newsfirstkannada.com

90 ನಿಮಿಷದ ಕಾರಿನ ಪ್ರಯಾಣ ಕೇವಲ 7 ನಿಮಿಷಕ್ಕೆ.. ಬೆಂಗಳೂರಿಗೆ ಬರ್ತಿದೆ ಇ-ಏರ್‌ ಟ್ಯಾಕ್ಸಿ; ಒಂದು ಟ್ರಿಪ್‌ಗೆ ಖರ್ಚು ಎಷ್ಟು?

Share :

10-11-2023

    4 ಪ್ಯಾಸೇಂಜರ್‌ ಮತ್ತು ಓರ್ವ ಪೈಲೆಟ್ 100 ಮೈಲಿಗಳಷ್ಟು ಪ್ರಯಾಣ

    ದೆಹಲಿ, ಮುಂಬೈ, ಬೆಂಗಳೂರಲ್ಲಿ ಮೊದಲ ಸೇವೆ ಆರಂಭಕ್ಕೆ ಒಪ್ಪಂದ

    ಆನ್​ ರೋಡ್​ ಸೇವೆಯಾಗಿದ್ದು, ಇದರ ಟೇಕ್‌ ಆಫ್‌ಗೆ ರನ್‌ ವೇ ಬೇಡ

ಸಾಕಪ್ಪಾ ಸಾಕು ಈ ಟ್ರಾಫಿಕ್‌ ಸಹವಾಸ. ಎಷ್ಟು ಗಂಟೆ ಟ್ರಾಫಿಕ್‌ ಜಾಮ್‌ನಲ್ಲಿ ಕಾಲ ಕಳೆಯಬೇಕು. ಕಾರಿನಲ್ಲಿ ಹೋಗೋದಿರಲಿ ಎಮೆರ್ಜೆನ್ಸಿ ಇದ್ರೂ ಆ್ಯಂಬುಲೆನ್ಸ್‌ನಲ್ಲಿ ಬೇಗ ಹೋಗೋಕೆ ಆಗಲ್ಲ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಹೀಗೆ ಮಾತನಾಡುವವರಿಗೆ ಕೊನೆಗೂ ನಿಟ್ಟುಸಿರು ಬಿಡುವ ಸುದ್ದಿಯೊಂದು ಬಂದಿದೆ.

90 ನಿಮಿಷ ಕಾರಿನಲ್ಲಿ ಚಲಿಸುವ ಮಾರ್ಗವನ್ನು ಕೇವಲ 7 ನಿಮಿಷಗಳಲ್ಲಿ ಪೂರ್ಣಗೊಳಿಸುವ ಮಿಡ್‌ನೈಟ್‌ ಎಲೆಕ್ಟ್ರಿಕ್ ಏರ್‌ಟ್ಯಾಕ್ಸಿಗಳು ಭಾರತಕ್ಕೆ ಬರುತ್ತಿವೆ. ಮೊದಲಿಗೆ ದೆಹಲಿ, ಮುಂಬೈ ಹಾಗೂ ಬೆಂಗಳೂರಿನ ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ಏರ್‌ಟ್ಯಾಕ್ಸಿ ತನ್ನ ಸೇವೆಯನ್ನು ಆರಂಭಿಸಲಿದೆ.

ಇದು ಆನ್​ ರೋಡ್​ ಸೇವೆಯಾಗಿದ್ದು, ಇದರ ಟೇಕ್‌ ಆಫ್‌ಗೆ ರನ್‌ ವೇ ಬೇಕಾಗಿಲ್ಲ. ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವ ಕಾರಣ ಪ್ರಯಾಣಿಕರು ಅತಿ ವೇಗವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಬಹುದಾಗಿದೆ.

2026 ರ ವೇಳೆಗೆ ಭಾರತ ಎಲೆಕ್ಟ್ರಿಕ್​ ಏರ್​ಟ್ಯಾಕ್ಸಿಗಳ ಸೇವೆ ಆರಂಭಿಸಲು ಸಿದ್ದತೆ ಮಾಡಿಕೊಳ್ತಿದೆ. ಈ ಏರ್​ ಟ್ಯಾಕ್ಸಿಯನ್ನು ಇಂಡಿಗೋದ ಮಾತೃ ಸಂಸ್ಥೆಯಾದ ಇಂಟರ್‌ಗ್ಲೇಬ್ ಎಂಟರ್‌ಪ್ರೈಸಸ್‌ ಜೊತೆ ಅಮೆರಿಕದ ಆರ್ಚರ್ ಎವಿಯೇಷನ್ ಒಪ್ಪಂದಕ್ಕೆ ಸಹಿ ಹಾಕಿದೆ. ಇಂಟರ್ ಗ್ಲೋಬ್ ಎಂಟರ್‌ಪ್ರೈಸಸ್ ಮತ್ತು ಯುಎಸ್ ಮೂಲದ ಆರ್ಚರ್ ಏವಿಯೇಷನ್ ​​ಕಂಪನಿಯ ನೇತೃತ್ವದಲ್ಲಿ ಭಾರತ ಈ ಯೋಜನೆಯನ್ನು ಜಾರಿಗೆ ತರಲಿದೆ. ಮೊದಲ ಹಂತದಲ್ಲಿ 200 ಮಿಡ್‌ನೈಟ್ ಏರ್‌ ಟ್ಯಾಕ್ಸಿಗಳು ಭಾರತಕ್ಕೆ ಬಂದಿಳಿಯಲಿದೆ.

ಅಂದಾಜಿನ ಪ್ರಕಾರ 2026ರಲ್ಲಿ ಬೆಂಗಳೂರಿನಲ್ಲಿ ಮಿಡ್‌ನೈಟ್ ಎಲೆಕ್ಟ್ರಿಕ್ ಏರ್‌ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಮಿಡ್‌ನೈಟ್ ಏರ್‌ಕ್ರಾಫ್ಟ್‌ಗಳಲ್ಲಿ ಒಂದು ಬಾರಿ 4 ಪ್ಯಾಸೇಂಜರ್‌ ಮತ್ತು ಓರ್ವ ಪೈಲೆಟ್ 100 ಮೈಲಿಗಳಷ್ಟು ದೂರ ಪ್ರಯಾಣ ಮಾಡಬಹುದಾಗಿದೆ.

ಇದು ಎಲೆಕ್ಟ್ರಿಕ್ ಏರ್‌ಟ್ಯಾಕ್ಸಿ ಆಗಿರುವುದರಿಂದ ಪ್ರಯಾಣ ದರ ಸಿಕ್ಕಾಪಟ್ಟೆ ದುಬಾರಿ. ಸದ್ಯದ ಮಾಹಿತಿ ಪ್ರಕಾರ ಅಮೆರಿಕಾದಲ್ಲೇ ಏರ್‌ಟ್ಯಾಕ್ಸಿಯ ಒಂದು ಟ್ರಿಪ್‌ಗೆ $430 ಡಾಲರ್ ಖರ್ಚು ಮಾಡಬೇಕು. 430 ಡಾಲರ್ ಅಂದ್ರೆ ಭಾರತದಲ್ಲಿ 35,815.75 ರೂಪಾಯಿ ಆಗಬಹುದು. ಇದು ಇಂದಿನ ದರಪಟ್ಟಿ ಆಗಿದ್ದು, 2026ರ ಹೊತ್ತಿಗೆ ಮತ್ತಷ್ಟು ದುಬಾರಿ ಆಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

90 ನಿಮಿಷದ ಕಾರಿನ ಪ್ರಯಾಣ ಕೇವಲ 7 ನಿಮಿಷಕ್ಕೆ.. ಬೆಂಗಳೂರಿಗೆ ಬರ್ತಿದೆ ಇ-ಏರ್‌ ಟ್ಯಾಕ್ಸಿ; ಒಂದು ಟ್ರಿಪ್‌ಗೆ ಖರ್ಚು ಎಷ್ಟು?

https://newsfirstlive.com/wp-content/uploads/2023/11/Air-Taxi-1.jpg

Load More