newsfirstkannada.com

Sunita Williams ಬಗ್ಗೆ ಅಪ್​ಡೇಟ್ಸ್​; ಭೂಮಿಗೆ ಕರೆ ತರಲು ಹೋಗ್ತಿರುವ ಗಗನಯಾನಿಗಳ ಹೆಸರು ಬಹಿರಂಗ

Share :

Published September 17, 2024 at 9:35am

    ತಾಂತ್ರಿಕ ದೋಷದಿಂದ ಬಾಹ್ಯಾಕಾಶದಲ್ಲೇ ಸಿಲುಕಿರುವ ಗಗನಯಾನಿಗಳು

    ಸೆಪ್ಟೆಂಬರ್ 25 ರಂದು ರಾತ್ರಿ 11:58ಕ್ಕೆ ಫಾಲ್ಕನ್ 9 ರಾಕೆಟ್ ಉಡಾವಣೆ

    6 ಗಂಟೆಯ ಅವಧಿಯಲ್ಲಿ ಬಾಹ್ಯಾಕಾಶ ಕೇಂದ್ರ ತಲುಪಲಿದೆ ನೌಕೆ

ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆ ತರುವ ಬಗ್ಗೆ NASA ಮತ್ತೊಂದು ಅಪ್​​ಡೇಟ್ಸ್ ನೀಡಿದೆ. ಫೆಬ್ರವರಿ 2025 ರಲ್ಲಿ ಕ್ರ್ಯೂ-9 ಮಿಷನ್ ಅಡಿಯಲ್ಲಿ ಸ್ಪೇಸ್-ಎಕ್ಸ್‌ನ ಬಾಹ್ಯಾಕಾಶ ನೌಕೆ ಮೂಲಕ ವಾಪಸ್ ಕರೆ ತರೋದಾಗಿ ನಾಸಾ ಈ ಹಿಂದೆ ಘೋಷಣೆ ಮಾಡಿತ್ತು.

ಇದೀಗ ನಾಸಾದ ಇನ್ನಿಬ್ಬರು ಗಗನಯಾತ್ರಿಗಳು ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ. NASAದ ನಿಕ್ ಹೇಗ್ (Nick Hague) ಮತ್ತು ರೋಸ್ಕೊಸ್ಮೊಸ್ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ (Alexandra Gorbunova) ಕ್ರೂ-9 ಕಾರ್ಯಾಚರಣೆಗಾಗಿ ಐಎಸ್​ಎಸ್​ (ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ) ಹೋಗಲಿದ್ದಾರೆ.

ಇದನ್ನೂ ಓದಿ:ಬಾಹ್ಯಾಕಾಶದಿಂದ ಸುದ್ದಿಗೋಷ್ಟಿ! ಸುನಿತಾ, ವಿಲ್ಮೋರ್ ಹೇಗೆ ಕಾಣ್ತಿದ್ದರು..? VIDEO

ನಾಸಾ ನೀಡಿರುವ ಮಾಹಿತಿಯಲ್ಲಿ.. ಸೆಪ್ಟೆಂಬರ್ 26 ರಂದು ಸ್ಪೇಸ್-ಎಕ್ಸ್ ಸಹಾಯದಿಂದ ಕ್ರ್ಯೂ-9 ಮಿಷನ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಫ್ಲೋರಿಡಾದ ಕೇಪ್ ಕ್ಯಾನವೆರಲ್ ಬಾಹ್ಯಾಕಾಶ ನಿಲ್ದಾಣದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್-X ನ ಫಾಲ್ಕನ್ 9 ರಾಕೆಟ್ ಉಡಾವಣೆ ಆಗಲಿದೆ. ಅದರಲ್ಲಿ ಗಗನಯಾನಿಗಳಾದ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೊರ್ಬುನೊವ್ ತೆರಳಲಿದ್ದಾರೆ.

ಯಾವಾಗ ತಲುಪುತ್ತಾರೆ..?
ಭಾರತೀಯ ಕಾಲಮಾನದ ಪ್ರಕಾರ.. ಕ್ರ್ಯೂ-9 ಮಿಷನ್ ಸೆಪ್ಟೆಂಬರ್ 25 ರಂದು ರಾತ್ರಿ 11:58ಕ್ಕೆ ಉಡಾವಣೆ ಆಗಲಿದೆ. ಉಡಾವಣೆಯಾದ ಸುಮಾರು 6 ಗಂಟೆಗಳ ನಂತರ ಇಬ್ಬರೂ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪುತ್ತಾರೆ.

ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಕರೆತರಲು NASA ಪ್ಲಾನ್; ಇಲ್ಲಿ ಎಲಾನ್ ಮಸ್ಕ್​ ಅವರ SpaceX ಕೆಲಸ ಏನು..?

ಸುನಿತಾ ವಿಲಿಯಮ್ಸ್ ಹೇಗೆ ಬರ್ತಾರೆ..?
ಕಾರ್ಯಾಚರಣೆಗೆ ಹೋಗ್ತಿರುವ ನೌಕೆಯಲ್ಲಿ ನಾಲ್ವರು ಬಾಹ್ಯಾಕಾಶಕ್ಕೆ ಹೋಗುವ ವ್ಯವಸ್ಥೆ ಹೊಂದಿದೆ. ಆದರೆ ಸೆಪ್ಟೆಂಬರ್ 25 ರಂದು ಇಬ್ಬರು ಗಗನಯಾನಿಗಳು ಮಾತ್ರ ನಭಕ್ಕೆ ಚಿಮ್ಮಲಿದ್ದಾರೆ. ಅಲ್ಲಿ ಐಎಸ್​ಎಸ್​ ತಲುಪಿದ ನಂತರ ಸುನಿತಾ ವಿಲಿಯಮ್ಸ್ ಹಾಗೂ ವಿಲ್ಮೋರ್​ ಜೊತೆಗೂಡಿ ಬರಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಫೆಬ್ರವರಿಯಲ್ಲಿ ಭೂಮಿಗೆ ವಾಪಸ್ ಆಗಲಿದ್ದಾರೆ.

ಇದನ್ನೂ ಓದಿ:ಆಘಾತಕಾರಿ ಸುದ್ದಿ.. ಸುನಿತಾ ವಿಲಿಯಮ್ಸ್ ಭೂಮಿಗೆ ಈ ವರ್ಷ ಬರಲ್ಲ.. ಮತ್ತೊಂದು ಅಪ್​​ಡೇಟ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sunita Williams ಬಗ್ಗೆ ಅಪ್​ಡೇಟ್ಸ್​; ಭೂಮಿಗೆ ಕರೆ ತರಲು ಹೋಗ್ತಿರುವ ಗಗನಯಾನಿಗಳ ಹೆಸರು ಬಹಿರಂಗ

https://newsfirstlive.com/wp-content/uploads/2024/07/SUNITA-1.jpg

Load More