newsfirstkannada.com

ಕೆಎಲ್ ರಾಹುಲ್​ ದಿಟ್ಟ ಹೋರಾಟ.. ತಂಡದ ಮರ್ಯಾದೆಗೆ ಕ್ರೀಸ್​ ಕಚ್ಚಿನಿಂತ ಕನ್ನಡಿಗ..!

Share :

Published September 7, 2024 at 11:03am

    ಬೆಂಗಳೂರಿನ ಮೈದಾನದಲ್ಲಿ ಸ್ಟಾರ್​​ಗಳ ನಡುವೆ ಕಾದಾಟ ಹೇಗಿದೆ..?

    ಎರಡನೇ ದಿನವೂ ಮಿಂಚಿನ ಆಟವಾಡಿದ ಯಂಗ್ ಪ್ಲೇಯರ್​ ಖಾನ್​

    ಚಿನ್ನಸ್ವಾಮಿ ಅಂಗಳದಲ್ಲಿ ಆಕಾಶ್​​ದೀಪ್​, ನವ್​​ದೀಪ್​ ಸೈನಿ ಶೈನಿಂಗ್​!

ಚಿನ್ನಸ್ವಾಮಿ ಮೈದಾನದಲ್ಲಿ ನಡೀತಾ ಇರೋ ದುಲೀಪ್​ ಟ್ರೋಫಿ ಪಂದ್ಯ ಹೈವೋಲ್ಟೆಜ್​ ಟಚ್​ ಪಡೆದುಕೊಳ್ತಿದೆ. ಮೊದಲ ದಿನದಾಟದಲ್ಲಿ ಇಂಡಿಯಾ ಬಿ ತಂಡ ಅಬ್ಬರಿಸಿದ್ರೆ, 2ನೇ ದಿನದಾಟದಲ್ಲಿ ಇಂಡಿಯಾ ಎ ತಂಡ ತಿರುಗೇಟು ನೀಡೋ ಸೂಚನೆ ನೀಡಿದೆ. ಲೋಕಲ್​ ಬಾಯ್​​ ಕೆ.ಎಲ್​ ರಾಹುಲ್​ ಕ್ರಿಸ್​​ ಕಚ್ಚಿ ನಿಂತಿದ್ದು, ಕರ್ನಾಟಕದ ಕ್ರಿಕೆಟ್​ ಫ್ಯಾನ್ಸ್​ಗೆ ಭರ್ಜರಿ ಮನರಂಜನೆ ಸಿಗ್ತಿದೆ. 2ನೇ ದಿನದಾಟ ಹೇಗಿತ್ತು.?

2 ದಿನವೂ ಮುಶೀರ್​ ಖಾನ್​ ಮಿಂಚಿನ ಆಟ.!

ಮೊದಲ ದಿನದಾಟದಲ್ಲಿ ಇಂಡಿಯಾ ಎ ತಂಡವನ್ನ ಬಿಡದೆ ಕಾಡಿದ್ದ ಮುಶೀರ್​ ಖಾನ್​ 2ನೇ ದಿನದಾಟದಲ್ಲೂ ಬೌಲರ್​ಗಳ ಬೆವರಿಳಿಸಿದ್ರು. ಇನ್ನಿಂಗ್ಸ್​ನಲ್ಲಿ ಬರೋಬ್ಬರಿ 373 ಎಸೆತಗಳನ್ನ ಎದುರಿಸಿದ ಮುಷೀರ್​ ಖಾನ್​ 181 ರನ್​ಗಳಿಸಿದ್ರು. 16 ಬೌಂಡರಿ, 5 ಸಿಕ್ಸರ್​ ಸಿಡಿಸಿ ಆರ್ಭಟಿಸಿದ ಮುಶೀರ್​ಗೆ ಅಂತಿಮವಾಗಿ ಕುಲ್​​ದೀಪ್​ ಯಾದವ್​ ಬ್ರೇಕ್​ ಹಾಕಿದ್ರು.

ಇದನ್ನೂ ಓದಿ: ಕಿಂಗ್ ಕೊಹ್ಲಿ ಸೆಂಚುರಿ ಸಿಡಿಸಿ ಎಷ್ಟು ತಿಂಗಳಾಯಿತು.. ಶತಕ ಸಿಡಿಸುವಲ್ಲಿ ವಿರಾಟ್ ಫೇಲ್​; ಯಾಕೆ?

ಚಿನ್ನಸ್ವಾಮಿ ಅಂಗಳದಲ್ಲಿ ನವ್​​ದೀಪ್​ ಸೈನಿ ಶೈನಿಂಗ್​.!

ಮುಶೀರ್​ ಖಾನ್​ಗೆ ಸಾಥ್​ ನೀಡಿದ ವೇಗಿ ನವ್​​ದೀಪ್​ ಸೈನಿ ಹಾಫ್​ ಸೆಂಚುರಿ ಪೂರೈಸಿದ್ರು. 144 ಎಸೆತಗಳನ್ನ ಎದುರಿಸಿ, 8 ಬೌಂಡರಿ, 1 ಸಿಕ್ಸರ್​ ಸಿಡಿಸಿ ಮಿಂಚಿದ ಸೈನಿ 56 ರನ್​ ಸಿಡಿಸಿದ್ರು.

4 ವಿಕೆಟ್​ ಕಬಳಿಸಿ ಮಿಂಚಿದ ಆಕಾಶ್​ದೀಪ್​.!

ಹಾಫ್​ ಸೆಂಚುರಿ ಬೆನ್ನಲ್ಲೇ ನವ್​​ದೀಪ್​ ಸೈನಿ ಆಕಾಶ್​​ದೀಪ್​ಗೆ ವಿಕೆಟ್​ ಒಪ್ಪಿಸಿದ್ರು. ಬಳಿಕ ಬಂದ ಯಶ್​ ದಯಾಳ್​ಗೂ ಗೇಟ್​ಪಾಸ್​ ನೀಡಿದ ಆಕಾಶ್​ದೀಪ್ 4 ವಿಕೆಟ್​ ಕಬಳಿಸಿ ಮಿಂಚಿದ್ರು. ಅಂತಿವಾಗಿ 321 ರನ್​ಗಳಿಸಿ ಇಂಡಿಯಾ ಬಿ ತಂಡ ಆಲೌಟ್​ ಆಯ್ತು.

ಬ್ಯಾಟಿಂಗ್​ಗಿಳಿದ ಇಂಡಿಯಾ ‘ಎ’ಗೆ ಶಾಕ್​ ಕೊಟ್ಟ ಸೈನಿ.!

ಬಳಿಕ ಮೊದಲ ಇನ್ನಿಂಗ್ಸ್​ ಆರಂಭಿಸಿದ ಇಂಡಿಯಾ ಎ ತಂಡ ಡಿಸೆಂಟ್​ ಆರಂಭ ಪಡೆದುಕೊಂಡಿತ್ತು. ಓಪನರ್​ಗಳಾಗಿ ಕಣಕ್ಕಿಳಿದಿದ್ದ ಕ್ಯಾಪ್ಟನ್​ ಶುಭ್​ಮನ್​ ಗಿಲ್​, ಮಯಾಂಕ್​ ಅಗರ್​ವಾಲ್​ ಬಿಗ್​ಸ್ಕೋರ್​ ಕಲೆ ಹಾಕೋ ಲೆಕ್ಕಾಚಾರದಲ್ಲಿದ್ರು. ಆದ್ರೆ, ನವ್​ದೀಪ್​​ ಸೈನಿ, ಶುಭ್​ಮನ್​ ಗಿಲ್​ಗೆ ಶಾಕ್​ ನೀಡಿದ್ರು.

ಸೈನಿಯ ಸೆನ್ಸೇಷನಲ್​ ಎಸೆತಕ್ಕೆ ಶುಭ್​ಮನ್​ ಗಿಲ್​ ಕಕ್ಕಾಬಿಕ್ಕಿಯಾಗಿ ಕ್ಲೀನ್​ಬೋಲ್ಡ್​ ಆದ್ರು. ಇದ್ರ ಬೆನ್ನಲ್ಲೇ ಮಯಾಂಕ್​ ಅಗರ್​ವಾಲ್​ ಕೂಡ ಸೈನಿಗೆ ವಿಕೆಟ್​ ಒಪ್ಪಿಸಿದ್ರು. ರಿಷಬ್​ ಪಂತ್​ ಹಿಡಿದ ಅದ್ಭುತ ಕ್ಯಾಚ್​​ಗೆ ಬಲಿಯಾದ ಮಯಾಂಕ್​ ಪೆವಿಲಿಯನ್​ ಸೇರಿದ್ರು.

ಇದನ್ನೂ ಓದಿ: ಗಣಪತಿಗೆ 20 ಕೆ.ಜಿ ಬಂಗಾರದ ಕಿರೀಟ ದಾನ.. ಅನಂತ್ ಅಂಬಾನಿ ಖರ್ಚು ಮಾಡಿದ್ದು ಎಷ್ಟು ಕೋಟಿ ರೂಪಾಯಿ? 

ರಾಹುಲ್​ -ರಿಯಾನ್​ ಪರಾಗ್​ ದಿಟ್ಟ ಹೋರಾಟ.!

4ನೇ ವಿಕೆಟ್​​​ಗೆ ಜೊತೆಯಾದ ಕೆ.ಎಲ್​ ರಾಹುಲ್​, ರಿಯಾನ್​ ಪರಾಗ್​ ದಿಟ್ಟ ಹೋರಾಟ ನಡೆಸ್ತಿದ್ದಾರೆ. ಎಚ್ಚರಿಕೆಯ ಆಟದ ಮೊರೆ ಹೋಗಿರುವ ಜೋಡಿ ಎದುರಾಳಿ ಬೌಲರ್​ಗಳ ತಾಳ್ಮೆ ಪರೀಕ್ಷೆ ನಡೆಸ್ತಿದ್ದಾರೆ. ರಾಹುಲ್​ 80 ಎಸೆತಗಳನ್ನ ಎದುರಿಸಿದ್ರೆ, ಪರಾಗ್​ 49 ಎಸೆತಗಳನ್ನ ಎದುರಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

2ನೇ ದಿನದ ಅಂತ್ಯಕ್ಕೆ ಇಂಡಿಯಾ-ಎ 2 ವಿಕೆಟ್​ ನಷ್ಟಕ್ಕೆ 134 ರನ್​ಗಳಿಸಿದ್ದು, 187 ರನ್​ಗಳಿಂದ ಹಿನ್ನಡೆಯಲ್ಲಿದೆ. ರಾಹುಲ್​ 23, ಪರಾಗ್​ 27 ರನ್​ಗಳಿಸಿ ಕ್ರಿಸ್​ ಕಾಯ್ದುಕೊಂಡಿದ್ದು, 3ನೇ ದಿನದಾಟದಲ್ಲಿ ಬಿಗ್​ ಇನ್ನಿಂಗ್ಸ್​ ಕಟ್ಟುವ ನಿರೀಕ್ಷೆಯಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೆಎಲ್ ರಾಹುಲ್​ ದಿಟ್ಟ ಹೋರಾಟ.. ತಂಡದ ಮರ್ಯಾದೆಗೆ ಕ್ರೀಸ್​ ಕಚ್ಚಿನಿಂತ ಕನ್ನಡಿಗ..!

https://newsfirstlive.com/wp-content/uploads/2024/09/KL_RAHUL-1.jpg

Load More