newsfirstkannada.com

ಮಗಳ ಬೆಸ್ಟ್‌ ಫ್ರೆಂಡ್‌ ಅನ್ನೇ ಮದುವೆಯಾದ 66 ವರ್ಷದ ಟಿವಿ ನಿರೂಪಕ; ಭಂಡ ಗಂಡನಿಗೆ ಮಾಜಿ ಹೆಂಡ್ತಿ ಮಾಡಿದ್ದೇನು ಗೊತ್ತಾ?

Share :

29-06-2023

    66 ವರ್ಷದ ರಿಚರ್ಡ್‌ ಕೀ, 35 ವರ್ಷದ ಡೆವೊನ್ ಜೊತೆ ಮದುವೆ

    36 ವರ್ಷ ತನ್ನ ಜೊತೆಗಿದ್ದ ಹೆಂಡ್ತಿಗೆ ಟಾಟಾ ಬೈಬೈ ಹೇಳಿದ ಗಂಡ

    ರಿಚರ್ಡ್‌ ಟಿವಿ ನಿರೂಪಕರಾಗಿದ್ದಾಗ ಹೊಸ ಪತ್ನಿ ಹುಟ್ಟೇ ಇರಲಿಲ್ಲ

ಪ್ರಪಂಚದಲ್ಲಿ ಎಷ್ಟೋ ಚಿತ್ರ, ವಿಚಿತ್ರ ಮದುವೆಗಳನ್ನ ನಾವು, ನೀವೆಲ್ಲಾ ನೋಡಿರಬಹುದು. ಆದರೆ ಇದು ಎಲ್ಲಕ್ಕಿಂತಲೂ ವಿಭಿನ್ನವಾಗಿದೆ. 66 ವರ್ಷದ ತಂದೆಯೊಬ್ಬ 35 ವರ್ಷದ ತನ್ನ ಮಗಳ ಫ್ರೆಂಡ್‌ ಅನ್ನೇ ಕೈ ಹಿಡಿದಿದ್ದಾನೆ. 36 ವರ್ಷ ತನ್ನ ಜೊತೆಗಿದ್ದ ಹೆಂಡ್ತಿಗೆ ಟಾಟಾ ಬೈಬೈ ಮಾಡಿದ್ದಾನೆ. 66 ವರ್ಷದ ಟಿವಿ ನಿರೂಪಕ ರಿಚರ್ಡ್‌ ಕೀ ಹಾಗೂ 35 ವರ್ಷದ ಡೆವೊನ್ ಮದುವೆಯ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ.

ಬ್ರಿಟನ್‌ನಲ್ಲಿ 35 ವರ್ಷದ ಯುವತಿಯನ್ನು ಮದುವೆಯಾಗಿರೋದು ಖ್ಯಾತ ಕ್ರೀಡಾ ನಿರೂಪಕ ರಿಚರ್ಡ್‌ ಕೀ. ಇವರು ಸ್ಕೈ ಸ್ಫೋರ್ಟ್ಸ್, ಆಲ್ ಜಜೀರಾ, ಬೀನ್ ಸ್ಫೋರ್ಟ್‌ನಲ್ಲಿ ಕೆಲಸ ಮಾಡಿದ್ದರು. ರಿಚರ್ಡ್ ಕೀ ಕಳೆದ ವಾರವಷ್ಟೇ ತನ್ನ ಮಗಳ ಬೆಸ್ಟ್ ಫ್ರೆಂಡ್ ಆಗಿದ್ದ 35 ವರ್ಷದ ಡೆವೊನ್‌ಳನ್ನು ಕೈ ಹಿಡಿದಿದ್ದಾರೆ.

ರಿಚರ್ಡ್‌ ಕೀಯನ್ನು ಕೈ ಹಿಡಿದಿರುವ ಡೆವೊನ್ ಹಾಗೂ ರಿಚರ್ಡ್‌ ಕೀ ಮಗಳ ಜೆಮ್ಮಾ 28 ವರ್ಷದ ಸ್ನೇಹಿತರು. ಮಗಳ ಗೆಳತಿ ಜೊತೆ ಸಲುಗೆಯಿಂದ ಇದ್ದ ರಿಚರ್ಡ್ ಕೀ ಇದೀಗ ಆಕೆಯನ್ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚಿಗೆ ರಿಚರ್ಡ್‌ ಕೀ ಹೆಂಡ್ತಿ ಥೈರಾಯ್ಡ್ ಕ್ಯಾನ್ಸರ್ ರೋಗವನ್ನು ಗೆದ್ದು ಬಂದಿದ್ದರು. ಇಷ್ಟಾದರೂ ಹೆಂಡತಿಗೆ ಕೈ ಕೊಟ್ಟಿರೋ ರಿಚರ್ಡ್‌ ಕೀ ಮಗಳ ಗೆಳತಿ ಜೊತೆ ಎಂಗೇಜ್ ಆಗಿದ್ದಾರೆ. ಈ ಮದುವೆಗೆ ವಿರೋಧ ವ್ಯಕ್ತಪಡಿಸಿರೋ ರಿಚರ್ಡ್ ಕೀ ಮಾಜಿ ಪತ್ನಿ ಶೇಮ್, ಶೇಮ್‌ ಎಂದು ಆಕ್ರೋಶ ಹೊರಹಾಕಿದ್ದಾರೆ. ರಿಚರ್ಡ್‌ ಕೀ ಮದುವೆಯ ಸುದ್ದಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ರಿಚರ್ಡ್ ಕೀ ಮದುವೆ ಸುದ್ದಿಗೆ ಪ್ರತಿಕ್ರಿಯಿಸಿರೋ ಹಲವರು ಗೇಲಿ ಕೂಡ ಮಾಡಿದ್ದಾರೆ. ರಿಚರ್ಡ್ ಕೀ ಸ್ಕೈ ಸ್ಪೋರ್ಟ್ಸ್‌ನಲ್ಲಿ ಟಿವಿ ನಿರೂಪಕರಾಗಿದ್ದಾಗ ಈತನ ಹೊಸ ಪತ್ನಿ ಹುಟ್ಟೇ ಇರಲಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ಈ ಟೀಕೆಗಳಿಗೂ ರಿಚರ್ಡ್ ಕೀ ಉತ್ತರಿಸಿದ್ದು, ನನ್ನ ಮೊದಲ ಪತ್ನಿ ಕ್ಯಾನ್ಸರ್‌ಗೆ ತುತ್ತಾಗಿಯೇ ಇಲ್ಲ. ಬಹಳ ವರ್ಷಗಳಿಂದ ಅವಳು ನನ್ನಿಂದ ದೂರವಿದ್ದಾಳೆ. ಆಕೆ ಆರೋಗ್ಯವಾಗಿ ಇರಲೆಂದು ಹಾರೈಸುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮಗಳ ಬೆಸ್ಟ್‌ ಫ್ರೆಂಡ್‌ ಅನ್ನೇ ಮದುವೆಯಾದ 66 ವರ್ಷದ ಟಿವಿ ನಿರೂಪಕ; ಭಂಡ ಗಂಡನಿಗೆ ಮಾಜಿ ಹೆಂಡ್ತಿ ಮಾಡಿದ್ದೇನು ಗೊತ್ತಾ?

https://newsfirstlive.com/wp-content/uploads/2023/06/Richard-key-Marriage.jpg

Load More