newsfirstkannada.com

ಜ್ವರ, ಮಧುಮೇಹ, BPಗೆ ತೆಗೆದುಕೊಳ್ಳುವ 50ಕ್ಕೂ ಹೆಚ್ಚು ಮಾತ್ರೆಗಳು ಅಪಾಯ.. ಶಾಕಿಂಗ್ ಮಾಹಿತಿ ಬಹಿರಂಗ!

Share :

Published September 26, 2024 at 2:33pm

    ಈ ಔಷಧಗಳು ಬಳಕೆ ಮಾಡುವ ಮುನ್ನ ರೋಗಿಗಳೇ ಹುಷಾರ್!

    ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್​ ಕಂಟ್ರೋಲ್ ಆರ್ಗನೈಸೇಶನ್ ಮಾಹಿತಿ

    ಮಾರುಕಟ್ಟೆಯಲ್ಲಿ ಇದೇ ಔಷಧಿ ಮಾರಾಟ ಆಗುತ್ತಿರುವುದು ಆತಂಕಕಾರಿ

ನವದೆಹಲಿ: 50ಕ್ಕೂ ಹೆಚ್ಚು ಔಷಧಿಗಳಲ್ಲಿ ಗುಣಮಟ್ಟದ ಮಾನದಂಡ ಪೂರೈಸಲು ಔಷಧಿ ಕಂಪನಿಗಳು ವಿಫಲಗೊಂಡಿವೆ ಎಂದು ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್​ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್​​ಸಿಒ) ಸಮೀಕ್ಷೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಊಟದ ಜೊತೆಗೆ Green Chilli ತಿನ್ನುತ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು; ಹೇಗೆ ಗೊತ್ತಾ?

ಕೇಂದ್ರ ಸರ್ಕಾರದ ಸಿಡಿಎಸ್​​ಸಿಒ ನಡೆಸಿದ ಸಮೀಕ್ಷೆಯಲ್ಲಿ ಸನ್ ಫಾರ್ಮಾಸ್ಯುಟಿಕಲ್ಸ್ ಹಾಗೂ ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್‌ನಂತಹ ಪ್ರಮುಖ ಕಂಪನಿ ಸೇರಿದಂತೆ ಇನ್ನಿತರ ಕಂಪನಿಗಳ ಉತ್ಪನ್ನಗಳನ್ನ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಈ ಔಷಧಿಗಳಲ್ಲಿ ಖಾಸಗಿ ಕಂಪನಿಗಳು ಸರ್ಕಾರದ ಅಡಿ ಬರುವ ಸಿಡಿಎಸ್​​ಸಿಒ ಮಾನದಂಡ, ಸುರಕ್ಷತೆ ಪಾಲನೆ ಮಾಡಿಲ್ಲ. ಜ್ವರ, ಅಧಿಕ ರಕ್ತದೊತ್ತಡ, ಮಧುಮೇಹ, ಆಸಿಡ್ ರಿಫ್ಲಕ್ಸ್ (asid reflux), ಎರಿಕ್ಟಲ್ ಡೈಸಕ್ಷನ್ (erectile dysfunction) ಇವುಗಳಿಗೆ ವೈದ್ಯರು ಶಿಫಾರಸು ಮಾಡುವಂತ 50ಕ್ಕೂ ಹೆಚ್ಚು ಔಷಧಿಗಳು ಗುಣಮಟ್ಟದಲ್ಲಿಲ್ಲ, ಕೆಳದರ್ಜೆಯದ್ದಾಗಿವೆ. ಇವು ಬಳಕೆಗೆ ಅಸುರಕ್ಷಿತ ಎಂದು ಸಮೀಕ್ಷೆ ಹೇಳುತ್ತದೆ.

ಇದನ್ನೂ ಓದಿ: Hydrated; ಅತಿಯಾಗಿ ನೀರು ಕುಡಿದರೂ ಅಪಾಯ.. ಆರೋಗ್ಯಕ್ಕೆ ಹೇಗೆ ಹಾನಿಯಾಗುತ್ತೆ?

ಕಂಪನಿಗಳು ಸಿಡಿಎಸ್​​ಸಿಒ ಸಂಸ್ಥೆಯ ಸುರಕ್ಷತೆ ಮತ್ತು ಮಾನದಂಡಗಳನ್ನು ಪೂರೈಸದಿದ್ದರೂ ಈ ಔಷಧಿಗಳು ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಸನ್ ಫಾರ್ಮಾಸ್ಯುಟಿಕಲ್ಸ್‌ ತಯಾರಿಸಿದ ಪುಲ್ಮೊಸಿಲ್ (Sildenafil injection), ಇನ್ನೊಂದು ಕಂಪನಿಯ ಆಸಿಡ್ ರಿಫ್ಲಕ್ಸ್‌ಗೆ ಬಳಸುವ ಪ್ಯಾಂಟೊಸಿಡ್‌ (Pantocid), ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ , ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಬಳಸಲಾಗುವ ಟೆಲ್ಮಾ H (Telmisartan 40mg and Hydrochlorothiazide 12.5mg tablets IP) ಪರೀಕ್ಷಿಸಲಾಗಿದೆ. ಆಲ್ಕೆಮ್ ಹೆಲ್ತ್ ಸೈನ್ಸ್‌ನಿಂದ ತಯಾರಿಸಿದ ಕ್ಲಾವಮ್ 625 (Amoxicillin and Potassium Clavulanate tablets IP) ಇವೆಲ್ಲ ಗುಣಮಟ್ಟವನ್ನ ಪಾಲಿಸಿಲ್ಲ. ಹೀಗಾಗಿ ಉಪಯೋಗ ಮಾಡುವಂತಿಲ್ಲ. ಆದರೆ ಈ ಬಗ್ಗೆ ಕಂಪನಿಗಳು ಇವನ್ನು ನಾವು ಉತ್ಪಾದಿಸಿಲ್ಲ, ನಿಲ್ಲಿಸಿದ್ದೇವೆ ಎನ್ನುತ್ತಿವೆ. ಆದರೂ ಮಾರುಕಟ್ಟೆಯಲ್ಲಿ ಇದೇ ಔಷಧಿಗಳು ಮಾರಾಟ ಆಗುತ್ತಿರುವುದು ಆತಂಕಕಾರಿ ಎಂದು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜ್ವರ, ಮಧುಮೇಹ, BPಗೆ ತೆಗೆದುಕೊಳ್ಳುವ 50ಕ್ಕೂ ಹೆಚ್ಚು ಮಾತ್ರೆಗಳು ಅಪಾಯ.. ಶಾಕಿಂಗ್ ಮಾಹಿತಿ ಬಹಿರಂಗ!

https://newsfirstlive.com/wp-content/uploads/2024/09/medicines.jpg

Load More