newsfirstkannada.com

ಮಹಿಳೆಯರಲ್ಲಿ ಕಂಡುಬರುವ ಈ ಲಕ್ಷಣಗಳು ಕ್ಯಾನ್ಸರ್ ಚಿಹ್ನೆ ಆಗಿರಬಹುದು.. ಈಗಲೇ ಎಚ್ಚೆತ್ತುಕೊಳ್ಳಿ..!

Share :

Published September 28, 2024 at 8:52am

Update September 28, 2024 at 11:16am

    ಕ್ಯಾನ್ಸರ್​ ಬಂದಾಗ ದೇಹದಲ್ಲಿ ಯಾವೆಲ್ಲ ಬದಲಾವಣೆ ಆಗುತ್ತೆ?

    ಕ್ಯಾನ್ಸರ್ ಇರೋದು ಮೊದಲೇ ಗೊತ್ತಾದ್ರೆ ಬದುಕುಳಿಯಬಹುದು

    ಕ್ಯಾನ್ಸರ್​​ನ ಆರಂಭಿಕ ಲಕ್ಷಣಗಳು ಏನೇನು ಗೊತ್ತಾ..?

ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ರೋಗಗಳಲ್ಲಿ ಕ್ಯಾನ್ಸರ್ ಮಹಾಮಾರಿಯೂ ಒಂದು. ಕ್ಯಾನ್ಸರ್​​ನಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿವೆ. ಆದರೆ ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಹಚ್ಚಿದರೆ ಬದುಕುಳಿಯುವ ಸಾಧ್ಯತೆ ಹೆಚ್ಚು ಅನ್ನೋದು ತಜ್ಞ ವೈದ್ಯರ ಅಭಿಪ್ರಾಯ.

ಇದನ್ನೂ ಓದಿ:20 ವರ್ಷದ ಸುಂದರಿ ಮೇಲೆ ಅಜ್ಜನಿಗೆ ಲವ್; ಭಾರೀ ಸದ್ದು ಮಾಡ್ತಿದೆ ಈ ಮದುವೆ..! VIDEO

ಗೊತ್ತಾಗೋದು ಹೇಗೆ..?
ದೇಹದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆಗ ನಮ್ಮ ದೇಹವು ನಮ್ಮನ್ನು ಎಚ್ಚರಿಸುತ್ತದೆ. ಪುರುಷರು ಮತ್ತು ಮಹಿಳೆಯರಲ್ಲಿ ಈ ಲಕ್ಷಣಗಳು ವಿಭಿನ್ನವಾಗಿವೆ. ವಿಶೇಷವಾಗಿ ಮಹಿಳೆಯರಲ್ಲಿ ಕ್ಯಾನ್ಸರ್ ಲಕ್ಷಣಗಳು ಯಾವುವು? ಅನ್ನೋ ವಿವರ ಇಲ್ಲಿದೆ.

  • ಮಹಿಳೆಯರಲ್ಲಿ ರಕ್ತಸ್ರಾವವು ಕ್ಯಾನ್ಸರ್‌ನ ಮುಖ್ಯ ಲಕ್ಷಣ. ವಿಶೇಷವಾಗಿ ಮುಟ್ಟಿನ ಸಮಯದಲ್ಲಿ ತೀವ್ರವಾದ ನೋವು ಮತ್ತು ರಕ್ತಸ್ರಾವದಂತಹ ರೋಗ ಲಕ್ಷಣಗಳು ಕಂಡು ಬರುತ್ತದೆ. ಅದು ಗರ್ಭಕಂಠದ ಕ್ಯಾನ್ಸರ್​​ನ ಆರಂಭಿಕ ಲಕ್ಷಣವಾಗಿರಬಹುದು. ಅಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸೂಚನೆಗಳನ್ನು ಅನುಸರಿಸುವುದು ಉತ್ತಮ.
  • ದೇಹದಲ್ಲಿನ ಕೆಲವು ಬದಲಾವಣೆಗಳು ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳೆಂದು ವೈದ್ಯರು ಹೇಳುತ್ತಾರೆ. ಮುಖದ ಕೆಲವು ಭಾಗಗಳು ಊದಿಕೊಂಡಂತೆ ಕಾಣುತ್ತದೆ. ಸ್ತನ ಪ್ರದೇಶದಲ್ಲಿ ಊತ ಕಂಡು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇದು ಕೂಡ ಕ್ಯಾನ್ಸರ್​ನ ಆರಂಭಿಕ ಲಕ್ಷಣ.
  • ಇದ್ದಕ್ಕಿದ್ದಂತೆ ತೂಕ ಕಳೆದುಕೊಳ್ಳುವುದು, ಹೆಚ್ಚಾಗುವುದು ಕೂಡ ಕ್ಯಾನ್ಸರ್​ನ ಆರಂಭಿಕ ಲಕ್ಷಣ. ಈ ರೋಗ ಲಕ್ಷಣಗಳು ಮಹಿಳೆಯರಲ್ಲಿ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
  • ದೇಹದ ಕೆಲವು ಭಾಗಗಳಲ್ಲಿ ದೀರ್ಘಕಾಲದವರೆಗೆ ನೋವು ಕಾಣಿಸಿಕೊಂಡರೆ ತಕ್ಷಣ ಎಚ್ಚೆತ್ತುಕೊಳ್ಳಿ. ವಿಶೇಷವಾಗಿ ಎದೆ, ಹೊಟ್ಟೆಯಲ್ಲಿ ತೀವ್ರವಾದ ನೋವು
  • ಚರ್ಮದ ಬಣ್ಣದಲ್ಲಿ ಬದಲಾವಣೆ ಅಥವಾ ಸುಕ್ಕುಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ. ಅಂತಹ ಲಕ್ಷಣಗಳು ಕಾರಣವಿಲ್ಲದೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ
  • ಜೀರ್ಣಕ್ರಿಯೆಯ ಸಮಸ್ಯೆಗಳನ್ನೂ ಲಘುವಾಗಿ ಪರಿಗಣಿಸಬಾರದು. ನೀವು ದೀರ್ಘಕಾಲದವರೆಗೆ ಅಜೀರ್ಣ ಅಥವಾ ಇತರೆ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸೂಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

ಇದನ್ನೂ ಓದಿ:ಒಂದೇ ಇನ್ನಿಂಗ್ಸ್​​ನಲ್ಲಿ 600ಕ್ಕೂ ಅಧಿಕ ರನ್.. ಮೂವರು ಶತಕ, ಡಬಲ್ ಸೆಂಚುರಿ ಮಿಸ್; ಬೆಚ್ಚಿಬಿದ್ದ ಕಿವೀಸ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆಯರಲ್ಲಿ ಕಂಡುಬರುವ ಈ ಲಕ್ಷಣಗಳು ಕ್ಯಾನ್ಸರ್ ಚಿಹ್ನೆ ಆಗಿರಬಹುದು.. ಈಗಲೇ ಎಚ್ಚೆತ್ತುಕೊಳ್ಳಿ..!

https://newsfirstlive.com/wp-content/uploads/2024/09/cancer-in-women.jpg

Load More