newsfirstkannada.com

ರಿಟೈನ್ ರೂಲ್ ಅಧಿಕೃತ ಘೋಷಣೆ; ಆರ್​ಸಿಬಿ ಉಳಿಸಿಕೊಳ್ಳುವ 5 ಆಟಗಾರರು ಇವರೇ..!

Share :

Published September 29, 2024 at 12:52pm

    ಆರ್​​ಸಿಬಿ ಫ್ಯಾನ್ಸ್​ ಮನದಲ್ಲಿ ಹೆಚ್ಚಾಯ್ತು ತಳಮಳ

    ರೆಡ್​ ಆರ್ಮಿಯ ರಿಟೈನ್ ಆಟಗಾರರ​​ ಲಿಸ್ಟ್​​ ರೆಡಿ

    ವಿರಾಟ್​ ಕೊಹ್ಲಿ ಜೊತೆ ನಾಲ್ವರಿಗೆ ಹಾಕಲಿದೆ ಮಣೆ..!

2025ನೇ ಐಪಿಎಲ್​​​​ ಮೆಗಾ ಆಕ್ಷನ್ ಆರಂಭಕ್ಕೆ ಕೆಲ ತಿಂಗಳಷ್ಟೇ ಬಾಕಿ ಇದೆ. ಅದಕ್ಕೂ ಮುನ್ನ ಯಾವ ಫ್ರಾಂಚೈಸಿ, ಯಾರನ್ನ ರಿಟೇನ್ ಮಾಡಿಕೊಳ್ಳುತ್ತೆ? ಯಾರನ್ನೆಲ್ಲಾ ರಿಲೀಸ್ ಮಾಡುತ್ತೆ ಅನ್ನೋ ಕುತೂಹಲ ಗರಿಗೆದರಿದೆ. ಅದರಲ್ಲೂ ಆರ್​ಸಿಬಿ ಯಾರನ್ನು ಉಳಿಸಿಕೊಳ್ಳುತ್ತೆ ಅನ್ನೋ EXCITEMENT ಫ್ಯಾನ್ಸ್​ ಹಾರ್ಟ್ ಬೀಟ್ ಡಬಲ್ ಮಾಡಿದೆ.

18ನೇ ಐಪಿಎಲ್​​ ಸೀಸನ್​​ಗೆ ಐಪಿಎಲ್​​ ಫ್ರಾಂಚೈಸಿಗಳ ಸಿದ್ಧತೆ ಜೋರಾಗಿದೆ. ಈಗಾಗಲೇ ನ್ಯೂ ಸಂಪೋರ್ಟಿಂಗ್ ಸ್ಟಾಫ್​​​ಗಳನ್ನ ನೇಮಿಸಿಕೊಂಡಿರುವ ಫ್ರಾಂಚೈಸಿಗಳು, ಸೀಸನ್​​​​-18ರ ಐಪಿಎಲ್​​ನಲ್ಲಿ ಹೊಸ ರೂಪದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಹೊರತಾಗಿಲ್ಲ.

ಇದನ್ನೂ ಓದಿ:2024ರ IPLನಲ್ಲಿ ಅತ್ಯಧಿಕ ಸಂಭಾವನೆ ಪಡೆದಿದ್ದು ಯಾರು? ಭಾರತದವರೇ ಆದ್ರೆ ಕೊಹ್ಲಿ, ರೋಹಿತ್ ಅಲ್ಲ!

ಐಪಿಎಲ್ ಗೌರ್ನಿಂಗ್ ಕೌನ್ಸಿಲ್ ಸಭೆ ಕರೆದಿದ್ದು, ರಿಟೈನ್​ ಆಟಗಾರರ ಸಂಖ್ಯೆಯನ್ನ ಐದಕ್ಕೇರಿಸಿದೆ. ಜೊತೆಗೆ ಒಂದು ರೈಟ್​ ಟು ಮ್ಯಾಚ್ ಕಾರ್ಡ್​ ಬಳಕೆಗೆ ಅಸ್ತು ಎಂದಿರುವ ಐಪಿಎಲ್ ಕೌನ್ಸಿಲ್, ಇನ್ನಷ್ಟೇ ಅಧಿಕೃತ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಆರ್​ಸಿಬಿ ಯಾರನ್ನ ರಿಲೀಸ್​ ಮಾಡುತ್ತೆ. ಯಾರನ್ನ ಉಳಿಸಿಕೊಳ್ಳುತ್ತೆ ಎಂಬ ಲೆಕ್ಕಾಚಾರಗಳು ಜೋರಾಗಿದೆ.

ವಿರಾಟ್​ ಕೊಹ್ಲಿ (17 ಕೋಟಿ), ಮ್ಯಾಕ್ಸ್​ವೆಲ್​ (14 ಕೋಟಿ), ಮೊಹಮ್ಮದ್ ಸಿರಾಜ್ (11 ಕೋಟಿ), ವಿಲ್​ ಜಾಕ್ಸ್ (8 ಕೋಟಿ), ರಜತ್ ಪಟಿದಾರ್ (5 ಕೋಟಿ) ಈ ಸ್ಟಾರ್ ಆಟಗಾರ ಉಳಿಸಿಕೊಳ್ಳಲು ಮುಂದಾಗಿದೆ. ಈ ರಿಟೈನ್ ಲೆಕ್ಕಚಾರದ ಹಿಂದೆ ರೆಡ್​ ಆರ್ಮಿಯ ಮೆಗಾ ಸ್ಟ್ರಾಟರ್ಜಿ ಜೊತೆಗೆ ಕಾರಣಗಳೂ ಅಡಗಿದೆ. ಮೊದಲ ಮೂರು ಆಯ್ಕೆ ಆಟಗಾರರಿಗೆ ಹಣದಲ್ಲೂ ಹೆಚ್ಚಳ ಮಾಡೋ ಚಿಂತನೆಯಲ್ಲಿದೆ.

ವೈಫಲ್ಯದ ನಡುವೆಯೂ ಮ್ಯಾಕ್ಸಿಗೆ ಮಣೆ ಹಾಕುತ್ತಾ?
ಆರ್​ಸಿಬಿಯ 2ನೇ ರಿಟೈನ್ ವಿಲ್ ಜಾಕ್ಸ್ ಆಗಿರ್ತಾರೆ ಅನ್ನೋದು ಎಲ್ಲರ ಲೆಕ್ಕಚಾರ. ಬಿಗ್ ಹಿಟ್ಟರ್​ ವಿಲ್​ ಜಾಕ್ಸ್​ ಬದಲಿಗೆ 2ನೇ ಆಟಗಾರನಾಗಿ ಮ್ಯಾಕ್ಸಿಗೆ ಮಣೆ ಹಾಕುವ ಚಿಂತನೆಯಲ್ಲಿದೆ. ಸಿಂಗಲ್ ಹ್ಯಾಂಡೆಡ್ಲಿ ಮ್ಯಾಚ್ ಗೆಲ್ಲಿಸೋ ಮ್ಯಾಕ್ಸಿ, ಕಳೆದ ಸೀಸನ್​​ನಲ್ಲಿ ಸೈಲೆಂಟ್​ ಆಗಿದ್ದರು. ಹಿಂದಿನ 2 ಸೀಸನ್​​ಗಳಲ್ಲಿ ರಿಯಲ್​​ ಗೇಮ್​ ಚೇಂಜರ್ ಆಗಿದ್ರು. ಈ ಕಾರಣಕ್ಕೆ ತಂಡದಲ್ಲಿಟ್ಟುಕೊಳ್ಳುವ ಲೆಕ್ಕಚಾರ ಆರ್​ಸಿಬಿ ಮುಂದಿದೆ.

ಇದನ್ನೂ ಓದಿ:6 ಆಟಗಾರರ​ ರಿಟೈನ್​ಗೆ ಅನುಮತಿ.. ಧೋನಿಗೂ ಗುಡ್​ನ್ಯೂಸ್ ಕೊಟ್ಟ ಬಿಸಿಸಿಐ..!​

ಮೊಹಮ್ಮದ್ ಸಿರಾಜ್ ಕೈ ಹಿಡಿಯಲಿದೆ ಆರ್​​ಸಿ​ಬಿ
ಕಳೆದ ಕೆಲ ವರ್ಷಗಳಿಂದ ಆರ್​ಸಿಬಿಯ ಫ್ರಂಟ್ ಲೈನ್ ಬೌಲರ್ ಅನ್ನೋದ್ರಲ್ಲೇ ಡೌಟೇ ಇಲ್ಲ. ಆರ್​ಸಿಬಿಯಲ್ಲಿರುವ ಏಕೈಕ ಅನುಭವಿ ಹಾಗೂ ಸ್ಟಾರ್​ ಬೌಲರ್​ ಸಿರಾಜ್. ಘಾತುಕ ದಾಳಿ ನಡೆಸಬಲ್ಲ ಸಿರಾಜ್​, ಯಾವುದೇ ಕ್ಷಣದಲ್ಲಾದರೂ ಗೇಮ್ ಚೇಂಜರ್ ಆಗಬಲ್ಲರು. ಜೊತೆಗೆ ವಿರಾಟ್​​ ಕೊಹ್ಲಿಯ ಆಪ್ತ. ಹೀಗಾಗಿ ಸಿರಾಜ್ ರಿಟೈನ್ ಆಗೋದು ಬಹುತೇಕ ಫಿಕ್ಸ್​ ಎಂದು ಹೇಳಲಾಗ್ತಿದೆ.

ವಿಲ್​ ಜಾಕ್ಸ್​ ಬಗ್ಗೆಯೂ ಆರ್​ಸಿಬಿಗೆ ಇದೆ ಒಲವು​
ವಿಲ್​ ಜಾಕ್ಸ್​.. ದಿ ಬಿಗ್ ಮ್ಯಾಚ್ ವಿನ್ನರ್ ಪ್ಲೇಯರ್. ಈತ ಕ್ರೀಸ್​ನಲ್ಲಿದ್ರೆ, ಸಿಕ್ಸರ್​ಗಳ ಸುರಿಮಳೆ ಫಿಕ್ಸ್​.. ಎಂಥಹ ಘಟಾನುಘಟಿ ಬೌಲರ್​​​​ಗಳನ್ನಾಗಲಿ ಸುಲಭವಾಗಿ ಡೀಲ್ ಮಾಡುವ ಈತ, ಕಳೆದ ಸೀಸನ್​​ನಲ್ಲಿ ಸೃಷ್ಟಿಸಿದ್ದ ವಿಧ್ವಂಸ ಕಣ್ಮುಂದೆಯೇ ಇದೆ. ಹೀಗಾಗಿ ಈ ರಣವಿಕ್ರಮನ ತಂಡದಲ್ಲಿ ಉಳಿಸಿಕೊಳ್ಳಲು ಆರ್​ಸಿಬಿ ಆಸಕ್ತಿ ತೋರಿದೆ.

ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಟಿ20 ಸರಣಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ಸ್ಟಾರ್​ ಆಟಗಾರರೇ ಔಟ್​

ರಜತ್​ ಪಟಿದಾರ್​ಗೆ ಬಂಪರ್ ಪಕ್ಕಾ
ರಜತ್ ಪಟಿದಾರ್, ಆರ್​ಸಿಬಿಯಲ್ಲೇ ಉಳಿಯೋ ಚಾನ್ಸ್ ಇದೆ. ಮಿಡಲ್ ಆರ್ಡರ್​ನ ಬಲವಾಗಿರುವ ಪಟಿದಾರ್, ಕ್ರೂಶಿಯಲ್ ಮ್ಯಾಚ್​ಗಳಲ್ಲಿ ತಂಡದ ಕೈ ಹಿಡಿದಿದ್ದಾರೆ. ಆರ್​ಸಿಬಿಯ ಭವಿಷ್ಯದ ನಾಯಕನಾಗುವ ಲಕ್ಷಣಗಳಿವೆ. ಈ ಕಾರಣಕ್ಕೆ ಈತನ ಉಳಿಸಿಕೊಳ್ಳುವುದು ಗ್ಯಾರಂಟಿ. ಐವರನ್ನ ರಿಟೈನ್​ ಮಾಡಿಕೊಳ್ಳಲಿರುವ ಆರ್​ಸಿಬಿ, ಯಾರಿಗೆ ಶಾಕ್ ಕೊಡುತ್ತೋ..? ಯಾರಿಗೆ ಸರ್​ಪ್ರೈಸ್​ ಗಿಫ್ಟ್​ ನೀಡುತ್ತೋ ಎಂಬುವುದರ ಜೊತೆಗೆ ಮೆಗಾ ಹರಾಜಿನಲ್ಲಿ ರೈಟ್​​ ಟು ಮ್ಯಾಚ್ ಕಾರ್ಡ್​ ಬಳಸಿ ಯಾರನ್ನ ಖರೀದಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಿಟೈನ್ ರೂಲ್ ಅಧಿಕೃತ ಘೋಷಣೆ; ಆರ್​ಸಿಬಿ ಉಳಿಸಿಕೊಳ್ಳುವ 5 ಆಟಗಾರರು ಇವರೇ..!

https://newsfirstlive.com/wp-content/uploads/2023/12/Kohli_Maxi1.jpg

Load More