newsfirstkannada.com

ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗೆ ಅಪ್ಲೇ ಮಾಡಿದವ್ರಿಗೆ ಇಲ್ಲೊಂದು ಮಹತ್ವದ ಮಾಹಿತಿ.. ಏನು?

Share :

Published September 21, 2024 at 7:26pm

    ಯಾರು ಯಾರು ಅರ್ಜಿ ಹಾಕಿದ್ದೀರೋ ಅವರಿಗೆ ಈ ಸುದ್ದಿ

    ಈಗಾಗಲೇ ಹುದ್ದೆಗಳಿಗೆ ಕಾಲ್​​ಫಾರ್ಮ್ ಮಾಡಿದ್ದ ಇಲಾಖೆ

    ನಿಮಗಾಗಿ KEAಯಿಂದ ಮಹತ್ವದ ಸಂದೇಶವಿದೆ, ಏನದು?

ಗ್ರಾಮ ಆಡಳಿತಾಧಿಕಾರಿ (ವಿಎಒ) ಹುದ್ದೆಗಳಿಗೆ ಈಗಾಗಲೇ ಅರ್ಜಿ ಹಾಕಿರುವ ಅಭ್ಯರ್ಥಿಗಳಿಗಾಗಿ ಇಲ್ಲೊಂದು ಮಾಹಿತಿ ಇದೆ. ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಪರೀಕ್ಷೆಗೆ ತಯಾರಿ ನಡೆಸಿ. ಸರ್ಕಾರಿ ಕೆಲಸ ಎಂದ ಮೇಲೆ ಎಲ್ಲರೂ ನಾನು ನಾನು ಎಂದು ಅಪ್ಲೇ ಮಾಡಿರುತ್ತಾರೆ. ಅಪ್ಲೇ ಮಾಡುವುದಕ್ಕಿಂತ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗಿ ಹುದ್ದೆ ಪಡೆಯುತ್ತಾರೆ ಎಂಬುದು ಮುಖ್ಯ.

ಇದನ್ನೂ ಓದಿ: ಡಿಗ್ರಿ ಮಾಡಿದವರಿಗೆ ಗುಡ್​ನ್ಯೂಸ್​​; ಕೆನರಾ ಬ್ಯಾಂಕ್​​ನಲ್ಲಿ 3 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ವು ಗ್ರಾಮ ಆಡಳಿತಾಧಿಕಾರಿ (ವಿಎಒ) ಹುದ್ದೆಗಳಿಗೆ ಸಂಬಂಧ ಪಟ್ಟಂತೆ ಹಾಲ್​​ಟಿಕಟ್​ ರಿಲೀಸ್ ಮಾಡಿದೆ. ಈಗಾಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿರುವ ಅಭ್ಯರ್ಥಿಳು ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಹಾಲ್​​ಟಿಕಟ್ ಅನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು. ಹಾಲ್​ಟಿಕೆಟ್​ ಡೌನ್​​ಲೋಡ್ ಮಾಡಿದ ಬಳಿಕ ಅದರಲ್ಲಿನ ಸೂಚನೆಗಳನ್ನು ಅಭ್ಯರ್ಥಿಗಳು ಗಮನವಿಟ್ಟು ಓದಿಕೊಳ್ಳಬೇಕು. ಏಕೆಂದರೆ ನಿಯಮಗಳನ್ನು ಸರಿಯಾಗಿ ಫಾಲೋ ಮಾಡಿಲ್ಲ ಎಂದರೆ ಪರೀಕ್ಷೆ ಹಾಲ್​ನಿಂದಲೇ ವಾಪಸ್ ಕಳುಹಿಸುವ ಸಂದರ್ಭ ಇರುತ್ತವೆ. ಹೀಗಾಗಿ ಅಭ್ಯರ್ಥಿಗಳು ಸೂಚನೆಗಳನ್ನ ಪಾಲಿಸಲೇಬೇಕು.

ಇದನ್ನೂ ಓದಿ: ಪದವೀಧರರಿಗೆ ಸರ್ಕಾರಿ ಕೆಲಸ.. ಸ್ಯಾಲರಿ ₹95,000; ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು?

ಹಾಲ್​​ಟಿಕೆಟ್​ ಡೌನ್​​ಲೋಡ್ ಮಾಡೋದು ಹೇಗೆ.?
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ. ಇತ್ತೀಚಿನ ಪ್ರಕಟಣೆಗಳು ಎನ್ನುವ ಡೈಲಾಗ್ ಬಾಕ್ಸ್ ಕಾಣುತ್ತದೆ. ಅದರಲ್ಲಿ ‘21-09 VAO- 2024 (ಕಡ್ಡಾಯ ಕನ್ನಡ ಪರೀಕ್ಷೆ- 29/09/2024) ಪ್ರವೇಶ ಟಿಕೆಟ್ ಡೌನ್‌ಲೋಡ್’ ಲಿಂಕ್ ಅನ್ನು ಕ್ಲಿಕ್ ಮಾಡಿ. ಬಳಿಕ ಇನ್ನೊಂದು ಟ್ಯಾಬ್ ಓಪನ್ ಆಗುತ್ತದೆ. ಯಾವ ಪರೀಕ್ಷೆ, ಅರ್ಜಿ ನಂಬರ್ ಹಾಗೂ ನಿಮ್ಮ ಹೆಸರಿನ ಮೊದಲ 4 ಅಕ್ಷರಗಳನ್ನು ಹಾಕಿ, ಸಬ್​ಮೀಟ್ ಸಲ್ಲಿಸಿದರೆ ಸಾಕು ನಿಮ್ಮ ಹಾಲ್​ಟಿಕೆಟ್​ ಡೌನ್​ಲೋಡ್ ಆಗುತ್ತದೆ.

ಕೆಇಎ ಇಲಾಖೆಯ ವೆಬ್​ಸೈಟ್ ಲಿಂಕ್- https://cetonline.karnataka.gov.in/kea/
ಹಾಲ್​ಟಿಕೆಟ್​ ಡೌನ್​​ಲೋಡ್ ಲಿಂಕ್- https://cetonline.karnataka.gov.in/hallticket_va/forms/HALLTICKET.aspx

ರಾಜ್ಯಾದ್ಯಂತ ಒಟ್ಟು 1,000 ಹುದ್ದೆಗಳಿದ್ದು ಅಕ್ಟೋಬರ್ ​29 ರಂದು ಅಂದರೆ ಮುಂದಿನ ತಿಂಗಳು ಆಫ್​​ಲೈನ್​​ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪೇಪರ್-1 ಹಾಗೂ ಪೇಪರ್- 2 ಎಂದು ಎರಡು ಪತ್ರಿಕೆಗಳು ಇರುತ್ತವೆ. ಎರಡಕ್ಕೂ ಅಭ್ಯರ್ಥಿಗಳು ಹಾಜರಾಗಿ ಪರೀಕ್ಷೆ ಬರೆಯಬೇಕು. ಒಂದು ಪ್ರಶ್ನೆಗೆ ಒಂದು ಅಂಕ ಇರುತ್ತದೆ. 4 ಉತ್ತರ ತಪ್ಪು ಆದರೆ 1 ಅಂಕ ಕಡಿತ ಮಾಡಲಾಗುತ್ತದೆ. ಒಂದು ಪೇಪರ್​​ಗೆ 2 ಗಂಟೆ ಕಾಲಾವಕಾಶ ಇರುತ್ತದೆ. ಅಭ್ಯರ್ಥಿಗಳು ಶ್ರದ್ಧೆಯಿಂದ ಪರೀಕ್ಷೆಯನ್ನು ಪಾಸ್ ಮಾಡಲು ಮುಂದಾಗಬೇಕು. ಇಲ್ಲವಾದರೆ ನಿಮ್ಮ ಶ್ರಮವೆಲ್ಲ ನೀರುಪಾಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗೆ ಅಪ್ಲೇ ಮಾಡಿದವ್ರಿಗೆ ಇಲ್ಲೊಂದು ಮಹತ್ವದ ಮಾಹಿತಿ.. ಏನು?

https://newsfirstlive.com/wp-content/uploads/2023/11/PSI_EXAM.jpg

Load More