newsfirstkannada.com

VIDEO: ಸಂಗಾತಿ ಜೊತೆ ಸೇರಲು ಬಿಡದಿದ್ದಕ್ಕೆ ತಿವಿದು ತಿವಿದು ಕೊಂದ; ಇಡೀ ಊರಿಗೆ ವಿಲನ್ ಆದ ಕೋಣ

Share :

19-06-2023

    ಇಡೀ ಗ್ರಾಮಕ್ಕೆ ವಿಲನ್​​​ ಆದ ಕೋಣ.. ಅಸಲಿಗೆ ಆಗಿದ್ದೇನು..?

    ಪ್ರೇಯಸಿ ದೂರಾದ ನಿರಾಸೆಗೆ ಪ್ರೇಮಿಯೊಬ್ಬ ಕೊಲೆಗಾರ ಆದ

    ತನ್ನ ಪ್ರೀತಿಗೆ ಅಡ್ಡಬಂದ ವ್ಯಕ್ತಿಗೆ ತಿವಿದು ತಿವಿದು ಕೊಂದ ಕೋಣ

ದಾವಣಗೆರೆ: ಪ್ರೇಯಸಿ ದೂರಾದ ಭಗ್ನ ಪ್ರೇಮಿಯೊಬ್ಬ ಕೊಲೆಗಾರ ಆಗಿ ಬಿಟ್ಟಿದ್ದಾನೆ. ಪ್ರೀತಿಗೆ ಮುಳ್ಳಾದ ವ್ಯಕ್ತಿಯೋರ್ವನನ್ನ ತಿವಿದು ತಿವಿದು ಹತ್ಯೆ ಮಾಡಿದ್ದಾನೆ. ಇದು ಮನುಷ್ಯರ ಪ್ರೇಮ್​ ಕಹಾನಿ ಅಲ್ಲ ಒಂದು ಎಮ್ಮೆ ಮತ್ತು ಒಂದು ಕೋಣದ ಕಹಾನಿ. ಕೋಣದ ಊರು ದಾವಣಗರೆಯ ಲಿಂಗದಹಳ್ಳಿ. ಅಷ್ಟಕ್ಕೂ ಈ ಕೋಣ ಕೊಲೆಗಾರ ಅಗೋದಕ್ಕೆ ಕಾರಣ ಏನು ಗೊತ್ತಾ ಪ್ರೀತಿ, ಪ್ಯಾರ್​, ಮೊಹಬತ್​. ಅದೇ ಕೋಣದ ಪ್ರೇಮ್​ ಕಹಾನಿಗೆ ಅಡ್ಡಿಯಾದ ಜಯಣ್ಣ ಅನ್ನೋ ವ್ಯಕ್ತಿಯನ್ನ ಕೋಣ ಹತ್ಯೆ ಮಾಡಿ ಆರೋಪಿಯಾಗ್ಬಿಟ್ಟಿದೆ. ಇಷ್ಟು ದಿನ ಪ್ರೀತಿ ತಿರಸ್ಕರಿಸಿದಕ್ಕೆ ಪ್ರೇಯಸಿಯ ಹತ್ಯೆಗೈದ ಪ್ರಿಯಕರ ಅಂತ ನಾವು ನೀವು ಟಿವಿಲಿ ನೋಡ್ತಿದ್ವಿ. ಅದೇ ರೀತಿ ತನ್ನ ಪ್ರೀತಿಗೆ ಅಡ್ಡಬಂದ ಅಂತ ಜಯಣ್ಣ ಎಂಬಾತನ್ನ ಈ ಕೋಣ ತಿವಿದು ತಿವಿದು ಕೊಂದು ಬಿಟ್ಟಿದೆ.

ದಾವಣಗೆರೆಯ ಲಿಂಗದಹಳ್ಳಿಯಲ್ಲಿ ಈ ಕೋಣವನ್ನು ಗ್ರಾಮದ ದೇವರಿಗೆ ಬಿಡಲಾಗಿತ್ತು. ಕೋಣ ಬಸವನಹಳ್ಳಿ ಗ್ರಾಮದ ಎಮ್ಮೆಗಳ ಜೊತೆ ಸೇರಿ ದಾಂಧಲೆ ಮಾಡುತ್ತಿತ್ತು. ಪದೇ ಪದೇ ತನ್ನ ಪ್ರೇಯಸಿಯನ್ನ ಅರಸಿ ಕೋಣ ಬಸವನ ಹಳ್ಳಿಗೆ ಹೋಗ್ತಿತ್ತು. ಆದ್ರೆ ಎಮ್ಮೆಯ ಬಳಿ ಬರ್ತಿದ್ದ ಈ ಕೋಣನಿಗೆ ಬಸವನಹಳ್ಳಿ ಗ್ರಾಮದ ನೀರಗಂಟಿ ಜಯಣ್ಣ ಎಂಬಾತ ವಿಲನ್​ ಆಗ್ಬಿಟ್ಟಿದ್ದರು. ಕೋಣ ಬರ್ತಿದ್ದಂತೆ ಜಯಣ್ಣ ದೊಣ್ಣೆಯಿಂದ ಹೊಡೆದು ಓಡಿಸುತ್ತಿದ್ರು. ಪದೇ ಪದೇ ಜಯಣ್ಣ ನೀಡ್ತಿದ್ದ ಕಾಟಕ್ಕೆ ಎಮ್ಮೆಯಿಂದ ದೂರಾಗಿ ವಿರಹವೇದನೆ ಅನುಭವಿಸುತ್ತಿದ್ದ ಈ ಕೋಣ ಅವರ ಮೇಲೆ ಹಗೆ ಸಾಧಿಸುತಿತ್ತು. ನನ್ನ ಪ್ರೀತಿಗೆ ಮುಳ್ಳಾಗ್ತಿರೋ ಜಯಣ್ಣ ಮೇಲೆ ಹಲವು ಭಾರೀ ದಾಳಿಗೂ ಯತ್ನಿಸಿತ್ತು. ಗ್ರಾಮದ ನಿವಾಸಿಗಳು ಹಲವು ಭಾರೀ ಜಯಣ್ಣನ ರಕ್ಷಣೆ ಸಹ ಮಾಡಿದ್ರು. ಆದ್ರೆ ನಿನ್ನೆ ಇಳಿ ಸಂಜೆ ಹೊತ್ತಲ್ಲೇ ಯಾರು ಇಲ್ಲದನ್ನ ಗಮನಿಸಿದ ಕೋಣ ಮನಸ್ಸೋ ಇಚ್ಛೇ ಜಯಣ್ಣ ಮೇಲೆ ದಾಳಿ ಮಾಡಿ, ಕೊಂದು ಹಾಕಿದೆ. ಜಯಣ್ಣನನ್ನ ಹತ್ಯೆಗೈದ ದೇವರ ಕೋಣವನ್ನ ಗ್ರಾಮಸ್ಥರು ಹಿಡಿದು ಕಟ್ಟಿಹಾಕಿದ್ದಾರೆ.

ಕೋಣದ ಸೇಡಿಗೆ ಬಲಿಯಾದ ಜಯಣ್ಣನ ಕುಟುಂಬಸ್ಥರು ಕೋಣನಿಗೆ ಹಿಡಿಶಾಪ ಹಾಕುತ್ತಾ ಕಣ್ಣೀರಿಟ್ಟಿದ್ದಾರೆ.. ಕೋಣದ ಪ್ರೀತಿಗೆ ಅಡ್ಡಿಯಾದ ಜಯಣ್ಣನನ್ನ ಹತ್ಯೆ ಮಾಡಿ ಕೋಣ ಇಡೀ ಗ್ರಾಮಕ್ಕೆ ವಿಲನ್ ಆಗಿದೆ. ಮತ್ತೆ ಕೋಣವನ್ನ ಮೇಯಲು ಬಿಟ್ಟರೆ ಗ್ರಾಮಸ್ಥರ ಮೇಲೆ ದಾಳಿ ಮಾಡುವ ಆತಂಕವೂ ಜನರಲ್ಲಿ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಸಂಗಾತಿ ಜೊತೆ ಸೇರಲು ಬಿಡದಿದ್ದಕ್ಕೆ ತಿವಿದು ತಿವಿದು ಕೊಂದ; ಇಡೀ ಊರಿಗೆ ವಿಲನ್ ಆದ ಕೋಣ

https://newsfirstlive.com/wp-content/uploads/2023/06/death-2-4.jpg

Load More