newsfirstkannada.com

ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಅಶ್ವಿನ್ ಶತಕ ವೈಭವ.. ಬಾಂಗ್ಲಾಗೆ ಚೆಕ್​​ಮೇಟ್ ಇಟ್ಟ ಕ್ಷಣ ಹೇಗಿತ್ತು..!

Share :

Published September 20, 2024 at 9:35am

Update September 20, 2024 at 9:40am

    ತವರಿನ ಅಂಗಳದಲ್ಲಿ ಬಿರುಸಿನ ಸೆಂಚುರಿ ಸಿಡಿಸಿ ಶೈನಿಂಗ್​

    ವೈಟ್​ಬಾಲ್ ಶೈಲಿಯಲ್ಲಿ ಬ್ಯಾಟಿಂಗ್​​, 108 ಎಸೆತ, 100 ರನ್​

    ಅಪ್ಪನ ಎದುರಲ್ಲೆ ಶತಕ ಬಾರಿಸಿ ಸಂಭ್ರಮಿಸಿದ ಅಶ್ವಿನ್

ಚಾಂಪಿಯನ್​​ ತಂಡ ತವರಿನಲ್ಲಿ ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿತ್ತು. ಟಾಪ್​ ಕ್ಲಾಸ್​ ಆಟಗಾರರೆಲ್ಲರೂ ಕೈಕೊಟ್ರು. ಆದರೆ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಮಾತ್ರ ​ ರೆಡ್​​​ಬಾಲ್​​ ಕ್ರಿಕೆಟ್​​ನಲ್ಲಿ ಸ್ಫೋಟಕ ಶತಕ ಸಿಡಿಸಿ ಹೋಮ್​ಗ್ರೌಂಡ್​ನಲ್ಲಿ ಟೀಮ್ ಇಂಡಿಯಾದ ಮಾನ ಕಾಪಾಡಿದ್ರು.

ಚೆಪಾಕ್​​ನಲ್ಲಿ ಅಶ್ವಿನ್ ಸ್ಫೋಟಕ ಸೆಂಚುರಿ
ಚೆಪಾಕ್​​​​ನ ಟೆಸ್ಟ್​​​ನ ಮೊದಲ ದಿನ ಸ್ಟಾರ್​ ಆಲ್​ರೌಂಡರ್ ಆರ್​​.ಅಶ್ವಿನ್​​ ಕಟ್ಟಿದ ಬೊಂಬಾಟ್​​​ ಇನ್ನಿಂಗ್ಸ್ ಆಗಿತ್ತು. ಸ್ವಲ್ಪವು ಅಂಜಿಕೆ, ಒತ್ತಡವಿಲ್ಲದೇ ದಿಟ್ಟ ಇನ್ನಿಂಗ್ಸ್ ಕಟ್ಟಿದ ಲೋಕಲ್ ಬಾಯ್ ಸ್ಫೋಟಕ ಶತಕ ಸೆಂಚುರಿ ಸಿಡಿಸಿ ಮಿಂಚಿದರು. ನಿನ್ನೆಯ ಸೆಂಚುರಿ ಟೀಮ್ ಇಂಡಿಯಾದ ಸ್ಪಿನ್​ ಮ್ಯಜಿಷಿಯನ್ ಪಾಲಿಗೆ ತುಂಬಾನೆ ವಿಶೇಷವಾಗಿತ್ತು. ಯಾಕಂದ್ರೆ ಭಾರತ-ಬಾಂಗ್ಲಾ ಮೊದಲ ಟೆಸ್ಟ್​ ಪಂದ್ಯವನ್ನ ವೀಕ್ಷಿಸಲು ಅಶ್ವಿನ್​ ತಂದೆ ರವಿಚಂದ್ರನ್​ ಆಗಮಿಸಿದ್ರು. ಅಪ್ಪನ ಎದುರಿನಲ್ಲಿ ವೀರ ಸೇನಾನಿಯಂತೆ ಹೋರಾಡಿದ ಅಶ್ವಿನ್ ಬ್ರಿಲಿಯಂಟ್​ ಶತಕ ಬಾರಿಸಿ ಸಂಭ್ರಮಿಸಿದ್ರು.

ಇದನ್ನೂ ಓದಿ:ಟೀಂ ಇಂಡಿಯಾದ 3 ದೊಡ್ಡ ವೀಕ್ನೆಸ್​ಗಳು ಬಹಿರಂಗ.. ರೋಹಿತ್, ಗಿಲ್, ಕೊಹ್ಲಿ ಇದನ್ನು ಒಪ್ಪಿಕೊಳ್ಳಬೇಕು..!

ಸಂಕಷ್ಟದಲ್ಲಿ ತಂಡದ ಮಾನ ಕಾಪಾಡಿದ ಅಶ್ವಿನ್
ರೆಡ್​ ಸಾಯಿಲ್ ಪಿಚ್​​​​ನಲ್ಲಿ ಟೀಮ್ ಇಂಡಿಯಾದ ಘಟಾನುಘಟಿ ಬ್ಯಾಟ್ಸ್​ಮನ್​ಗಳು ಮುಗ್ಗರಿಸಿದ್ರು. 144 ರನ್​ಗೆ 6 ವಿಕೆಟ್​ ಕಳೆದುಕೊಂಡ ಭಾರತ ಅಲ್ಪಮೊತ್ತಕ್ಕೆ ಆಲೌಟಾಗುವ ಸ್ಥಿತಿಯಲ್ಲಿತ್ತು. ಆಗ ಕ್ರೀಸ್​ಗಿಳಿದ ಅಶ್ವಿನ್​ ಒತ್ತಡದಲ್ಲಿ ನಿರ್ಭೀತಿ ಇನ್ನಿಂಗ್ಸ್ ಕಟ್ಟಿದ್ರು. ತಾನಾಡಿದ ಬೆಳೆದ ಅಂಗಳದಲ್ಲೆ ಅಮೋಘ ಸೆಂಚುರಿ ಸಿಡಿಸಿದ್ರು. 108 ಎಸೆತಗಳಲ್ಲಿ ಬಿರುಸಿನ ಶತಕ ಬಾರಿಸಿದ ಆಲ್​ರೌಂಡರ್​ ಟೀಮ್ ಇಂಡಿಯಾಗೆ ಸಂಕಷ್ಟಹರನಾದ್ರು. ರೆಡ್​ಬಾಲ್​ ಆಟವನ್ನ ವೈಟ್​ಬಾಲ್​ನಂತೆ ಆಡಿದ ಅಶ್ವಿನ್​ ಚೆಪಾಕ್​​ ಮೈದಾನದಲ್ಲಿ 2ನೇ ಶತಕ ದಾಖಲಿಸಿದ್ರು.

ಜಡೇಜಾ ಜೊತೆ ಅಮೋಘ 195 ರನ್​ಗಳ ಜೊತೆಯಾಟ
ಚೆಪಾಕ್​ ಟೆಸ್ಟ್​​​​​​​ನ ಮೊದಲ ದಿನದ ಹೀರೋಗಳಂದ್ರೆ ಅದು ಆಲ್​ರೌಂಡರ್​ ಆರ್​ ಅಶ್ವಿನ್ ಹಾಗೂ ರವೀಂದ್ರ ಜಡೇಜಾ. ತಂಡ ಸಂಕಷ್ಟದಲ್ಲಿದ್ದಾಗ ಇಬ್ಬರು ಟೊಂಕಕಟ್ಟಿ ನಿಂತ್ರು. ಬಾಂಗ್ಲಾ ಬೌಲರ್​ಗಳನ್ನ ಹೈರಾಣಾಗಿಸಿದ ಈ ಭಲೇ ಜೋಡಿ ಅತ್ಯಾಮೂಲ್ಯ 195 ರನ್​​ಗಳ ಜೊತೆಯಾಟ ನಡೆಸಿದ್ರು. ಆಕ್ರಮಣಕಾರಿ ಆಟವಾಡಿದ ಅಶ್ವಿನ್ ಅಜೇಯ 102 ರನ್ ಗಳಿಸಿದ್ರೆ ಜಡ್ಡು 86 ರನ್ ಗಳಿಸಿ ಮೆರೆದಾಡಿದ್ರು. ಪರಿಣಾಮ ಭಾರತ ಮೊದ ಇನ್ನಿಂಗ್ಸ್​ನಲ್ಲಿ ಬೃಹತ್​ ಮೊತ್ತದತ್ತ ಹೆಜ್ಜೆ ಹಾಕಿದೆ.

ಇದನ್ನೂ ಓದಿ:ಕೊಹ್ಲಿ, ಗಿಲ್, ರೋಹಿತ್ ಠುಸ್​.. ಭಾರತಕ್ಕೆ ಬಿಗ್ ಶಾಕ್ ಕೊಟ್ಟ ಬಾಂಗ್ಲಾ ತಂಡ..!

ಅಶ್ವಿನ್ ನೋಡಿ ಕಲಿಬೇಕು ಘಟಾನುಘಟಿ ಬ್ಯಾಟರ್ಸ್​
ಚೆಪಾಕ್​​​​ ಮೈದಾನದಲ್ಲಿ ನಂಬಿಗಸ್ಥ ರೋಹಿತ್​ ಶರ್ಮಾ, ಶುಭ್​​ಮನ್ ಗಿಲ್​​​, ಕಿಂಗ್ ಕೊಹ್ಲಿ ಹಾಗೂ ಕೆಎಲ್​ ರಾಹುಲ್​ರಂತ ಸ್ಟಾರ್​ ಕ್ರಿಕೆಟರ್ಸ್​ ಮಕಾಡೆ ಮಲಗಿದ್ರು. ಆದ್ರೆ ಅದೇ ಅಶ್ವಿನ್​​ ಇವರು ಪರದಾಡಿದ ಪಿಚ್​​ನಲ್ಲೆ ಬಿರುಸಿನ ಸೆಂಚುರಿ ಸಿಡಿಸಿ ವಿಜೃಂಭಿಸಿದ್ರು. ಮೊದಲ ಎಸೆತದಿಂದ ಕೊನೆ ಎಸೆತದ ತನಕ ಬಾಂಗ್ಲಾ ಬೌಲರ್​ಗಳನ್ನ ದಿಟ್ಟವಾಗಿ ಎದುರಿಸಿದ್ರು. ಆ ಮೂಲಕ ಟಫ್ ಕಂಡಿಷನ್​ನಲ್ಲಿ ಹೇಗೆ ಆಡ್ಬೇಕು ಅನ್ನೋದನ್ನ ಅಶ್ವಿನ್, ಸ್ಟಾರ್ ಕ್ರಿಕೆಟಿಗರಿಗೆ ತೋರಿಸಿ ಕೊಟ್ಟಿದ್ದಾರೆ.

ಮೊದಲ ದಿನವಂತೂ ಅಶ್ವಿನ್ ಅಮೋಘ ಸೆಂಚುರಿ ಸಿಡಿಸಿ ತಂಡದ ಮಾನ ಕಾಪಾಡಿದ್ದಾರೆ. ಇಂದು ಕೂಡ ಅವರು ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಮೊದಲ ದಿನದ ಘರ್ಜನೆ ಎರಡನೇ ದಿನವೂ ರಿಪೀಟ್​ ಆಗಲಿ. ಭಾರತ ತಂಡ ಬೃಹತ್ ಮೊತ್ತ ಹಾಕುವಂತಾಗಲಿ ಎಂಬುದೇ ಎಲ್ಲಾ ಫ್ಯಾನ್ಸ್ ಆಶಯವಾಗಿದೆ.

ಇದನ್ನೂ ಓದಿ:ಭಾರತ-ಬಾಂಗ್ಲಾ ಮೊದಲ ಟೆಸ್ಟ್​; ಟೀಂ ಇಂಡಿಯಾ ಮುಂದಿರುವ ಹೊಸ ಭರವಸೆಗಳು ಇಲ್ಲಿವೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಅಶ್ವಿನ್ ಶತಕ ವೈಭವ.. ಬಾಂಗ್ಲಾಗೆ ಚೆಕ್​​ಮೇಟ್ ಇಟ್ಟ ಕ್ಷಣ ಹೇಗಿತ್ತು..!

https://newsfirstlive.com/wp-content/uploads/2024/09/ASWHIN-1.jpg

Load More