newsfirstkannada.com

ಸರ್ಫರಾಜ್ ಖಾನ್​ ಸಹೋದರ ಮುಶೀರ್ ಖಾನ್ ಕಾರು ಅಪಘಾತ.. ತಲೆಗೆ ಬಲವಾದ ಪೆಟ್ಟು

Share :

Published September 28, 2024 at 12:02pm

    ಇರಾನಿ ಟ್ರೋಫಿ ಮಿಸ್ ಮಾಡಿಕೊಂಡ ಯಂಗ್ ಕ್ರಿಕೆಟರ್​​

    ತಂದೆ ಜೊತೆ ಹೋಗುವಾಗ ಮುಶೀರ್ ಖಾನ್​ಗೆ ಅಪಘಾತ

    ಮುಶೀರ್ ಹೋಗುತ್ತಿದ್ದ ಕಾರು 3-4 ಬಾರಿ ಪಲ್ಟಿ ಆಯಿತಾ?

ಯುವ ಆಟಗಾರ ಸರ್ಫರಾಜ್ ಖಾನ್ ಅವರ ಸಹೋದರ ಯಂಗ್ ಕ್ರಿಕಟರ್ ಮುಶೀರ್ ಖಾನ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್​ ರಿಟೈನ್​.. ಫ್ರಾಂಚೈಸಿಯಿಂದ ಕ್ಯಾಪ್ಟನ್​ಗೆ ಬಿಗ್ ಶಾಕ್?

ಮುಶೀರ್ ಖಾನ್ ಹಾಗೂ ಅವರ ತಂದೆ ಉತ್ತರ ಪ್ರದೇಶದಲ್ಲಿನ ಕಾನ್ಪುರದಿಂದ ಲಕ್ನೋಗೆ ಕಾರಿನಲ್ಲಿ ಹೋಗುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮುಶೀರ್ ಖಾನ್, ತಂದೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು 3-4 ಬಾರಿ ಪಲ್ಟಿ ಆಗಿದ್ದರಿಂದ ಮುಶೀರ್ ಖಾನ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ವರದಿ ಹೇಳುತ್ತದೆ. ಆದರೆ ನಿಖರ ಮಾಹಿತಿ ಇಲ್ಲ. ಸದ್ಯ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ

ಅಕ್ಟೋಬರ್ 1 ರಿಂದ ನಡೆಯುವ ಇರಾನಿ ಟ್ರೋಫಿಗೆ ಆಯ್ಕೆ ಆಗಿದ್ದ ಮುಶೀರ್ ಖಾನ್, ಇನ್ನೇನು ಅಭ್ಯಾಸಕ್ಕೆ ಮರಳಬೇಕಿತ್ತು. ಅಲ್ಲದೇ ಮುಂಬರುವ 2024-25ರ ರಣಜಿ ಟ್ರೋಫಿಗೂ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಇತ್ತೀಚೆಗಷ್ಟೇ ನಡೆದಿದ್ದ ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಬಿ ತಂಡದಲ್ಲಿ 181 ರನ್​ಗಳನ್ನು ಸಿಡಿಸಿ ತಂಡದ ಗೆಲುವಿಗೆ ಮುಶೀರ್ ಖಾನ್ ಕಾರಣನಾಗಿದ್ದನು. ಇನ್ನು ಮುಶೀರ್ ಖಾನ್ ಅಪಘಾತದ ಕುರಿತು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ನಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸರ್ಫರಾಜ್ ಖಾನ್​ ಸಹೋದರ ಮುಶೀರ್ ಖಾನ್ ಕಾರು ಅಪಘಾತ.. ತಲೆಗೆ ಬಲವಾದ ಪೆಟ್ಟು

https://newsfirstlive.com/wp-content/uploads/2024/09/Musheer_Khan_NEW.jpg

Load More