ಮುದ್ದಿನ ಶ್ವಾನಕ್ಕಾಗಿ ಬರೋಬ್ಬರಿ 75 ಸಿಸಿಟಿವಿ ದೃಶ್ಯ ಪರಿಶೀಲನೆ!
ಅಷ್ಟಕ್ಕೂ ರಾಲ್ಫ್ ಶ್ವಾನ ಮನೆಯಿಂದ ಹೇಗೆ ಮಿಸ್ ಆಗಿ ಹೋಯ್ತು?
ಸಿಸಿಟಿವಿಯಿಂದ ಸಿಕ್ಕ ಸಣ್ಣ ಸುಳಿವಿನಿಂದ ಕೊನೆಗೂ ಸಿಕ್ಕಿದ್ದೇ ರೋಚಕ
ನಿಜಕ್ಕೂ ಇದೊಂದು ಮನ ಮಿಡಿಯುವ ಕಥೆ. ಕಣ್ಣು ಕಾಣದ ಶ್ವಾನವೊಂದು ಮನೆ ಬಿಟ್ಟು ಹೋದ ನಂತರ ಪ್ರತಿ ಸನ್ನಿವೇಶವೂ ಎಮೋಷನ್‌ನಿಂದ ಕೂಡಿದೆ. ಶ್ವಾನ ಮಾಲೀಕರ ಶ್ರಮವಂತೂ ಹೇಳತಿರದು. ಅಮ್ಮ, ಮಗ ಇಬ್ಬರೇ ಬರೋಬ್ಬರಿ 75 ಸಿಸಿಟಿವಿ ದೃಶ್ಯವನ್ನ ಪರಿಶೀಲನೆ ನಡೆಸಿದ್ದಾರೆ. ರಿಷಬ್ ಚೌಧರಿ ಹಲವು ವರ್ಷಗಳ ನಂತರ ಲಂಡನ್‌ನಿಂದ ಬೆಂಗಳೂರಿಗೆ ಬಂದಿದ್ದರು. ಆಗಸ್ಟ್ 23ಕ್ಕೆ ಬಂದ ರಿಷಬ್, ಮೊದಲು ಅಪ್ಪ-ಅಮ್ಮನ ನೋಡಿದ ಬಳಿಕ ತಮ್ಮ ಪ್ರೀತಿಯ ನಾಯಿಯನ್ನು ಮುದ್ದಾಡಬೇಕು ಅಂದುಕೊಂಡಿದ್ದರು. ಆದರೆ ಮನೆಗೆ ಹೋದ ಮೇಲೆ ರಿಷಬ್ ಕಣ್ಣಿಗೆ ಶ್ವಾನ ರಾಲ್ಫ್ ಕಾಣಿಸಲೇ ಇಲ್ಲ. ಎಲ್ಲಿ ಹುಡುಕಿದರೂ ರಾಲ್ಫ್ ಬರಲೇ ಇಲ್ಲ. ಕೊನೆಗೆ ರಾಲ್ಫ್ ಮೂರು ದಿನದಿಂದ ಕಾಣಿಸುತ್ತಿಲ್ಲ ಅನ್ನೋ ಸತ್ಯ ಗೊತ್ತಾಗಿದೆ. ಆದರೆ ದುರಾದೃಷ್ಟ ಎಂದರೆ 13 ವರ್ಷದ ರಾಲ್ಫ್‌ಗೆ ವಯೋಸಹಜವಾಗಿ, ದೃಷ್ಟಿ ಕಳೆದುಕೊಂಡಿದೆ.
ರಾಲ್ಫ್ ಶ್ವಾನ ಮನೆಯಿಂದ ಹೇಗೆ ಮಿಸ್ ಆಯ್ತು?
ಆಗಸ್ಟ್ 22ರಂದು ರಾಲ್ಫ್ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರೋ ಮನೆಯಿಂದಲೇ ಮಿಸ್ ಆಗುತ್ತೆ. ಮನೆ ಕೆಲಸದವರು ಗೇಟ್ ಕ್ಲೋಸ್ ಮಾಡದೇ ಇರೋದರಿಂದ ರಾಲ್ಫ್, ಹೊರಗೆ ಬಂದು ಮತ್ತೆ ವಾಪಸ್ ಆಗೋಕೆ ಗೊತ್ತಾಗದೇ ಮಿಸ್ಸಿಂಗ್ ಆಗುತ್ತೆ. ಮಂಗಳವಾರ ಮಿಸ್ ಆದ ನಂತರ ಸ್ವತಃ ರಮ್ಯಾ ಅವರೇ ಹುಡುಕಾಟ ನಡೆಸುತ್ತಾರೆ. ಶಿವಾಜಿನಗರ, ಇನ್‌ಫ್ಯಾಂಟ್ರಿ ರೋಡ್, ಕನ್ನಿಂಗ್‌ಹ್ಯಾಮ್ ರೋಡ್, ಕ್ವೀನ್ಸ್ ರೋಡ್‌ನ ಪ್ರತಿ ಕಾರ್ನರ್ಗಳಲ್ಲೂ ಹುಡುಕಾಟ ನಡೆಸುತ್ತಾರೆ. ಕೈಯಲ್ಲಿ ಫೋಟೋ ಹಿಡಿದುಕೊಂಡು, ನಮ್ಮ ರಾಲ್ಫ್‌ನ ಬಗ್ಗೆ ಪರಿ ಪರಿಯಾಗಿ ಜನರನ್ನ ಕೇಳಿಕೊಂಡಿದ್ದಾರೆ. ಆಗ ಬೀದಿಯಲ್ಲಿರುವ ಸಿಸಿಟಿವಿ ದೃಶ್ಯವನ್ನೆಲ್ಲಾ ಚೆಕ್ ಮಾಡುತ್ತಾರೆ. ಆದರೆ ಶ್ವಾನ ಎಲ್ಲೂ ಸಿಗದೇ ಇದ್ದಾಗ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾಗ ಒಂದು ಸುಳಿವು ಸಿಕ್ಕಿದೆ.
ಇನ್‌ಫ್ಯಾಂಟ್ರಿ ರಸ್ತೆಯ ಮನೆಯಿಂದ ರಾಲ್ಫ್ ಹೊರಟ ನಂತರ, ಆಟೋ ಡ್ರೈವರ್‌ನೊಬ್ಬ ಆತನನ್ನ ಪೀಕ್ ಮಾಡ್ಕೊಂಡು ಕಾವಲ್‌ಭೈರಸಂದ್ರ ಏರಿಯಾಗೆ ಕರೆದುಕೊಂಡು ಹೋಗುತ್ತಿರೋ ಸಿಸಿಟಿವಿ ದೃಶ್ಯ ಪೊಲೀಸರಿಗೆ ಸಿಕ್ಕಿದೆ. ಈ ದೃಶ್ಯವನ್ನ ನೋಡಿದ ಪೊಲೀಸರಿಗೆ ಇನ್ನೊಂದು ಸಿಸಿಟಿವಿ ದೃಶ್ಯ ಸಿಗುತ್ತದೆ. ದ್ವಿಚಕ್ರ ವಾಹನದಲ್ಲಿ ಯುವಕನೊಬ್ಬ, ರಾಲ್ಫ್‌ನ ಕೂರಿಸಿಕೊಂಡು ಹೋಗಿರುತ್ತಾನೆ. ಅದು ಕಾವಲ್ ಭೈರಸಂದ್ರದಲ್ಲಿ ಸಿಕ್ಕಿದ ಸಿಸಿಟಿವಿ ದೃಶ್ಯವಾಗಿದೆ.
ಪೊಲೀಸ್ ಅಧಿಕಾರಿಗಳಿಗೆ ಶ್ವಾನ ರಾಲ್ಫ್ ಇದೇ ಏರಿಯಾದಲ್ಲಿ ಇರಬಹುದು ಎಂದು ಅನುಮಾನ ಮೂಡುತ್ತದೆ. ಆಗ ಶ್ವಾನವನ್ನು ಹೇಗಾದರೂ ಮಾಡಿ ಕಂಡು ಹಿಡಿಯಬೇಕೆಂದು ತೀರ್ಮಾನಕ್ಕೆ ಬರುತ್ತಾರೆ. ಕೊನೆಗೂ ಆ ಮನೆ ಸಿಗುತ್ತೆ. ನಂತರ ರಮ್ಯಾ ಅವರಿಗೆ ಈ ಮಾಹಿತಿ ನೀಡುತ್ತಾರೆ. ಆಗ ಈ ವಿಚಾರವನ್ನು ಕೇಳಿದ ರಮ್ಯಾ ಮತ್ತು ರಿಷಬ್ ಖುಷಿಯಾಗ್ತಾರೆ. ಪೊಲೀಸರ ಈ ಮಾನವೀಯತೆಯ ನಡೆ ನಿಜಕ್ಕೂ ಎಲ್ಲರೂ ಮೆಚ್ಚುಗೆಗೆ ಪಾತ್ರವಾಗಿದೆ. 75 ಸಿಸಿಟಿವಿಗಳ ಪರಿಶೀಲನೆ ನಡೆಸಿ, ಪೊಲೀಸರು ಈ ಕುಟುಂಬಕ್ಕೆ ದೊಡ್ಡ ಸಹಾಯ ಮಾಡಿದೆ. ಸದ್ಯ ರಮ್ಯಾ ಅವರ ಕುಟುಂಬ ಹ್ಯಾಪಿಯಾಗಿದೆ. ಒಂದು ಮಗ ಲಂಡನ್‌ನಿಂದ ವಾಪಸ್ ಬಂದಿರೋ ಸಂತೋಷ, ಇನ್ನೊಂದು ರಾಲ್ಫ್ ಸಿಕ್ಕಿರೋ ಖುಷಿ ಸಂತಸದಲ್ಲಿ ತೇಲಾಡುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ