newsfirstkannada.com

ಮಳೆ ನೀರಿನಿಂದ ತುಂಬಿದ್ದ ರಸ್ತೆ; ಮ್ಯಾನ್​ ಹೋಲ್​ಗೆ ಬಿದ್ದು 4 ವರ್ಷದ ಬಾಲಕ ಬಲಿ

Share :

06-09-2023

  ಮೃತ್ಯುಗುಂಡಿಗಳಾಗಿ ಬದಲಾಗಿರೋ ಮ್ಯಾನ್​​ಹೋಲ್​ಗಳು

  ಮ್ಯಾನ್​​ಹೋಲ್​ಗೆ ಬಿದ್ದು 4 ವರ್ಷದ ಕಂದಮ್ಮ ಬಲಿ

  ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕನ ಮೃತದೇಹ ಪತ್ತೆ

ಮ್ಯಾನ್​​ಹೋಲ್​ಗಳು ಮೃತ್ಯುಗುಂಡಿಗಳಾಗಿ ಬದಲಾಗ್ತಿವೆ. ಹೈದರಾಬಾದ್​​ನ ಪ್ರಗತಿ ನಗರದಲ್ಲಿ ಇಂಥದ್ದೆ ಒಂದು ಘಟನೆ ನಡೆದಿದೆ. ತೆರೆದ ಮ್ಯಾನ್​ಹೋಲ್​​ಗೆ ಮಿಥುನ್ ರೆಡ್ಡಿ ಎಂಬ 4 ವರ್ಷದ ಕಂದಮ್ಮ ಬಲಿಯಾಗಿದೆ.

ಮಳೆ ನೀರಿನಿಂದ ತುಂಬಿದ್ದ ರಸ್ತೆಯಲ್ಲಿ ವಯಸ್ಸಾದ ವೃದ್ಧರೊಬ್ಬರು ದಾರಿಯಲ್ಲಿ ಹಾಸಲಾಗಿದ್ದ ಕಲ್ಲಿನ ಮೇಲೆ ಕಾಲಿಟ್ಟು ದಾಟಿದ್ದಾರೆ..ಆದರೆ ಅವರನ್ನೇ ಹಿಂಬಾಲಿಸಿ ಬಂದ ಮಿಥುನ್​ಗೆ ಮ್ಯಾನ್​ಹೋಲ್​ ಕಾಣಿಸಿಲ್ಲ. ಅಲ್ಲದೆ, ಕಲ್ಲಿನತ್ತ ಕಾಲಿಡಲು ಸಾಧ್ಯವಾಗಿಲ್ಲ. ಇದರಿಂದ ಮ್ಯಾನ್​​ಹೋಲ್​​ ಒಳಕ್ಕೆ ನೇರವಾಗಿ ಬಿದ್ದಿದ್ದಾನೆ. ಬಳಿಕ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ.

ಘಟನೆ ಬಳಿಕ ಶೋಧ ನಡೆದಿದ್ದು, ತುರ್ಕ ಚೆರುವು ಎಂಬಲ್ಲಿ ಬಾಲಕನ ಶವ ಪತ್ತೆಯಾಗಿದೆ. ಎನ್​ಡಿಆರ್​ಎಫ್ ತಂಡ ಮೃತದೇಹ ಹೊರತೆಗೆದು ಪೋಷಕರಿಗೆ ಒಪ್ಪಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆ ನೀರಿನಿಂದ ತುಂಬಿದ್ದ ರಸ್ತೆ; ಮ್ಯಾನ್​ ಹೋಲ್​ಗೆ ಬಿದ್ದು 4 ವರ್ಷದ ಬಾಲಕ ಬಲಿ

https://newsfirstlive.com/wp-content/uploads/2023/09/Mithun-Reddy.jpg

Load More