newsfirstkannada.com

ಅಂದು ಹೆದರಿದ್ದ ಗಿಲ್​​; ಇಂದು ಪಾಕ್​​ ಬೌಲರ್ಸ್​ ಬೆಂಡೆತ್ತಿದ್ರು; ಬರೋಬ್ಬರಿ 10 ಫೋರ್​​ ಬಾರಿಸಿದ್ರು

Share :

10-09-2023

    ಟೀಂ ಇಂಡಿಯಾದ ಶುಭ್ಮನ್​ ಗಿಲ್​ ಸ್ಫೋಟಕ ಬ್ಯಾಟಿಂಗ್​​

    ಪಾಕ್​ ವಿರುದ್ಧ ತನ್ನ ಮೊದಲ ಅರ್ಧಶತಕ ದಾಖಲಿಸಿದ ಗಿಲ್​​

    ಕೇವಲ 37 ಬಾಲ್​​ನಲ್ಲಿ ಹಾಫ್​ ಸೆಂಚೂರಿ ಸಿಡಿಸಿದ ಗಿಲ್​ ಆಟ ಹೇಗಿತ್ತು?

ಇಂದು ಶ್ರೀಲಂಕಾದ ಕೊಲಂಬೋ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಏಷ್ಯಾಕಪ್​​ ಟೂರ್ನಿ ಪಾಕ್​​ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾದ ಓಪನರ್​​ ಶುಭ್ಮನ್​​ ಗಿಲ್​ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಅತೀ ಕಡಿಮೆ ಬಾಲ್​ಗಳಲ್ಲಿ ಪಾಕ್​​ ಬೌಲರ್​​ಗಳ ಬೆಂಡೆತ್ತುವ ಮೂಲಕ ಅರ್ಧಶತಕ ಸಿಡಿಸಿದರು ಗಿಲ್​​.

ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್​ ಮಾಡಿದ ಶುಭ್ಮನ್​​ ಗಿಲ್​​​ ಪಾಕ್​ ಬೌಲರ್​ಗಳ ಬೆವರಿಳಿಸಿದರು. ಕೇವಲ 37 ಬಾಲ್​​ನಲ್ಲಿ ಬರೋಬ್ಬರಿ 140ಕ್ಕೂ ಹೆಚ್ಚು ಸ್ಟ್ರೈಕ್​ ರೇಟ್​​ನೊಂದಿಗೆ ಬ್ಯಾಟ್​ ಬೀಸಿ ಅರ್ಧಶತಕ ಸಿಡಿಸಿದರು. ಅದರಲ್ಲೂ ಸುಮಾರು 10 ಫೋರ್​ ಚಚ್ಚಿದ್ರು. ಒಂದೊಂದು ಓವರ್​ಗಳಲ್ಲಿ ಮೂರು ಮೂರು ಫೋರ್​ ಸಿಡಿಸಿದ್ದು ಮಾತ್ರ ಅದ್ಭುತವಾಗಿತ್ತು.

ಈ ಹಿಂದೆ ಪಾಕಿಸ್ತಾನ ಮತ್ತು ಭಾರತದ ನಡುವೆ ಸೆಪ್ಟೆಂಬರ್​ 2 ರಂದು ನಡೆದ ಪಂದ್ಯದಲ್ಲಿ ಶುಭ್ಮನ್​​ ಗಿಲ್​​ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡಿದ್ದರು. ಪಾಕ್​​ ಬೌಲರ್​ಗಳನ್ನು ಎದುರಿಸಲು ಹಿಂಜರಿದಿದ್ದರು. ಗಿಲ್​ಗೆ ಇದು ಪಾಕ್​ ವಿರುದ್ಧದ ಮೊದಲ ಪಂದ್ಯವಾಗಿತ್ತು. ಅದರಲ್ಲೂ ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್‌ ಬೌಲಿಂಗ್​ ಅನ್ನೂ ಮೊದಲ ಬಾರಿಗೆ ಎದುರಿಸಿದ್ದರು. ಹೀಗಾಗಿ 32 ಬಾಲ್​ ಎದುರಿಸಿ ಕೇವಲ 10 ರನ್​​​ ಗಳಿಸಿ ಔಟಾದ್ರು. ಈಗ ಅವರದ್ದೇ ಬೌಲಿಂಗ್​​ಗೆ ಬ್ಯಾಕ್​ ಟು ಬ್ಯಾಕ್​ ಬೌಂಡರಿ ಸಿಡಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ಹೆದರಿದ್ದ ಗಿಲ್​​; ಇಂದು ಪಾಕ್​​ ಬೌಲರ್ಸ್​ ಬೆಂಡೆತ್ತಿದ್ರು; ಬರೋಬ್ಬರಿ 10 ಫೋರ್​​ ಬಾರಿಸಿದ್ರು

https://newsfirstlive.com/wp-content/uploads/2023/09/Shubhman-Gill.jpg

Load More