ಈ ಕಂದನ ಸಾವಿಗೆ ಕಾರಣ ಕೇಳಿದ್ರೆ.. ನಿಮ್ಮ ಕಣ್ಣು ಕೆಂಪಾಗುತ್ತೆ!
ಮೈದಾನದ ಅಂಗಳದಲ್ಲೇ ಚಿರನಿದ್ರೆಗೆ ಜಾರಿದ 10 ವರ್ಷದ ಬಾಲಕ
ಮಕ್ಕಳ ಆಟದ ಮೈದಾನ ಸರಿಯಾಗಿ ನಿರ್ವಹಣೆ ಮಾಡದ ಬಿಬಿಎಂಪಿ
ಬೆಂಗಳೂರು: ಇವತ್ತು ಸಂಡೇ ಅಂತ ಬಿಬಿಎಂಪಿ ಆಟದ ಮೈದಾನಕ್ಕೆ ಹೋಗಿದ್ದ ಪುಟ್ಟ ಹುಡುಗ ದಾರುಣವಾಗಿ ಸಾವನ್ನಪ್ಪಿದ್ದಾನೆ. ಇವನ ಹೆಸರು ನಿರಂಜನ್ ಅಂತ. ಇನ್ನೂ 10 ವರ್ಷ ಅಷ್ಟೇ. ನಿರಂಜನ್ ಅಪ್ಪ ವಿಜಯ್ ಕುಮಾರ್ ಆಟೋಚಾಲಕ. ನಿರಂಜನ್ ಆಟ ಆಡೋಕೆ ಅಂತ ಮಲ್ಲೇಶ್ವರಂನ ಆಟದ ಮೈದಾನಕ್ಕೆ ಹೋಗಿದ್ದ. ಹೋದ ಅಷ್ಟೇ, ವಾಪಾಸ್ ಬರಲೇ ಇಲ್ಲ. ಮೈದಾನದ ಅಂಗಳದಲ್ಲೇ ಚಿರನಿದ್ರೆಗೆ ಜಾರಿಬಿಟ್ಟಿದ್ದಾನೆ.
ಇದನ್ನೂ ಓದಿ: ಮನೆಯ ಹೊಸ್ತಿಲಲ್ಲೇ ರಣ ಭೀಕರ ಹ*ತ್ಯೆ.. ಕಾರವಾರದಲ್ಲಿ ಉದ್ಯಮಿಯ ದಾರುಣ ಅಂತ್ಯ; ಆಗಿದ್ದೇನು?
ಮಗನ ಸಾವನ್ನು ಕಣ್ಣಾರೆ ಕಂಡ ಈ ಹೆತ್ತವರ ಸಂಕಟ ಯಾವ್ ಶತ್ರುಗೂ ಬೇಡ ಅನ್ಸುತ್ತೆ. ಅಷ್ಟಕ್ಕೂ ಕಂದನ ಸಾವಿಗೆ ಕಾರಣ ಕೇಳಿದ್ರೆ, ನಿಮ್ಮ ಕಣ್ಣು ಕೆಂಪಾಗುತ್ತೆ. ಥೂ ಇವ್ರಿಗೆ ನಾಚಿಕೆಯಾಗ್ಬೇಕು ಅಂತ ಕೋಪ ಬರುತ್ತೆ. ಯಾಕಂದ್ರೆ, ಈ ಬಾಲಕನ ಸಾವಿಗೆ ಕಾರಣ ಬಿಬಿಎಂಪಿ. ಇಷ್ಟು ದಿನ ಬ್ರ್ಯಾಂಡ್.. ಬ್ರ್ಯಾಂಡ್ ಅಂತಾ ಕಥೆ ಹೇಳ್ಕೊಂಡು ತಿರುಗಾಡ್ತಿದ್ದ ಬಿಬಿಎಂಪಿ ಈಗ ಕ್ರಿಮಿನಲ್ ಪಟ್ಟ ಹೊತ್ತಿದೆ ಅಂದ್ರೆ ತಪ್ಪೇ ಆಗೋದಿಲ್ಲ ಅನ್ಸುತ್ತೆ.
ಅಸಲಿಗೆ ಆಗಿದ್ದೇನು?
ನಿರಂಜನ್ ಆಟ ಆಡಲು ಹೋಗಿ ಬಿಬಿಎಂಪಿ ಮೈದಾನದ ಗೇಟ್ ಓಪನ್ ಮಾಡಿದ್ದಾನೆ. ಓಪನ್ ಮಾಡ್ತಿದ್ದಂತೆ ಮೈದಾನದ ಗೇಟ್ ಬಾಲಕನ ಮೇಲೆ ಬಿದ್ದು ಬಿಟ್ಟಿದೆ. ಗೇಟ್ ಬಿದ್ದ ರಭಸಕ್ಕೆ ಮಗುವಿನ ತಲೆಗೆ ತೀವ್ರ ಪೆಟ್ಟಾಗಿದೆ. ತಕ್ಷಣ ಸ್ಥಳೀಯರು ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ದುರಂತದಲ್ಲಿ ನಿರಂಜನ್ ಜೀವ ಉಳಿಯಲೇ ಇಲ್ಲ.
ಇದನ್ನೂ ಓದಿ: ಹೊಸ ಬೈಕ್ ಶೋಕಿ.. ತಂದೆ-ತಾಯಿ ಬುದ್ಧಿ ಮಾತಿಗೆ ಮನನೊಂದ ಮಗ ಸಾವಿಗೆ ಶರಣು; ಆಗಿದ್ದೇನು?
ಸ್ಥಳಕ್ಕೆ ಬಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಬಗ್ಗೆ ಮಾಹಿತಿ ಪಡೆದರು. ಲೋಪ ಆಗಿದ್ದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿ ಮಗನನ್ನು ಕಳೆದುಕೊಂಡ ನಿರಂಜನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ನಿಜಕ್ಕೂ ಈ ಸಾವಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದವರಿಗೆ ಕಠಿಣಾತಿ ಕಠಿಣ ಶಿಕ್ಷೆಯಾಗಲೇ ಬೇಕು. ಮಕ್ಕಳ ಆಟದ ಮೈದಾನವನ್ನು ಸರಿಯಾಗಿ ನಿರ್ವಹಣೆ ಮಾಡದ ಬಿಬಿಎಂಪಿ ಬುದ್ಧಿ ಕಲಿಯೋದು ಯಾವಾಗ ಅನ್ನೋದೇ ಎಲ್ಲರ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ