newsfirstkannada.com

×

ಮಾಜಿ ಕಾರ್ಪೊರೇಟರ್ ಮಗನ ಚಕ್ಕಂದ.. ಲವ್‌ ಸ್ಟೋರಿಗೆ ಬಿಗ್ ಟ್ವಿಸ್ಟ್; ಅಸಲಿಗೆ ಆಗಿದ್ದೇನು?

Share :

Published September 11, 2024 at 8:00pm

Update September 11, 2024 at 8:02pm

    ಪ್ರೀತಿ ಅನ್ನೋ ಮಾಯೆಗೆ ಸಿಲುಕಿ ಪರದಾಡಿದ ವಾಸುಕಿ ದುರಂತ ಕಥೆ

    ಹಳೇ ಪ್ರೇಮಿಯೊಂದಿಗೆ ನಡೆದಿತ್ತು ನಿಶ್ವಿತಾರ್ಥ.. ಬಳಿಕ ಸಾವಿಗೆ ಶರಣು!

    ಅಂತ್ಯ ಸಂಸ್ಕಾರದ ದಿನ ಗೊತ್ತಾದ ಸತ್ಯಕ್ಕೆ ಬೆಚ್ಚಿ ಬಿದ್ದ ಇಡೀ ಕುಟುಂಬ

ಪ್ರೀತಿ ಅನ್ನೋದು ಹಾಗೆ. ಒಟ್ಟಿಗೆ ಇದ್ದಾಗ, ಎಲ್ಲವೂ ಚೆನ್ನಾಗಿದ್ದಾಗ ಮಧುರವಾಗಿಯೇ ಇರುತ್ತೆ. ಅನುರಾಗದ ಅಲೆಯಲ್ಲಿ ತೇಲಾಡುವಾಗ ಜಗತ್ತೇ ಸ್ವರ್ಗವಾಗಿರುತ್ತೆ. ಅದೇ ಅನುರಾಗದಲ್ಲಿ ಏರುಪೇರು ಉಂಟಾದ್ರೆ, ಬದುಕಿನ ಗತಿಯೂ ಬದಲಾಗುತ್ತೆ. ಸ್ಥಿತಿಯೂ ಬದಲಾಗುತ್ತೆ.

ಇದನ್ನೂ ಓದಿ: ವರುಣ್ ಆರಾಧ್ಯ ಖಾಸಗಿ ರಹಸ್ಯ ಗೊತ್ತಾಗಿದ್ಹೇಗೆ? ಮಾಜಿ ಪ್ರೇಯಸಿ ಬಿಚ್ಚಿಟ್ಟ ಇಂಚಿಂಚೂ ಮಾಹಿತಿ ಇಲ್ಲಿದೆ 

ಈ ಫೋಟೋದಲ್ಲಿರುವ ಹುಡುಗಿ ಹೆಸರು ವಾಸುಕಿ.. ಹೆಸರಿಗೆ ತಕ್ಕಂತೆ ಅಂದವತಿ ಕೂಡ. ಇನ್ನೂ 25 ವರ್ಷ ಅಷ್ಟೇ. ಜೀವನದ ಕಾಲು ಭಾಗ ವಯಸ್ಸು ಕೂಡ ಈಕೆಗೆ ಆಗಿಲ್ಲ. ಅಂದ ಇತ್ತು ಚೆಂದ ಇತ್ತು. ಜೀವನ ನಡೆಸೋದಕ್ಕೂ ಏನೂ ಕೊರತೆ ಇರಲಿಲ್ಲ. ಆದ್ರೆ ಪ್ರೀತಿ ಅನ್ನೋ ಮೋಹದ ಬಲೆಗೆ ಸಿಲುಕಿದ್ದ ವಾಸುಕಿ ಜೀವವನ್ನ ಅದೇ ಪ್ರೀತಿಯೇ ಬಲಿ ಪಡೆದಿದೆ.

ಇದು ಆರು ವರ್ಷಗಳ ಹಿಂದಿನ ಕತೆ. ಅಸಲಿಗೆ ಈ ವಾಸುಕಿ ಲಾ ಓದುತ್ತಿದ್ದಳು. ಈ ಟೈಮ್​​ನಲ್ಲಿ ಶ್ರವಂತ್ ಅನ್ನೋ ಹುಡುಗನ ಪರಿಚಯ ಆಗಿರುತ್ತೆ. ಆ ಪರಿಚಯ ಪ್ರೀತಿಯಾಗಿ ಇಬ್ಬರು ಪ್ರೇಮದ ಅಲೆಯಲ್ಲಿ ಓಡಾಡಿಕೊಂಡಿದ್ದರು. ಆದ್ರೆ ಈ ಟೈಮ್​ನಲ್ಲಿ ಈ ವಾಸುಕಿಗೆ ಆರ್.​ಟಿ ನಗರದ ಮಾಜಿ ಕಾರ್ಪೋರೇಟರ್ ಮಗ ಶ್ರವಣ್​ ಪರಿಚಯವಾಗಿದೆ.

ಇದನ್ನೂ ಓದಿ: ವರುಣ್ ಆರಾಧ್ಯ ಮತ್ತು ಅವಳು.. ಬೆತ್ತಲೆ ಫೋಟೋಗಳನ್ನು ನೋಡಿ ಬೆಚ್ಚಿ ಬಿದ್ದ ರೀಲ್ಸ್‌ ಸ್ಟಾರ್‌! 

ಹುಡುಗಿ ನೋಡಕೆ ಚೆನ್ನಾಗಿದ್ದಳು. ಇದಷ್ಟೇ ಅಲ್ಲದೇ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು ಕೂಡ. ಒಳ್ಳೆ ಆಸ್ತಿ ಕೂಡ ಇದೆ. ಈ ವಿಚಾರ ತಿಳ್ಕೊಂಡಿದ್ದ ಮಾಜಿ ಕಾರ್ಪೋರೇಟರ್ ಮಗ ಶ್ರವಣ್​ ವಾಸುಕಿ ಪ್ರೀತಿಗೆ ಹುಳಿ ಹಿಂಡುವ ಕೆಲಸ ಮಾಡಿದ್ನಂತೆ. ವಾಸುಕಿ ಮತ್ತು ಶ್ರವಂತ್ ಮಧ್ಯೆ ಜಗಳ ತಂದಿಟ್ಟು ಇಬ್ಬರನ್ನ ದೂರು ಮಾಡಿದ್ನಂತೆ. ಇದಾದ ಮೇಲೆ ಈ ವಾಸುಕಿಯನ್ನ ಶ್ರವಣ್ ಪ್ರೀತಿ ಮಾಡೋದಕ್ಕೆ ಶುರು ಮಾಡಿದ್ದ. ಇಬ್ಬರು ಬರೋಬ್ಬರಿ ಆರು ವರ್ಷಗಳ ಕಾಲ ಪ್ರೀತಿ ಮಾಡಿದ್ರು. ಆದ್ರೀಗ ಈ ಆರು ವರ್ಷದ ಪ್ರೀತಿಯೇ ವಾಸುಕಿಯನ್ನ ಬಲಿ ಪಡೆದಿರುವ ಆರೋಪ ಕೇಳಿ ಬಂದಿದೆ.

ವಾಸುಕಿ ಮತ್ತು ಶ್ರವಂತ್​​ರನ್ನ ಬೇರೆ ಮಾಡಿದ್ದ ಶ್ರವಣ್​ ವಾಸುಕಿಯನ್ನ ತನ್ನ ಬಲೆಗೆ ಬೀಳಿಸಿಕೊಂಡು ಪ್ರೀತಿ ಮಾಡೋದಕ್ಕೆ ಶುರು ಮಾಡಿದ್ದ. ಆರು ವರ್ಷಗಳ ಕಾಲ ಪ್ರೀತಿಯ ಬಂಡಿ ಸಾಗಿತ್ತು. ಆದ್ರೆ ಆರು ವರ್ಷದ ಬಳಿಕ ವಾಸುಕಿ ಮಾಜಿ ಕಾರ್ಪೋರೇಟರ್ ಮಗ ಶ್ರವಣ್​​ನನ್ನ ಮದುವೆಯಾಗುವಂತೆ ಕೇಳಿದ್ದಾಳೆ. ಆದ್ರೆ ಈ ಶ್ರವಣ್​ ಮದುವೆ ವಿಚಾರ ಮಾತಾಡಿದ್ರೆ ಮಾರು ದೂರು ಹೋಗ್ತಿದ್ನಂತೆ. ಮದುವೆಯಾಗದೇ ಸತಾಯಿಸಿದ್ನಂತೆ. ಹಾಗಾಗಿ ಕೊನೆಗೆ ವಾಸುಕಿ ಈ ಶ್ರವಣ್ ಸಹವಾಸವೂ ಬೇಡ ಅಂತ ಈ ಶ್ರವಣ್​​ನಿಂದಲೂ ದೂರ ಆಗಿದ್ದಳು.

ಇದನ್ನೂ ಓದಿ: ಖಾಸಗಿ ಫೋಟೋ, ಧಮ್ಕಿ, ಪ್ರೀತಿಸಿ ವಂಚನೆ.. ಸೀರಿಯಲ್‌ ನಟ ವರುಣ್ ಆರಾಧ್ಯ ವಿರುದ್ಧ ಕೇಸ್ ದಾಖಲು 

ಶ್ರವಣ್​​​ನಿಂದ ದೂರಾಗಿ ಶ್ರವಂತ್ ಜೊತೆ ಮದ್ವೆಗೆ ನಿರ್ಧಾರ!
ಹಳೇ ಪ್ರೇಮಿಯೊಂದಿಗೆ ನಡೆದಿತ್ತು ನಿಶ್ವಿತಾರ್ಥ! ಬಳಿಕ ಸಾವು!
ಹೌದು ಈ ಶ್ರವಣ್ ವಾಸುಕಿಯೊಂದಿಗೆ ಎಲ್ಲಾ ಕಡೆ ಸುತ್ತಾಡಿ ಎಂಜಾಯ್ ಮಾಡಿದ್ದ. ಮದ್ವೆ ಅಂದಾಗ ವಾಸುಕಿಯನ್ನ ಬೇಡ ಅಂತ ದೂರು ಸರಿದಿದ್ದ. ಹೀಗಾಗಿ ವಾಸುಕಿ ಕೂಡ ತಾಯಿ ಬಳಿ ತನ್ನ ಲವ್ ಸ್ಟೋರಿ ಬಗ್ಗೆ ಹೇಳಿದ್ದಳು. ಬೇರೆ ಹುಡುಗನ ಮದ್ವೆಯಾಗ್ಬೇಕು ಅಂತ ಹುಡುಗನ್ನ ನೋಡ್ತಿದ್ದರು. ಕೊನೆಗೆ ಹಳೆ ಪ್ರೇಮಿ ಶ್ರವಂತ್​​​ ಜೊತೆಯೇ ಮದ್ವೆಯಾಗ್ಬೇಕು ಅಂತ ಡಿಸೈಡ್ ಮಾಡಿ ಅವನ ಜೊತೆ ಮಾತಾಡಿದ್ದಳು. ಈ ಶ್ರವಣ್ ಮಾಡಿದ್ದ ಮೋಸದ ಬಗ್ಗೆ ಶ್ರವಂತ್​ಗೆ ಹೇಳಿ ನಾವಿಬ್ಬರು ಮದ್ವೆಯಾಗೋಣ ಅಂತ ಒಪ್ಪಿಸಿದ್ದಳು. ಎರಡು ಮನೆಯವರು ಒಪ್ಪಿ ವಾಸುಕಿ ಮತ್ತು ಶ್ರವಂತ್ ಎಂಗೆಜ್ಮೆಂಟ್ ಕೂಡ ಮಾಡಿದ್ರು. ಲಗ್ನ ಪತ್ರಿಕೆ ಕೂಡ ಪ್ರಿಂಟ್ ಮಾಡಿದ್ರು. ಇನ್ನೇನು ಮದುವೆ ಕೂಡ ಆಗಿರ್ತಿತ್ತು. ಆದ್ರೆ ಆಗಸ್ಟ್ 22 ರಂದು ಈ ವಾಸುಕಿ ಸೂಸೈಡ್ ಮಾಡ್ಕೊಂಡಿದ್ದಳು. ಮನೆಯಲ್ಲೇ ಸಾವಿಗೆ ಶರಣಾಗಿ ಹೋಗಿದ್ದಾಳೆ.

ಮಗಳ ಮದುವೆ ಫಿಕ್ಸ್ ಆಗಿತ್ತು. ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಆದ್ರೆ ಮದುವೆಯಾಗಬೇಕಿದ್ದ ಹುಡುಗಿಯೇ ಆತ್ಮಹ*ತ್ಯೆಗೆ ಶರಣಾಗಿ ಬಿಟ್ಟಿದ್ದಳು. ಮನೆಯವರಿಗೆಲ್ಲ ಗಾಬರಿ, ಏನಾಯ್ತು? ಯಾಕೆ ಸೂಸೈಡ್ ಮಾಡ್ಕೊಂಡಳು ಅನ್ನೊದೇ ಗೊತ್ತಿರಲಿಲ್ಲ. ಕೊನೆಗೆ ವಾಸುಕಿ ಮೃತದೇಹವನ್ನು ಅಂತ್ಯ ಸಂಸ್ಕಾರ ಕೂಡ ಮಾಡಿದ್ರು. ಆದ್ರೆ ಅಂತ್ಯ ಸಂಸ್ಕಾರದ ದಿನ ಗೊತ್ತಾದ ಅದೊಂದು ಸತ್ಯವೇ ಇಡೀ ಕುಟುಂಬಕ್ಕೆ ದಿಗಿಲು ಬಡಿಸಿತ್ತು.

ಮಾಜಿ ಕಾರ್ಪೋರೇಟರ್ ಮಗನ ಕಾಟಕ್ಕೆ ಬೇಸತ್ತಿದ್ಲಾ ಯುವತಿ?
ಹೌದು ಮಗಳು ಸತ್ತ ದಿನ ಈ ಕುಟುಂಬಕ್ಕೆ ವಾಸುಕಿ ಯಾಕೆ ಆತ್ಮಹತ್ಯೆ ಮಾಡ್ಕೊಂಡಳು ಅನ್ನೋ ಕಾರಣವೇ ಗೊತ್ತಿರಲಿಲ್ಲ. ಆದ್ರೆ ಅಂತ್ಯ ಸಂಸ್ಕಾರದ ದಿನ ಈ ವಾಸುಕಿಯ ಸ್ನೇಹಿತರು ಅಸಲಿ ಸತ್ಯವನ್ನ ವಾಸುಕಿ ತಾಯಿಗೆ ಹೇಳಿದ್ದರು. ಅದೇನಂದ್ರೆ ವಾಸುಕಿ ಪ್ರೀತಿ ಮಾಡಿದ್ದ ಮಾಜಿ ಕಾರ್ಪೋರೇಟರ್ ಮಗ ಶ್ರವಣ್​​ ವಾಸುಕಿಗೆ ಕೆಟ್ಟ ಕೆಟ್ಟ ಮೆಸೇಜ್ ಮಾಡ್ತಿದ್ನಂತೆ. ಈಕೆ ಮದುವೆ ಫಿಕ್ಸ್ ಆದ್ಮೇಲಂತೂ ಆಕೆಗೆ ಇನ್ನಿಲ್ಲದ ಕಾಟ ಕೊಡ್ತಿದ್ನಂತೆ. ವಾಸುಕಿ ನೇಣು ಹಾಕಿಕೊಳ್ಳಲು ಈ ಶ್ರವಣ್ ಕಾರಣ ಅಂತ ಹೇಳಿದ್ರಂತೆ. ಇದಾದ ಮೇಲೆ ವಾಸುಕಿಯ ಮೊಬೈಲ್ ಚೆಕ್ ಮಾಡ್ದಾಗ ಈ ಶ್ರವಣ್​ ವಾಸುಕಿಗೆ ಅಶ್ಲೀಲ ಮೆಸೆಜ್​ಗಳು ಕಳಿಸಿರೋದು ಗೊತ್ತಾಗಿದೆ. ಹೀಗಾಗಿ ವಾಸುಕಿ ಸಾವಿಗೆ ಮಾಜಿ ಕಾರ್ಪೋರೇಟರ್ ಮಗ ಶ್ರವಣ್​ ಕಾರಣ ಅಂತ ವಾಸುಕಿ ತಾಯಿ ವೆಂಕಟಲಕ್ಷ್ಮೀ ಆರೋಪಿಸಿದ್ದಾರೆ.

ಇದನ್ನೂ ಓದಿ: EXCLUSIVE: ಮಾಜಿ ಕಾರ್ಪೊರೇಟರ್ ಮಗನ ಲವ್‌ ದೋಖಾ.. ಯುವತಿ ಸಾವು; ನ್ಯಾಯಕ್ಕಾಗಿ ತಾಯಿ ಕಣ್ಣೀರು 

ಈ ವಿಚಾರ ಗೊತ್ತಾಗ್ತಿದ್ದಂತೆ ವಾಸುಕಿ ತಾಯಿ ಮಾಗಡಿ ಠಾಣೆಯಲ್ಲಿ ದೂರು ಕೂಡ ಕೊಟ್ಟಿದ್ದಾರೆ. ಮಾಜಿ ಕಾರ್ಪೋರೇಟರ್ ಮಗ ಶ್ರವಣ್ ವಿರುದ್ಧ ಎಫ್​ಐಆರ್ ಕೂಡ ಆಗಿತ್ತು. ಆದ್ರೆ ಪೊಲೀಸರು ಮಾಜಿ ಕಾರ್ಪೋರೇಟರ್ ಒತ್ತಡಕ್ಕೆ ಮಣಿದು, ಶ್ರವಣ್​​ನ್ನ ಬಂಧಿಸೋದು ಇರಲಿ ಕರೆದು ವಿಚಾರಣೆ ಕೂಡ ಮಾಡಿಲ್ಲ ಅಂತ ವಾಸುಕಿ ತಾಯಿ ಅರೋಪಿಸಿದ್ದಾರೆ. ಆರೋಪಿಯ ತಂದೆ ಪ್ರಭಾವಿಯಾಗಿರೋದ್ರಿಂದ ಪೊಲೀಸ್ರು ಸರಿಯಾಗಿ ತನಿಖೆ ಮಾಡ್ತಿಲ್ಲ ಅಂತ ನೊಂದ ತಾಯಿ ನ್ಯೂಸ್​ಫಸ್ಟ್​ನೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ವಾಸುಕಿಯೂ ವಕೀಲೆಯಾಗಿದ್ಳು.. ವಾಸುಕಿ ತಾಯಿ ಕೂಡ ವಕೀಲೆ.. ಹೀಗಿದ್ರೂ ತನ್ನ ಮಗಳ ಸಾವಿಗೆ ನ್ಯಾಯ ಕೊಡಿಸಲು ಆಗ್ತಿಲ್ಲವಲ್ಲ ಅಂತ ಈ ಹೆತ್ತ ಕರುಳು ಸಂಕಟ ಪಡ್ತಿದೆ. ಏನಾದ್ರೂ ಮಾಡಿ ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಅಂತ ಈ ಜೀವ ಕಣ್ಣೀರು ಇಡ್ತಿದೆ.

ಪ್ರೀತಿ ಅನ್ನೋ ಮಾಯೆಗೆ ಸಿಲುಕಿ ವಾಸುಕಿ ಹೊರ ಬಂದಿದ್ದಳು. ಆದ್ರೀಗ ಅದೇ ಪ್ರೀತಿಯೇ ಆಕೆಯನ್ನ ಬಲಿ ಪಡೆದಿದ್ದು, ಮಾಜಿ ಕಾರ್ಪೋರೇಟರ್ ಮಗನ ವಿರುದ್ಧ ಆರೋಪ ಕೇಳಿ ಬಂದಿದೆ. ಇಂತಾ ಕೇಸ್​ನಲ್ಲಿ ದೊಡ್ಡವರ ಮಕ್ಕಳ ಹೆಸರು ಬಂದಾಗ ಪೊಲೀಸರು ಅಸಡ್ಡೆ ಮಾಡೋದು ಹೊಸದೇನಲ್ಲ. ಆದ್ರೆ ಈ ತಾಯಿ ಸಂಕಟಕ್ಕಾದ್ರೂ ಮನಸ್ಸು ಕರಗಿ ಆರೋಪಿಯನ್ನ ಬಂಧಿಸಿ ಅಂದರ್ ಮಾಡ್ಬೇಕಿದೆ. ಆಗ್ಲೇ ಕಾನೂನಿನ ಮೇಲಿರುವ ಗೌರವ ಹೆಚ್ಚಾಗೋದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ ಕಾರ್ಪೊರೇಟರ್ ಮಗನ ಚಕ್ಕಂದ.. ಲವ್‌ ಸ್ಟೋರಿಗೆ ಬಿಗ್ ಟ್ವಿಸ್ಟ್; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/09/bangalore-corporator-son-4.jpg

Load More