newsfirstkannada.com

4 ಪಂದ್ಯ.. ಕಿತ್ತಿರೋದು 30 ವಿಕೆಟ್.. ಚೆಪಾಕ್​​ನಲ್ಲಿ ಇವ್ರಿಗೆ ಸಾಟಿಯೇ ಇಲ್ಲ.. ಬಾಂಗ್ಲಾಗೆ ಢವಢವ..!

Share :

Published September 16, 2024 at 9:24am

Update September 17, 2024 at 1:41pm

    ಚೆಪಾಕ್​ನಲ್ಲಿ ಬಾಂಗ್ಲಾ ಟೈಗರ್ಸ್ ಗಿರಿಗಿಟ್ಲೆ ಪಕ್ಕಾ

    ಪಕ್ಕಾ ಕೇರಂ ಸ್ಪೆಷಲಿಸ್ಟ್​ ಅಡ್ಡ ಕಣ್ರೋ ಎಂದ ಫ್ಯಾನ್ಸ್

    ಚೆನ್ನೈನ ಆಪದ್ಬಾಂಧವ.. ಮ್ಯಾಚ್ ವಿನ್ನರ್ ಅಶ್ವಿನ್

ಅಶ್ವಿನ್, ಟೀಮ್​ ಇಂಡಿಯಾದ ಆಫ್​ ಸ್ಪಿನ್ನರ್​​. ಹಾಗೇ ಮ್ಯಾಚ್​ ವಿನ್ನರ್​​. ರವಿಚಂದ್ರನ್​ ಅಶ್ವಿನ್​​. ಸ್ಪಿನ್​ ಮ್ಯಾಜಿಷಿಯನ್, ಮಾಡ್ರನ್ ಡೇ ಕ್ರಿಕೆಟ್​ನ ಸ್ಪಿನ್​ ಲೆಜೆಂಡ್​. 37ರ ವಯಸ್ಸಿನಲ್ಲೂ ​ಎದುರಾಳಿಯನ್ನ ಗಿರಗಿಳ್ಲೆ ಹೊಡೆಸೋ ಪಂಟರ್. ಆದ್ರೀಗ ಇದೇ ಕೇರಂ ಸ್ಪೆಷಲಿಸ್ಟ್​​, ಬಾಂಗ್ಲಾ ಬೇಟೆಗೆ ಸಜ್ಜಾಗಿದ್ದಾರೆ. ಬಾಂಗ್ಲಾ ಟೆಸ್ಟ್ ಸಿರೀಸ್​​ಗೆ ಸಜ್ಜಾಗ್ತಿರುವ ಕೇರಂ ಸ್ಪೆಷಲಿಸ್ಟ್, ಚೆಪಾಕ್​​ನಲ್ಲಿ ಬಾಂಗ್ಲಾಗೆ ಚಿಂದಿ ಉಡಾಯಿಸೋದು ಪಕ್ಕ.
ಭಾರತ ಹಾಗೂ ಬಾಂಗ್ಲಾ ಎದುರಿನ ಟೆಸ್ಟ್​ ಸರಣಿ, ಇದೇ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದ್ದು, ಪಾಕ್​​ನಲ್ಲಿ ಗೆದ್ದ ಬಾಂಗ್ಲಾ, ಭಾರತದಲ್ಲೂ ಗೆಲ್ಲೋ ಆತ್ಮವಿಶ್ವಾಸದಲ್ಲೇ ಇದೆ. ಅದು ನಿಜಕ್ಕೂ ಅಸಾಧ್ಯ. ಇದಕ್ಕೆ ಕಾರಣ ಒನ್ ಆ್ಯಂಡ್ ಒನ್ಲಿ ಆರ್.ಅಶ್ವಿನ್.

ಬಾಂಗ್ಲಾ ಟೈಗರ್ಸ್ ಬೇಟೆಗೆ ಅಶ್ವಿನ್ ಕಾತರ
ಭಾರತಕ್ಕೆ ದಂಡೆತ್ತಿ ಬರುತ್ತಿರುವ ಬಾಂಗ್ಲಾ ಟೈಗರ್ಸ್​ ಬೇಟೆಗೆ ಆರ್​.ಅಶ್ವಿನ್ ರೆಡಿಯಾಗಿದ್ದಾರೆ. ಗೆದ್ದ ಆತ್ಮವಿಶ್ವಾಸದಲ್ಲಿ ತೇಲಾಡ್ತಿರುವ ಬಾಂಗ್ಲಾಗೆ ಸರಿಯಾಗೇ ಪಾಠ ಕಲಿಸುವ ಲೆಕ್ಕಚಾರದಲ್ಲಿರುವ ಅಶ್ವಿನ್, ಚೆಪಾಕ್​​ನಲ್ಲಿ ಗಿರಗಿಟ್ಲೆ ಆಡಿಸೋದು ಪಕ್ಕ. ಯಾಕಂದ್ರೆ, ಇದು ಪಕ್ಕ ಸ್ಪಿನ್ ಮಾಸ್ಟರ್​ ಆರ್​.ಅಶ್ವಿನ್ ಅಡ್ಡ.

ಇದನ್ನೂ ಓದಿ:ಸ್ಪೆಷಲ್ ಟ್ಯಾಲೆಂಟ್ ಹುಡುಗನಿಗೆ ಚಾನ್ಸ್ ಕೊಡಲು ಗಂಭೀರ್ ಕಸರತ್ತು​.. 8 ವೇಗಿಗಳು ಅಸಮಾಧಾನ..!

ಚೆಪಾಕ್​​ನಲ್ಲಿ ಅಶ್ವಿನ್​​​​​​​ ಮುಂದೆ ಬಾಂಗ್ಲಾ ಚಿಂದಿ ಫಿಕ್ಸ್​
ಚೆಪಾಕ್​ನಲ್ಲಿ ಯಾವ್ ಸ್ಪಿನ್ನರ್ ಬಾಂಗ್ಲಾಗೆ ಥ್ರೆಟ್ ಆಗ್ತಾರೋ ಇಲ್ವೋ. ಬೌಲಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲಿ ಬಾಂಗ್ಲಾಗೆ ಅಶ್ವಿನ್ ಕಾಡೋದು ಗ್ಯಾರಂಟಿ. ಈತನ ಸ್ಪಿನ್ ಬಲೆಗೆ ಸಿಲುಕಿದ್ರೆ, ಚೆಪಾಕ್​ನಲ್ಲೇ ಬಾಂಗ್ಲಾ ಚಿಂದಿಯಾಗೋದು ಫಿಕ್ಸ್​. ಯಾಕಂದ್ರೆ ಚೆಪಾಕ್​​ನಲ್ಲಿ ಅಶ್ವಿನ್​ರ ಟ್ರ್ಯಾಕ್ ರೆಕಾರ್ಡ್​ ಆಗಿದೆ.

ಚೆಪಾಕ್​ನಲ್ಲಿ ಆರ್​.ಅಶ್ವಿನ್​ ಬೌಲಿಂಗ್
ಚೆಪಾಕ್​​ನಲ್ಲಿ ಇದುವರೆಗೆ 4 ಪಂದ್ಯಗಳ 8 ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್, ಬರೋಬ್ಬರಿ 30 ವಿಕೆಟ್ ಉರುಳಿಸಿದ್ದಾರೆ. 103 ರನ್ ನೀಡಿ 7 ವಿಕೆಟ್ ಉರುಳಿಸಿರುವುದು ಇನ್ನಿಂಗ್ಸ್​ನ ಬೆಸ್ಟ್ ಪರ್ಫಾಮೆನ್ಸ್ ಆಗಿದೆ. 4 ಬಾರಿ ಐದು ವಿಕೆಟ್ ಬೇಟೆಯಾಡಿರುವ ಸಾಧನೆ ಮಾಡಿರುವ ಅಶ್ವಿನ್, ಈ ಸಲನೂ 5 ವಿಕೆಟ್ ಪಡೆಯೋದು ಗ್ಯಾರಂಟಿ. ಇಷ್ಟೇ ಅಲ್ಲ. ಬ್ಯಾಟಿಂಗ್​ನಲ್ಲೂ ಅಶ್ವಿನ್ ಮಿಂಚು ಹರಿಸಲಿದ್ದಾರೆ. ವಿರಾಟ್​, ರೋಹಿತ್, ಕೈಕೊಟ್ಟರೂ ಅಶ್ವಿನ್, ಲೋವರ್ ಆರ್ಡರ್ ಬ್ಯಾಟರ್ ಆಗಿ ಇಲ್ಲಿ ಎದುರಾಳಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿಅಂಶಗಳು.

ಇದನ್ನೂ ಓದಿ:ಶ್ರೇಯಾಂಕಾ ಪಾಟೀಲ್ ಕ್ರಿಕೆಟರ್ ಅಲ್ಲ, ಈಗ ಡಾನ್..! ರೌಡಿ ಬೇಬಿಯ ಹೊಸ ಅವತಾರಕ್ಕೆ ಜನ ಕಂಗಾಲ್..!

ಚೆಪಾಕ್​ನಲ್ಲಿ ಆರ್​.ಅಶ್ವಿನ್​ ಬ್ಯಾಟಿಂಗ್​
ಬ್ಯಾಟಿಂಗ್​ನಲ್ಲೂ ತಂಡಕ್ಕೆ ನೆರವಾಗಿರುವ ಅಶ್ವಿನ್, 4 ಪಂದ್ಯಗಳಿಂದ 229 ರನ್ ಗಳಿಸಿದ್ದಾರೆ. 38.16ರ ಸರಾಸರಿಯಲ್ಲಿ ರನ್ ಗಳಿಸಿರುವ ಅಶ್ವಿನ್, 1 ಶತಕ, 1 ಅರ್ಧಶತಕ ದಾಖಲಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಚೆಪಾಕ್​ನಲ್ಲಿ ಬ್ಯಾಟ್ ಆ್ಯಂಡ್ ಬಾಲ್​ನಲ್ಲಿ ಅಶ್ವಿನ್ ಸದ್ದು ಮಾಡಲು ರೆಡಿಯಾಗಿದ್ದಾರೆ.

ಮ್ಯಾಚ್ ವಿನ್ನರ್ ಅಶ್ವಿನ್
2021ರ ಇಂಗ್ಲೆಂಡ್ ಎದುರಿನ ಮೊದಲ ಎರಡು ಟೆಸ್ಟ್​ ಪಂದ್ಯಕ್ಕೆ ಇದೇ ಚೆಪಾಕ್ ವೇದಿಕೆಯಾಗಿತ್ತು. ಮೊದಲ ಪಂದ್ಯದಲ್ಲಿ ಅಶ್ವಿನ್, ಉತ್ತಮ ಪ್ರದರ್ಶನದ ಹೊರತಾಗಿಯೂ ಟೀಮ್ ಇಂಡಿಯಾ ಸೋತಿತ್ತು. 2ನೇ ಪಂದ್ಯದಲ್ಲೂ ಬಹುಪಾಲು ಸೋಲಿನ ಸುಳಿಗೆ ಸಿಲುಕಿತ್ತು. 2ನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ ದಾಳಿಯನ್ನ ಸಮರ್ಥವಾಗಿ ಎದುರಿಸಿದ್ದ ಅಶ್ವಿನ್, ಶತಕದ ಇನ್ನಿಂಗ್ಸ್​ ಕಟ್ಟಿದ್ದರು. ಬೌಲಿಂಗ್​ನಲ್ಲಿ 8 ವಿಕೆಟ್ ಉರುಳಿಸಿ ಮಿಂಚಿದ್ದರು. ಗೆಲುವಿನ ರೂವಾರಿಯಾಗಿದ್ದವರು ಇದೇ ಅಶ್ವಿನ್.

ಭಾರತೀಯ ಪಿಚ್​​ಗಳಲ್ಲಿ ಅಶ್ವಿನ್ ಕಿಂಗ್
ಚೆಪಾಕ್​ನಲ್ಲೇ ಅಲ್ಲ. ಇಂಡಿಯನ್ ಕಂಡೀಷನ್ಸ್​ನಲ್ಲಿ ಕೇರಂ ಸ್ಪೆಷಲಿಸ್ಟ್​ ಅಶ್ವಿನ್​​ಗೆ ಸರಿಸಾಟಿ ಇಲ್ಲ. ಸ್ಪಿನ್ ಫ್ರೆಂಡ್ಲಿ ಪಿಚ್​​ಗಳಲ್ಲಿ ಬ್ಯಾಟರ್​ಗಳನ್ನ ಬುಗರಿಯಂತೆ ಆಡಿಸುವ ಅಶ್ವಿನ್, ಬಾಂಗ್ಲಾಗೆ ಕಾಟ ನೀಡೋದ್ರಲ್ಲಿ ಡೌಟೇ ಇಲ್ಲ. ಹೀಗಾಗಿ ಭಾರತದಲ್ಲಿ ಗೆಲ್ಲೋ ಪ್ಲಾನ್​ನಲ್ಲಿರುವ ಬಾಂಗ್ಲಾ, ಕನಸು ಕೈಬಿಟ್ಟರೆ ಉತ್ತಮ.

ಇದನ್ನೂ ಓದಿ:ಬಿಸಿಸಿಐ ಮಾನಹಾನಿ ಮಾಡಿದವರಿಗೆ ಕಪಾಳಮೋಕ್ಷ; ಸತ್ಯ ಬಿಚ್ಚಿಟ್ಟ ಅಫ್ಘಾನ್ ಕ್ರಿಕೆಟ್​ ಮಂಡಳಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

4 ಪಂದ್ಯ.. ಕಿತ್ತಿರೋದು 30 ವಿಕೆಟ್.. ಚೆಪಾಕ್​​ನಲ್ಲಿ ಇವ್ರಿಗೆ ಸಾಟಿಯೇ ಇಲ್ಲ.. ಬಾಂಗ್ಲಾಗೆ ಢವಢವ..!

https://newsfirstlive.com/wp-content/uploads/2024/09/ASWIN.jpg

Load More