newsfirstkannada.com

Electric Chair ಮೇಲೆ ಕೂರಿಸಿ ವಿದ್ಯಾರ್ಥಿಗೆ ಶಿಕ್ಷೆ ನೀಡಿದ ಶಾಲಾ ಸಿಬ್ಬಂದಿ? ಆಮೇಲಾಗಿದ್ದೇನು?

Share :

Published September 28, 2024 at 5:13pm

Update September 28, 2024 at 5:50pm

    ಮಕ್ಕಳನ್ನು ಶಿಕ್ಷಿಸಲು ಎಲೆಕ್ಟ್ರಕ್ ಚೇರ್ ಬಳಸಿದ್ರಾ ಶಾಲಾ ಸಿಬ್ಬಂದಿ

    ಉತ್ತರಪ್ರದೇಶದಲ್ಲಿ ಪೋಷಕರನ್ನು ಬೆಚ್ಚಿ ಬೀಳಿಸಿದ ಖಾಸಿಗಿ ಶಾಲೆ

    ಪೋಷಕರು ನೀಡಿದ ದೂರಿನ ಬಗ್ಗೆ ಶಿಕ್ಷಣ ಇಲಾಖೆ ಹೇಳಿದ್ದೇನು?

ಉತ್ತರಪ್ರದೇಶದ ಹತ್ರಾಸ್​ನಲ್ಲಿ ಇತ್ತೀಚೆಗಷ್ಟೇ ಶಾಲಾ ಮಗುವನ್ನು ಭಾನಾಮತಿ ಪೂಜೆಗಾಗಿ ನರಬಲಿ ನೀಡಿದ್ದು ಸುದ್ದಿಯಾಗಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಆ ಘಟನೆ ಮಾಸುವ ಮುನ್ನವೇ ಈಗ ಅದೇ ಉತ್ತರಪ್ರದೇಶದ ಅಲಿಘರ್​ ಜಿಲ್ಲೆಯಲ್ಲಿ ವಿದ್ಯಾರ್ಥಿಯನ್ನು ಹೆದರಿಸಲು ಅಂತ ಎಲೆಕ್ಟ್ರಿಕ್ ಚೇರ್ ಬಳಸಿದ್ದು ಈಗ ದೊಡ್ಡ ಆಕ್ರೋಶಕ್ಕೆ ಕಾರಣವಾಗಿದೆ.
ಮಕ್ಕಳು ಓದುವುದಿಲ್ಲ,, ಹಠ ಮಾಡುತ್ತಾರೆ ಅಂದ್ರೆ ಕೊಂಚ ಗದರಿಸಿ ಅವರಿಗೆ ಓದುವಂತೆ ಮಾಡುತ್ತಾರೆ ಎಲ್ಲ ಶಿಕ್ಷಕರು ಆದ್ರೆ ಉತ್ತರಪ್ರದೇಶದ ಅಲಿಘಡ ಜಿಲ್ಲೆಯಲ್ಲಿ ಖಾಸಗಿ ಶಾಲೆಯಲ್ಲಿ ಮಗುವಿಗೆ ಶಿಕ್ಷೆ ನೀಡಲು ರಾಕ್ಷಸ ಕೃತ್ಯ ನಡೆಸಿದ್ದಾರೆ. ಮಕ್ಕಳನ್ನು ಎಲೆಕ್ಟ್ರಿಕ್ ಚೇರ್​ ಮೇಲೆ ಕೂರಿಸಿ ಅವರಿಗೆ ಶಾಕ್ ಕೊಡುವ ರೀತಿ ಹಿಂಸಿಸಿದ ಘಟನೆ ಬೆಳಕಿಗೆ ಬಂದಿದೆ. ಮಕ್ಕಳ ಪೋಷಕರು ಶಿಕ್ಷಣ ಇಲಾಖೆಗೆ ಈ ಬಗ್ಗೆ ದೂರು ನೀಡಿದ್ದು. ಶಿಕ್ಷಣ ಇಲಾಖೆ ಶಾಲೆಯ ವಿರುದ್ಧ ಶೋಕಾಸ್ ನೋಟಿಸ್ ನೀಡಿದೆ.

ಇದನ್ನೂ ಓದಿ: ಚುನಾವಣಾ ಬಾಂಡ್ ಮೂಲಕ ಸುಲಿಗೆ ಕೇಸ್​​; ನಿರ್ಮಲಾ ಸೀತಾರಾಮನ್ ವಿರುದ್ಧ FIR

ಶಿಕ್ಷಣ ಇಲಾಖೆಯ ಅಧಿಕಾರಿ ರಾಕೇಶ್ ಕುಮಾರ್ ಇದರ ಬಗ್ಗೆ ಮಾತನಾಡಿದ್ದು, ವಿದ್ಯಾರ್ಥಿಗಳ ಮೇಲಾದ ದೌರ್ಜನ್ಯದ ವಿಷಯವನ್ನು ಪೋಷಕರು ನಮ್ಮ ಗಮನಕ್ಕೆ ತಂದಿದ್ದಾರೆ. ಮಕ್ಕಳನ್ನು ಶಿಕ್ಷಿಸಲು ಅಂತ ಎಲೆಕ್ಟ್ರಿಕಲ್ ಚೇರ್ ಮೇಲೆ ಕೂರಿಸಿ ಅವರಿಗೆ ಹಿಂಸಿಸಲಾಗಿದೆಯಂತೆ. ಆದರೆ ನಾವು ಶಾಲಾ ಸಿಸಿಟಿವಿಯನ್ನು ಚೆಕ್ ಮಾಡಿದ್ದೇವೆ ಅಲ್ಲಿ ಯಾವುದೇ ಎಲೆಕ್ಟ್ರಿಕ್ ಚೇರ್ ಆಗಲಿ ಮಕ್ಕಳನ್ನು ಹಿಂಸಿಸಿದ್ದಾಗಲಿ ಕಂಡು ಬಂದಿಲ್ಲ ಎಂದು ರಾಕೇಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: 20 ವರ್ಷದ ಸುಂದರಿ ಮೇಲೆ ಅಜ್ಜನಿಗೆ ಲವ್; ಭಾರೀ ಸದ್ದು ಮಾಡ್ತಿದೆ ಈ ಮದುವೆ..! VIDEO

ತಪಾಸಣೆ ವೇಳೆ ಶಾಲೆಯಲ್ಲಿ ಅನೇಕ ಸಮಸ್ಯೆಗಳು ಆಗಿರುವ ವಿಷಯ ಗಮನಕ್ಕೆ ಬಂದಿದೆ. 4ನೇ ತರಗತಿಯ ವಿದ್ಯಾರ್ಥಿಯನ್ನು ಹೊಡಿದಿರುವ ವಿಷಯ ವರದಿಯಾಗಿದೆ ಅದು ಅಲ್ಲದೇ ಈ ಶಾಲೆ 1 ರಿಂದ 8ನೇ ತರಗತಿಯವರೆಗೆ ನಡೆಸಲು ಯಾವುದೇ ಪರವಾನಿಗೆ ಹೊಂದಿಲ್ಲ ಆದರೂ ಕೂಡ ನಡೆಸುತ್ತಿದ್ದು ಇದರ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಅದರ ಜೊತೆಗೆ ನಾವು ಇಡೀ ಶಾಲೆಯನ್ನು ಜಾಲಾಡಿದ್ದೇವೆ ಯಾವುದೇ ರೀತಿಯ ಎಲೆಕ್ಟ್ರಿಕ್ ಚೇರ್ ಶಾಲೆಯಲ್ಲಿರುವುದು ಕಂಡು ಬಂದಿಲ್ಲ. ಆದರೆ ಮಗುವನ್ನು ಹೆದರಿಸಲು ನಿನ್ನನ್ನು ಎಲೆಕ್ಟ್ರಕ್ ಚೇರ್ ಮೇಲೆ ಕೂರಿಸುವುದಾಗಿ ಹೆದರಿಸಿದ್ದು ಗಮನಕ್ಕೆ ಬಂದಿದೆ. ಈ ರೀತಿಯ ಬೆದರಿಕೆಗಳು ಶಿಕ್ಷಣ ಹಕ್ಕಿನ ವಿರುದ್ಧ ಇರುವುದರಿಂದ ಶಾಲಾ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಕೇಶ್ ಕುಮಾರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Electric Chair ಮೇಲೆ ಕೂರಿಸಿ ವಿದ್ಯಾರ್ಥಿಗೆ ಶಿಕ್ಷೆ ನೀಡಿದ ಶಾಲಾ ಸಿಬ್ಬಂದಿ? ಆಮೇಲಾಗಿದ್ದೇನು?

https://newsfirstlive.com/wp-content/uploads/2024/09/Electric-Chari.jpg

Load More