newsfirstkannada.com

Video: ದೇವರಿಗೆ ಮಂಚ್​ ಚಾಕೊಲೇಟ್​ನಿಂದ ತುಲಾಭಾರ ಮಾಡಿಸಿದ ಬಾಲಕ! ಈ ದೇವಸ್ಥಾನದ ಇತಿಹಾಸ ಗೊತ್ತಾ?

Share :

28-08-2023

    ಈ ದೇವರಿಗೆ ಮಂಚ್​ ಚಾಕೊಲೇಟ್​ ಅಂದ್ರೆ ಭಾರೀ ಇಷ್ಟ

    ಚಾಕೊಲೇಟ್​ ನೀಡಿ ಹರಕೆ ಸಮರ್ಪಿಸುತ್ತಾ ಬಂದಿರುವ ಭಕ್ತರು

    ಮಂಚ್​ ಬಾಕ್ಸ್​​ನೊಂದಿಗೆ ತುಲಾಭಾರ ಮಾಡಿಸಿದ ಪುಟ್ಟ ಹುಡುಗ

ದೇವರೊಬ್ಬ ನಾಮ ಹಲವು. ಇದು ಜಗತ್ತಿಗೆ ತಿಳಿದ ವಿಚಾರ. ಆದರೆ ಭಾರತದ ಉದ್ದಗಲಕ್ಕೂ ಸಂಚರಿಸಿದಾಗ ಅಲ್ಲಿನ ಜನರು ನಂಬುವ ವಿಚಿತ್ರ ದೇವರುಗಳನ್ನು ಮತ್ತು ಇತಿಹಾಸವನ್ನ ಕಾಣಬಹುದಾಗಿದೆ. ಮಾತ್ರವಲ್ಲದೆ ಆ ದೇವರಿಗೆ ಸಮರ್ಪಿಸುವ ವಿಚಿತ್ರ ಹರಕೆಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅದರಂತೆಯೇ ಇಲ್ಲೊಂದು ದೇವಸ್ಥಾನವಿದೆ. ಈ ದೇವರಿಗೆ ಏನು ಇಷ್ಟ ಗೊತ್ತಾ? ಸ್ಟೋರಿ ಓದಿ.

ಇಷ್ಟಾರ್ಥವನ್ನ ನೆರವೇರಿಸಿದಾಗ ದೇವರಿಗೆ ಹರಕೆ ರೂಪದಲ್ಲಿ ಏನಾದರು ನೀಡುತ್ತೇವೆ. ಕೆಲವರು ಹಣದ ರೂಪದಲ್ಲಿ, ಇನ್ನು ಕೆಲವರು ಧಾನ್ಯ ರೂಪದಲ್ಲಿ ಕೊಡುತ್ತಾರೆ. ಇದಲ್ಲದೆ ಮಣ್ಣಿನ ಮೂರ್ತಿಯನ್ನು ಹರಕೆಯ ರೂಪದಲ್ಲಿ ಸ್ವೀಕರಿಸುವ ದೇವಸ್ಥಾನವಿದೆ, ಮದ್ಯ, ಮಾಂಸವನ್ನು ಹರಕೆಯನ್ನಾಗಿ ಅರ್ಪಿಸಿಕೊಳ್ಳುವ ದೈವಸ್ಥಾನಗಳಿವೆ. ಆದರೆ ಇಲ್ಲೊಂದು ದೇವರಿಗೆ ಮಂಚ್ ಚಾಕೊಲೇಟ್​​ ಅಂದರೆ ಬಲು ಪ್ರೀತಿ. ಈ ದೇವರಿಗೆ ಅದನ್ನೇ ಹರಕೆ ರೂಪದಲ್ಲಿ ಸಮರ್ಪಿಸುತ್ತಾರೆ ಅಂದ್ರೆ ನಂಬ್ತೀರಾ?.

ಇದು ಸತ್ಯ. ಮಂಚ್​ ಮುರುಗನ್​ ದೇವಸ್ಥಾನ ಪ್ರತೀತಿಯೇ ಇದು. ದೇವರಿಗೆ ಇಲ್ಲಿ ಮಂಚ್​ ಚಾಕೋಲೇಟ್​ ಕೊಡುತ್ತಾರೆ. ಅಂದಹಾಗೆಯೇ ಬಾಲಕನೋರ್ವ ಮಂಚ್​ ಬಾಕ್ಸ್​ ಮೂಲಕ ದೇವರಿಗೆ ತುಲಾಭಾರ ಮಾಡಿಸಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

View this post on Instagram

A post shared by Nakul P (@our_dream_factory)

ಎಲ್ಲಿದೆ ಈ ದೇವಸ್ಥಾನ?

ಮಂಚ್​ ಮುರುಗನ್​ ಇದು ಕೇರಳದ ಅಲಪ್ಪುಳದಲ್ಲಿದೆ. ಸುಮಾರು 6 ವರ್ಷದ ಹಿಂದಿನಿಂದ ಈ ದೇವರಿಗೆ ಮಂಚ್​ ರೂಪದಲ್ಲಿ ಹರಕೆ ನೀಡುತ್ತಾರೆ. ಬಹುಸಂಖ್ಯಾ ಜನರು ಈ ದೇವರನ್ನು ಕಾಣಲು ಬರುತ್ತಾರೆ.

ಮಂಚ್​​ ಚಾಕೋಲೇಟ್​ ನೀಡೋದ್ಯಾಕೆ?

ಸುಮಾರು 6 ವರ್ಷಗಳ ಹಿಂದೆ ಪುಟ್ಟ ಮುಸ್ಲಿಂ ಬಾಲಕನೋರ್ವ ಆಟವಾಡುತ್ತಾ ಬಂದು ದೇವಾಲಯದ ಗಂಟೆ ಬಾರಿಸಿದ್ದ. ಇದೇ ವಿಚಾರಕ್ಕೆ ಆತನ ಪೋಷಕರು ಆತನಿಗೆ ಗದರಿಸಿದ್ದರಂತೆ. ಅದೇ ರಾತ್ರಿ ಬಾಲಕನಿಗೆ ಅನಾರೋಗ್ಯ ಕಾಡುತ್ತದೆ. ಮಾತ್ರವಲ್ಲದೆ ಪುಟ್ಟ ಬಾಲಕ ಕನಸಿನಲ್ಲಿ ಮುರುಗನ್ ಹೆಸರು ಕನವರಿಸುತ್ತಿದ್ದದ್ದನ್ನು ಪೋಷಕರು ಆಲಿಸುತ್ತಾರೆ. ನಂತರ ಆತನನ್ನು ಪೋಷಕರು ದೇವಸ್ಥಾನಕ್ಕೆ ಕರೆದುಕೊಂಡು ಬಂದು ಅರ್ಚಕರ ಬಳಿ ನಿಜ ಸಂಗತಿ ಹೇಳುತ್ತಾರೆ.

ಮುಸ್ಲಿಂ ಪೋಷಕರ ಈ ಕಥೆ ಕೇಳಿದ ಅರ್ಚಕ ದೇವರಿಗೆ ಏನಾದರೂ ನೈವೇದ್ಯ ನೀಡಿ ಸರಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಆ ಬಾಲಕ ಕೈಯಲ್ಲಿದ್ದ ಮಂಚ್​ ಚಾಕೊಲೇಟ್​ ಅನ್ನು ದೇವರಿಗೆ ಅರ್ಪಣೆ ಮಾಡುತ್ತಾನೆ. ಇದಾದ ಬಳಿಕ ಬಾಲಕ ಆರೋಗ್ಯ ಸರಿಯಾಗುತ್ತದೆ. ಊರಿಗೇ ಈ ಸುದ್ದಿ ಹರಡುತ್ತದೆ. ಅಂದಿನಿಂದ ಭಕ್ತಾದಿಗಳು ಮುರುಗನ್​ ದೇವರಿಗೆ ಮಂಚ್ ಚಾಕೊಲೇಟ್​​ ನೀಡುತ್ತಾ ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ದೇವರಿಗೆ ಮಂಚ್​ ಚಾಕೊಲೇಟ್​ನಿಂದ ತುಲಾಭಾರ ಮಾಡಿಸಿದ ಬಾಲಕ! ಈ ದೇವಸ್ಥಾನದ ಇತಿಹಾಸ ಗೊತ್ತಾ?

https://newsfirstlive.com/wp-content/uploads/2023/08/Munch-Murugan.jpg

Load More