newsfirstkannada.com

ಇಷ್ಟು ದಿನವಾದ್ರೂ ಜಾಮೀನು ಅರ್ಜಿ ಹಾಕಲೇ ಇಲ್ಲ ದರ್ಶನ್ ಪರ ವಕೀಲರು; ಕಾರಣವೇನು ಗೊತ್ತಾ?

Share :

Published June 25, 2024 at 6:06am

  ದರ್ಶನ್​ ಬಿಡಿಸಿಕೊಂಡು ಬರಲು ಪತ್ನಿ ವಿಜಯಲಕ್ಷ್ಮಿ ಅವರಿಂದ ಒದ್ದಾಟ

  ಜೈಲಿಗೆ ಆಗಮಿಸಿ ನಟ ದರ್ಶನ್​ ಭೇಟಿಯಾದ ನಟ ವಿನೋದ್​ ಪ್ರಭಾಕರ್​​

  ದರ್ಶನ್​ನನ್ನು ನೋಡಲು ಜೈಲಿನ ಕಡೆಗೆ ಹೆಜ್ಜೆ ಹಾಕುತ್ತಿರೋ ಕುಟುಂಬಸ್ಥರು

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್​ ಪರ ವಕೀಲರು ಬೇಲ್‌ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ತಿದ್ದಾರೆ. ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಕಾರಣ ಇವತ್ತೇ ಬೇಲ್‌ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಆದ್ರೆ ಅದೇಕೋ ಏನೋ ಯಾವ ಆರೋಪಿ ಪರವೂ ಇವತ್ತು ಬೇಲ್‌ ಅರ್ಜಿ ಸಲ್ಲಿಕೆಯಾಗಿಲ್ಲ. ಮತ್ತೊಂದೆಡೆ ಎರಡು ದಿನಗಳಿಂದ ಜೈಲಿನಲ್ಲಿರುವ ದರ್ಶನ್​ ಭೇಟಿಯಾಗಲು ಆಪ್ತರು, ಕುಟುಂಬಸ್ಥರು ಇವತ್ತಿನಿಂದ ಪರಪ್ಪನ ಅಗ್ರಹಾರದತ್ತ ಹೆಜ್ಜೆ ಹಾಕ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರದ ಪಾಲಾಗಿರುವ ನಟ ದರ್ಶನ್​ ಹೊರಬರೋದು ಅಷ್ಟು ಸುಲಭದ ಮಾತಲ್ಲ. ಯಾಕಂದ್ರೆ ದರ್ಶನ್​ ವಿರುದ್ಧ ದಾಖಲಾಗಿರುವ ಸೆಕ್ಷನ್​ಗಳು ತುಂಬಾ ಸ್ಟ್ರಾಂಗ್​ ಆಗಿವೆ. ಹೀಗಾಗಿ ನಟ ದರ್ಶನ್​ ಮತ್ತು ಗ್ಯಾಂಗ್​ಗೆ ಜಾಮೀನು ಸಿಗೋದು ದೊಡ್ಡ ಸವಾಲಿನ ಮಾತು ಎನ್ನುತ್ತಿದ್ದಾರೆ ಕಾನೂನು ಪರಿಣಿತರು. ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್​ ಪರ ವಕೀಲರು ಇವತ್ತು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಇತ್ತು. ಆದ್ರೆ ಸದ್ಯಕ್ಕೆ ಬೇಲ್​ಗೆ ಅರ್ಜಿ ಸಲ್ಲಿಸದ ಡಿ ಗ್ಯಾಂಗ್‌ ಪರ ವಕೀಲರು ಕಾದು ನೋಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಜಿಮ್‌ ಟ್ರೈನರ್‌ಗೆ ಕಂಡೀಷನ್ ಹಾಕಿ ಮದುವೆ.. ಫೇಲ್ ಆಗಿದ್ದಕ್ಕೆ ಗಂಡನಿಗೆ ಡಿವೋರ್ಸ್​; ಕಾರಣವೇನು?

ನಟ ದರ್ಶನ್​ ಅಂಡ್​ ಗ್ಯಾಂಗ್​ನ ಡೆಡ್ಲಿ ಕೃತ್ಯಕ್ಕೆ ಇಡೀ ರಾಜ್ಯದ ಜನತೆಯೇ ಶಾಕ್​ ಆಗಿದ್ದಾರೆ. ಪೊಲೀಸ್​ ತನಿಖೆಯಲ್ಲಿ ರೇಣುಕಾಸ್ವಾಮಿ ಹತ್ಯೆಯ ಕೃತ್ಯದಲ್ಲಿ ಎಲ್ಲ ಆರೋಪಿಗಳು ಭಾಗಿಯೋಗಿರೋದು ಧೃಡಪಟ್ಟಿದೆ. ನಟ ದರ್ಶನ್​ ಸೇರಿದಂತೆ ಹಲವು ಆರೋಪಿಗಳು ಪ್ರಭಾವಿಗಳಾಗಿದ್ದು, ವ್ಯವಸ್ಥಿತವಾಗಿಯೇ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ ಎಂದು ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ದರ್ಶನ್​ ಹಣಬಲವಿರುವ ವ್ಯಕ್ತಿ, ಜೊತೆಗೆ ಅಭಿಮಾನಿಗಳಿಂದ ಬೆದರಿಕೆಯನ್ನೂ ಹಾಕಿಸ್ತಿರೋ ಕಾರಣಗಳನ್ನು ನೀಡಿ, ಜಾಮೀನಿಗೆ ಪೊಲೀಸರು ಆಕ್ಷೇಪ ಎತ್ತುತ್ತಿದ್ದಾರೆ. ಹೀಗಾಗಿ ಚಾರ್ಜ್‌ ಶೀಟ್‌ ಸಲ್ಲಿಸೋವರೆಗೂ ಜಾಮೀನು ಪಡೆಯೋದು ದೊಡ್ಡ ಸವಾಲಾಗಿದೆ.

ಜೈಲಿನಲ್ಲಿ ದರ್ಶನ್‌ ಭೇಟಿಯಾದ ದರ್ಶನ್​ ಪತ್ನಿ ವಿಜಯಲಕ್ಷ್ಮಿ

ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಪತಿಯನ್ನು ಬಿಡಿಸಿಕೊಂಡು ಬರಲು ಪತ್ನಿ ವಿಜಯಲಕ್ಷ್ಮಿ ಹರಸಾಹಸವನ್ನೇ ಪಡ್ತಿದ್ದಾರೆ. ದರ್ಶನ್​ ಪರ ವಾದ ಮಾಡಲು ಈಗಾಗಲೇ ಹಿರಿಯ ವಕೀಲ ಸಿ.ವಿ.ನಾಗೇಶ್​ರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಕೊಲೆ ಕೇಸ್​ನಲ್ಲಿ ಲಾಕ್​​ ಆದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್​ ಭೇಟಿಗೆ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ರು.. ಪುತ್ರ ವಿನೀಶ್​ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ವಿಜಯಲಕ್ಷ್ಮಿಯಲ್ಲಿ ಪೊಲೀಸರು ಮಾಧ್ಯಮಗಳ ಕಣ್ತಪ್ಪಿಸಿ ಬೇರೊಂದು ಕಾರಿನಲ್ಲಿ ಒಳಗೆ ಕೊರೆದೊಯ್ದು ಭೇಟಿ ಮಾಡಿಸಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ನಟ ದರ್ಶನ್​ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಟ ವಿನೋದ್​ ಪ್ರಭಾಕರ್​ ಕೂಡ, ಜೈಲಿಗೆ ಆಗಮಿಸಿ ದರ್ಶನ್​ರನ್ನು ಭೇಟಿಯಾದ್ರು. ಈ ಬಗ್ಗೆ ಮಾಧ್ಯಮಗಳಿಗೆ ರಿಯಾಕ್ಟ್​ ಮಾಡಿದ ವಿನೋದ್​ ಪ್ರಭಾಕರ್​, ಜೈಲಿನಲ್ಲಿ ದರ್ಶನ್ ಅವರು ಮೌನವಾಗಿದ್ದರು. ಏನ್ ಟೈಗರ್ ಎಂದು ಅಷ್ಟೇ ನನ್ನ ಬಳಿ ಮಾತಾನಾಡಿದ್ದು ಎಂದಿದ್ದಾರೆ.

ದರ್ಶನ್ ಅವ್ರನ್ನು ಭೇಟಿ ಆಗಬೇಕು ಅಂತ ಬಂದಿದ್ದೆ. ಜೈಲಿನ ನಿಯಮಾವಳಿ ಪ್ರಕಾರವೇ ಮನವಿ ಮಾಡಿಕೊಂಡೆ. ಕೇವಲ ಎರಡೇ ಎರಡು ಸೆಕೆಂಡ್ ಮಾತ್ರ ದರ್ಶನ್ ಸಾರ್‌ ಮಾತಾಡೋಕೆ ಸಿಕ್ಕಿದ್ದರು. ದರ್ಶನ್ ಮುಖದಲ್ಲಿ ಮೌನ ಇತ್ತು. ಏನನ್ನೂ ಮಾತಾಡಲಿಲ್ಲ. ಮಂಕಾಗಿಯೇ ದರ್ಶನ್ ಇದ್ದರು. ನಾನು ಬಾಸ್ ಅಂತ ಕರೆದೆ ಅದಕ್ಕೆ ಅವರು ಟೈಗರ್ ಅಂದು ಶೇಕ್ ಹ್ಯಾಂಡ್ ಮಾಡಿದರು ಅಷ್ಟೇ. ನಾನು ಯಾಕಿನ್ನೂ ಈ ಘಟನೆ ಬಗ್ಗೆ ಮಾತಾಡ್ಲಿಲ್ಲ ಅಂದ್ರೆ ಮೊದಲು ದರ್ಶನ್ ಭೇಟಿ ಆಗಬೇಕು ಅಂತ ಕಾಯ್ತಿದ್ದೆ. ಆ ಕಾರಣಕ್ಕೆ ಎಲ್ಲೂ ರಿಯಾಕ್ಟ್ ಮಾಡಿರಲಿಲ್ಲ ಎಂದರು.

ವಿನೋದ್​ ಪ್ರಭಾಕರ್​, ನಟ

ಇನ್ನು, ನಟ ದರ್ಶನ್​ ಆಪ್ತ. ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ನಾಗರಾಜ್​ನನ್ನು ಭೇಟಿಯಾಗಲು ಮಂಗಳಮುಖಿಯೊಬ್ಬರು ಜೈಲಿಗೆ ಬಂದಿದ್ದರು. ಆಶ್ರಮದ ಕಟ್ಟಡದ ನಿರ್ಮಾಣಕ್ಕೆ ನಟ ದರ್ಶನ್​ ಆರ್ಥಿಕ ನೆರವು ನೀಡಿದ್ರಂತೆ. ಹೀಗಾಗಿ ಮಾನವೀಯತೆ ದೃಷ್ಟಿಯಿಂದ ದರ್ಶನ್​ ಮತ್ತು ನಾಗರಾಜ್​ರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಕಾನೂನಿ ಮುಂದೆ ಯಾರೂ ದೊಡ್ಡವರಲ್ಲ ಎಂದಿದ್ದಾರೆ. ಒಟ್ಟಾರೆಯಾಗಿ ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ದರ್ಶನ್​​ಗೆ ಇದೀಗ ಪಾಪಪ್ರಜ್ಞೆ ಕಾಡುತ್ತಿದೆಯೋ ಏನೋ ಮೌನಕ್ಕೆ ಶರಣಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಷ್ಟು ದಿನವಾದ್ರೂ ಜಾಮೀನು ಅರ್ಜಿ ಹಾಕಲೇ ಇಲ್ಲ ದರ್ಶನ್ ಪರ ವಕೀಲರು; ಕಾರಣವೇನು ಗೊತ್ತಾ?

https://newsfirstlive.com/wp-content/uploads/2024/06/darshan57.jpg

Load More