newsfirstkannada.com

₹160 ಕೋಟಿ ರೂಪಾಯಿ ದೇಣಿಗೆ; ಕೊನೆಗೂ ಅನಾಮಧೇಯ ವ್ಯಕ್ತಿ ಮೂಲ ಪತ್ತೆ ಹಚ್ಚಿದ ಐಐಟಿ; ಯಾರವರು?

Share :

26-08-2023

    ಬರೋಬ್ಬರಿ 160 ಕೋಟಿ ರೂಪಾಯಿ ದೇಣಿಗೆ ಕೊಟ್ಟ ಅನಾಮಧೇಯ

    315 ಕೋಟಿ ರೂಪಾಯಿ ದೇಣಿಗೆ ನೀಡಿದ್ದ ಉದ್ಯಮಿ ನಂದನ್ ನಿಲೇಕಣಿ

    ಐಐಟಿ ಬಾಂಬೆ ನಿರ್ದೇಶಕ ಪ್ರೊ. ಸುಭಾಸಿಸ್ ಚೌಧರಿ ಹೇಳಿದ್ದೇನು?

ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಮತ್ತೊಮ್ಮೆ ಭಾರೀ ಮೊತ್ತದ ದೇಣಿಗೆ ಹರಿದು ಬಂದಿದೆ. ಪ್ರತಿ ಬಾರಿ ದೇಣಿಗೆ ನೀಡುವಾಗ ಅವರ ಹೆಸರು ಪ್ರಕಟಿಸಲಾಗುತ್ತಿತ್ತು. ಆದರೆ ಈ ಬಾರಿ ಅನಾಮಧೇಯ ವ್ಯಕ್ತಿಯೊಬ್ಬ ಬರೋಬ್ಬರಿ 160 ಕೋಟಿ ರೂಪಾಯಿ ಅನ್ನು ಬಾಂಬೆ ಐಐಟಿಗೆ ದೇಣಿಗೆ ನೀಡಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಐಐಟಿ ಬಾಂಬೆಗೆ ಸುಮಾರು 160 ಕೋಟಿ ರೂಪಾಯಿ ದೇಣಿಗೆ ಪಾವತಿಯಾಗಿತ್ತು. ಅಂದಿನಿಂದ ಅನಾಮಧೇಯ ವ್ಯಕ್ತಿ ಯಾರು ಅನ್ನೋದು ಕುತೂಹಲ ಕೆರಳಿಸಿತ್ತು.

ಐಐಟಿ ಬಾಂಬೆ ನಿರ್ದೇಶಕ ಪ್ರೊ. ಸುಭಾಸಿಸ್ ಚೌಧರಿ ಅವರು ಅನಾಮಧೇಯ 160 ಕೋಟಿ ರೂಪಾಯಿ ದೇಣಿಗೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತದ ಶೈಕ್ಷಣಿಕ ಕೇಂದ್ರಕ್ಕೆ ಇಷ್ಟು ದೊಡ್ಡ ಮಟ್ಟದ ದೇಣಿಗೆ ನೀಡಿರುವುದು ನಿಜಕ್ಕೂ ಶ್ಲಾಘನೀಯ. ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು ಈ ಹಣವನ್ನು ದೇಣಿಗೆ ನೀಡಿದ್ದಾರೆ. ಈ ಬೃಹತ್ ಮೊತ್ತದ ದೇಣಿಗೆಯನ್ನು ಗ್ರೀನ್ ಎನರ್ಜಿ ಮತ್ತು ಸುಸ್ಥಿರ ಸಂಶೋಧನಾ ಹಬ್‌ಗೆ ಬಳಕೆಗೆ ನಿರ್ಧಾರ ಮಾಡಲಾಗಿದೆ ಎಂದು ಸುಭಾಸಿಸ್ ಚೌಧರಿ ಸ್ಪಷ್ಟಪಡಿಸಿದ್ದಾರೆ.

160 ಕೋಟಿ ರೂಪಾಯಿ ದೇಣಿಗೆ ನೀಡಿರೋ ಆ ವ್ಯಕ್ತಿ ತನ್ನ ಹೆಸರು ಬಹಿರಂಗಪಡಿಸದಂತೆ ಐಐಟಿ ಬಾಂಬೆಗೆ ಮನವಿ ಮಾಡಿದ್ದಾರೆ. ಇದು ಐಐಟಿಯಲ್ಲಿ ಓದಿದ ಹಳೆಯ ವಿದ್ಯಾರ್ಥಿಯ ಪರೋಪಕಾರವಾಗಿದೆ ಎನ್ನಲಾಗಿದೆ. ಎಷ್ಟೋ ವಿದ್ಯಾರ್ಥಿಗಳು ತಾನು ಓದಿದ ಶಾಲೆ, ಕಾಲೇಜನ್ನು ಮರೆತು ವಿದೇಶದಲ್ಲಿ ನೆಲೆಸಿರುತ್ತಾರೆ. ಆದರೆ, ಬಾಂಬೆ ಐಐಟಿಯಲ್ಲಿ ಓದಿದ ಈ ಅನಾಮಧೇಯ ವಿದ್ಯಾರ್ಥಿ ತಾನು ಓದಿದ ಶಿಕ್ಷಣ ಸಂಸ್ಥೆಗೆ ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ. 160 ಕೋಟಿ ರೂಪಾಯಿ ದೇಣಿಗೆಯನ್ನು ಐಐಟಿ ಅಭಿವೃದ್ಧಿ, ಮೂಲಭೂತ ಸೌಕರ್ಯ, ಹವಾಮಾನ ಸಮಸ್ಯೆಗಳ ಸಂಶೋಧನೆಗೆ ಬಳಸಲು ತೀರ್ಮಾನಿಸಲಾಗಿದೆ.

ಐಐಟಿ ಬಾಂಬೆ ಹಳೇ ವಿದ್ಯಾರ್ಥಿ ನಂದನ್ ನಿಲೇಕಣಿ

315 ಕೋಟಿ ದೇಣಿಗೆ ನೀಡಿದ್ದ ನಂದನ್ ನಿಲೇಕಣಿ
ಐಐಟಿ ಬಾಂಬೆಗೆ ದೊಡ್ಡ ಮೊತ್ತ ದೇಣಿಗೆ ನೀಡಿರೋದು ಇದೇ ಮೊದಲಲ್ಲ. ಇತ್ತೀಚೆಗೆ ಉದ್ಯಮಿ ನಂದನ್ ನಿಲೇಕಣಿ ಅವರು ಐಐಟಿ ಬಾಂಬೆಗೆ 315 ಕೋಟಿ ರೂಪಾಯಿಯನ್ನು ದೇಣಿಗೆ ನೀಡಿದ್ದರು. 1973ರಲ್ಲಿ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಓದಿದ್ದ ನಿಲೇಕಣಿ ಅವರು ಈ ಹಿಂದೆಯೂ 400 ಕೋಟಿ ರೂಪಾಯಿಯನ್ನು ಐಐಟಿಗೆ ನೀಡಿದ್ದರು. ಇದಾದ ಬಳಿಕ ಐಐಟಿ ಬಾಂಬೆಯ ಬೃಹತ್ ಕಟ್ಟಡ ತಲೆ ಎತ್ತಿತ್ತು. ನಿಲೇಕಣಿ ಅವರ ಬಳಿಕ 160 ಕೋಟಿ ರೂಪಾಯಿಯನ್ನು ಅನಾಮಧೇಯ ಹಳೇ ವಿದ್ಯಾರ್ಥಿಯೊಬ್ಬರು ದೇಣಿಗೆ ನೀಡಿರೋದು ವಿಶೇಷವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

₹160 ಕೋಟಿ ರೂಪಾಯಿ ದೇಣಿಗೆ; ಕೊನೆಗೂ ಅನಾಮಧೇಯ ವ್ಯಕ್ತಿ ಮೂಲ ಪತ್ತೆ ಹಚ್ಚಿದ ಐಐಟಿ; ಯಾರವರು?

https://newsfirstlive.com/wp-content/uploads/2023/08/IIT-Bombay-1.jpg

Load More