣ ಆಗುತ್ತಲೇ ಇರುತ್ತೆ. ಆದರೆ ಈ ಬಾರಿಯ ಬಿಗ್​​ಬಾಸ್​ ಲೋಗೋದಲ್ಲಿ ಒಂದು ಕಡೆ ಬೆಂಕಿ, ಮತ್ತೊಂದು ಕಡೆ ನೀರು ಇದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಅಂದರೆ ಬಿಗ್​ಬಾಸ್ ಮನೆಯೊಳಗೆ ಸ್ಪರ್ಧಿಗಳ ಆಕ್ರೋಶ, ಜಗಳ, ಕಿತ್ತಾಟ, ಕಣ್ಣೀರು, ಭಾವನಾತ್ಮಕ ನಂಟಿನ ಸಾರವನ್ನು ಹೇಳ್ತಿದೆ.

ಈ ಬಾರಿಯ ಬಿಗ್​ಬಾಸ್​ಗೆ ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಸ್ಟಾರ್​ ನಟ, ನಟಿಯರು, ಸೋಷಿಯಲ್​ ಮೀಡಿಯಾ ಸ್ಟಾರ್​ಗಳ ಪಟ್ಟಿಗಳಲ್ಲಿ ಕೆಲವೊಂದು ಹೆಸರುಗಳು ಹರಿದಾಡುತ್ತಿವೆ. ಅವುಗಳು ಎಷ್ಟರ ಮಟ್ಟಿಗೆ ಸತ್ಯ ಎಂದು ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಉತ್ತರ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬೆಂಕಿ, ನೀರು ಸಮ್ಮಿಲನದೊಂದಿಗೆ ಬರ್ತಿದೆ ಬಿಗ್​ಬಾಸ್​ ಸೀಸನ್​ 11; ಈ ಬಾರಿಯ ವಿಶೇಷತೆ ಏನು?

https://newsfirstlive.com/wp-content/uploads/2024/09/bbk-11.jpg

Load More