ಎಕ್ಸಾಂ ಹಾಲ್‌ಗೆ ಬಂದಾಗ ಕುಸಿದು ಬಿದ್ದ 9ನೇ ತರಗತಿ ವಿದ್ಯಾರ್ಥಿನಿ
15 ವರ್ಷದ ಬಾಲಕಿ ಹೃದಯ ಸ್ತಂಭನದಿಂದ ಸಾವು ಎಂದ ವೈದ್ಯರು
ಗುಜರಾತ್‌ನಲ್ಲಿ ಕೇವಲ 24 ಗಂಟೆಯಲ್ಲೇ 10 ಮಂದಿ ಸಾವನ್ನಪ್ಪಿದ್ದರು
ಅಮ್ರೇಲಿ: ಎಕ್ಸಾಂ ಹಾಲ್‌ಗೆ ಬಂದ 9ನೇ ತರಗತಿ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವನ್ನಪ್ಪಿರೋ ದಾರಣ ಘಟನೆ ಗುಜರಾತ್‌ನಲ್ಲಿ ನಡೆದಿದೆ. ವಿದ್ಯಾರ್ಥಿನಿ ಸಾಕ್ಷಿ ರಾಜೋಸಾರ ಹೃದಯ ಸ್ತಂಭನದಿಂದಲೇ ಕೊನೆಯುಸಿರೆಳೆದಿರುವ ಶಂಕೆ ವ್ಯಕ್ತವಾಗಿದೆ. ಪರೀಕ್ಷಾ ಕೇಂದ್ರದಲ್ಲಿ 15 ವರ್ಷದ ಬಾಲಕಿ ಹಠಾತ್ ಸಾವನ್ನಪ್ಪಿರೋದು ಆತಂಕವನ್ನು ಹೆಚ್ಚಿಸಿದೆ.
ಗುಜರಾತ್ ಅಮ್ರೇಲಿಯ ಶಾಂತಬಾ ಗಜೇರಾ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ಸಾಕ್ಷಿ ರಾಜೋಸಾರ ಎಂಬ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಶಾಲೆಗೆ ಬಂದಿದ್ದಳು. ಈ ವೇಳೆ ಕ್ಲಾಸ್ ರೂಮ್ ಪ್ರವೇಶಿಸುವಾಗ ಕೆಳಗೆ ಬಿದ್ದಿದ್ದಾಳೆ. ತರಗತಿಯಲ್ಲಿದ್ದ ಶಿಕ್ಷಕರು ಮತ್ತು ಸಹಪಾಠಿಗಳು ವಿದ್ಯಾರ್ಥಿಯನ್ನು ಕೂಡಲೇ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಬಾಲಕಿಯು ಹೃದಯ ಸ್ತಂಭನದಿಂದಲೇ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.
ಗುಜರಾತ್‌ನಲ್ಲಿ ಇತ್ತೀಚೆಗೆ ಗರ್ಬಾ ನೃತ್ಯದ ವೇಳೆ ಹಲವರು ಹೃದಯಾಘಾತಕ್ಕೆ ಒಳಗಾಗಿದ್ದರು. ಕೇವಲ 24 ಗಂಟೆಯಲ್ಲೇ 10 ಮಂದಿ ಸಾವನ್ನಪ್ಪಿದ್ದು ಬೆಚ್ಚಿ ಬೀಳುವಂತೆ ಮಾಡಿತ್ತು. ಈ ದುರಂತ ಮಾಸುವ ಮುನ್ನವೇ ಗುಜರಾತ್‌ನಲ್ಲಿ 15 ವರ್ಷದ ಬಾಲಕಿ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾಳೆ. ಗುಜರಾತ್‌ನಲ್ಲಿ ಹೃದಯಾಘಾತ, ಹೃದಯಸ್ತಂಭನದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಳವಾಗಿರೋದು ಆತಂಕಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ