newsfirstkannada.com

‘ಪತ್ನಿ ಒಪ್ಪಿಸಿ ನ್ಯಾಯ ಕೊಡಿಸಿ ಸ್ವಾಮಿ’ ಎಂದು ಹೋದವ್ನಿಗೆ ಪೇದೆ ಆವಾಜ್; ಠಾಣೆಯಲ್ಲೇ ಬೆಂಕಿ ಹಚ್ಚಿಕೊಂಡ-Video

Share :

21-11-2023

    ಬೆದರಿಕೆ ಹಾಕಿದ್ಕೆ ಬೆಂಕಿ ಹಚ್ಚಿಕೊಂಡ ವಿಡಿಯೋ ವೈರಲ್

    ದೃಶ್ಯ ನೋಡಿ ಕಂಗಾಲ್ ಆದ ಪೊಲೀಸ್ ಅಧಿಕಾರಿಗಳು

    ವ್ಯಕ್ತಿ ಶೇ. 80 ರಷ್ಟು ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ

ಪೊಲೀಸ್ ಅಧಿಕಾರಿಯಿಂದ ನೊಂದ ವ್ಯಕ್ತಿಯೊಬ್ಬ ಠಾಣೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ಚಂದ್ರಗಿರಿ ಪೊಲೀಸ್ ಸ್ಟೇಷನ್​ನಲ್ಲಿ ನಡೆದಿದೆ.

ವಿಜಯವಾಡ ಮೂಲದ ಮಣಿಕಂಠ ಎಂಬ ವ್ಯಕ್ತಿಗೆ ಕಾನ್​ಸ್ಟೇಬಲ್ ಶ್ರೀನಿವಾಸ್ ಬೆದರಿಕೆ ಹಾಕಿದ್ರು ಎನ್ನಲಾಗ್ತಿದೆ. ಇದ್ರಿಂದ ಮನನೊಂದ ಮಣಿಕಂಠ ಪೊಲೀಸ್ ಠಾಣೆಯ ಮುಂಭಾಗ ಪೆಟ್ರೋಲ್​ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದಾರೆ. ಇದನ್ನು ಗಮನಿಸಿದ ಇತರೆ ಪೊಲೀಸರು ಹಾಗೂ ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ್ದಾರೆ.

ಏನಿದು ಪ್ರಕರಣದ ಹಿನ್ನೆಲೆ..?

ಬೆಂಕಿ ಹಚ್ಚಿಕೊಂಡಿರುವ ಮಣಿಕಂಠ, ತಮಿಳುನಾಡಿನ ತಿರುತ್ತಣಿಯ ದುರ್ಗಾ ಅನ್ನೋರನ್ನು ಮದುವೆ ಆಗಿದ್ದ. ಇವರಿಬ್ಬರಿಗೆ 8 ವರ್ಷದ ಮಗಳು ಮತ್ತು 5 ವರ್ಷದ ಅಭಯ್ ಎಂಬ ಮಕ್ಕಳಿದ್ದಾರೆ. ಈ ಜೋಡಿ ಜೀವನ ನಿರ್ವಹಣೆಗಾಗಿ ವಿಜಯವಾಡದಿಂದ ಹೈದರಾಬಾದ್​ಗೆ ಬಂದು ನೆಲೆಸಿತ್ತು. ಮೂರು ತಿಂಗಳ ಹಿಂದೆ ಪತಿಯೊಂದಿಗೆ ಮನಸ್ತಾಪ ಮಾಡಿಕೊಂಡು ಪತ್ನಿ ದುರ್ಗಾ ತಿರುಪತಿಗೆ ಬಂದು ನೆಲೆಸಿದ್ದಳು.

ತಿರುಪತಿಗೆ ಬಂದ ದುರ್ಗಾಗೆ ಭಾಕರಪೇಟೆಯ ಸೋನು ಅಲಿಯಾಸ್ ಬಾಷಾ ಎಂಬಾತ ಜೊತೆಯಾಗಿದ್ದ. ಇಬ್ಬರ ಮಧ್ಯೆ ಅಕ್ರಮ ಸಂಬಂಧ ಹುಟ್ಟಿಕೊಂಡಿತ್ತು. ಈ ಜೋಡಿ ಚಂದ್ರಗಿರಿ ಪೊಲೀಸ್ ಠಾಣೆಯಲ್ಲಿ ಪೇದೆ ಪಗಡಲ ಶ್ರೀನಿವಾಸ್ ಸಹಾಯದಿಂದ ಭಾಕರಪೇಟೆಯಲ್ಲಿ ಇಬ್ಬರೂ ಒಟ್ಟಿಗೆ ವಾಸಿಸಲು ಶುರುಮಾಡಿದ್ದರು. ಈ ವಿಷಯ ತಿಳಿದ ಪತಿ ಮಣಿಕಂಠ ಚಂದ್ರಗಿರಿ ಠಾಣೆಗೆ ಆಗಮಿಸಿದ್ದ. ಪತ್ನಿಯ ಬಗ್ಗೆ ಕಾನ್‌ಸ್ಟೆಬಲ್ ಶ್ರೀನುವಾಸ್ ಬಳಿ ಪ್ರಶ್ನೆ ಮಾಡಿದ್ದಾನೆ. ಆಗ ಮಣಿಕಂಠಗೆ ಪತ್ನಿಯನ್ನು ಬಿಟ್ಟು ಹೋಗುವಂತೆ ಕಾನ್ ಸ್ಟೇಬಲ್ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅದಕ್ಕೆ ಬೇಸರಗೊಂಡ ಮಣಿಕಂಠ, ಸ್ಟೇಷನ್ ಪಕ್ಕದ ಪೆಟ್ರೋಲ್ ಬಂಕ್ ನಿಂದ 5 ಲೀ. ಪೆಟ್ರೋಲ್ ತಂದು ಬೆಂಕಿ ಹಚ್ಚಿಕೊಂಡಿದ್ದಾನೆ.

ಇದನ್ನು ಗಮನಿಸಿದ ಪೊಲೀಸರು ತಕ್ಷಣ ಬೆಂಕಿ ನಂದಿಸೋಕೆ ಮುಂದಾದ್ರು. ಆದ್ರೆ ಅವರ ದೇಹ ಅಷ್ಟೋತ್ತಿಗಾಗಲೇ ಶೇಕಡಾ.80ರಷ್ಟು ಸುಟ್ಟಿತ್ತು. ಬಳಿಕ ಪೊಲೀಸರು ಅವರನ್ನು ತಿರುಪತಿ ರುಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪತ್ನಿ ಒಪ್ಪಿಸಿ ನ್ಯಾಯ ಕೊಡಿಸಿ ಸ್ವಾಮಿ’ ಎಂದು ಹೋದವ್ನಿಗೆ ಪೇದೆ ಆವಾಜ್; ಠಾಣೆಯಲ್ಲೇ ಬೆಂಕಿ ಹಚ್ಚಿಕೊಂಡ-Video

https://newsfirstlive.com/wp-content/uploads/2023/11/MADHUGIRI.jpg

Load More