newsfirstkannada.com

ಬಿಲ್ಡರ್ ಮಗನ ಮೇಲೆ ಹಲ್ಲೆ ಮಾಡಿದ ಮತ್ತೊಬ್ಬ ಬಿಲ್ಡರ್; ಬೆಂಗಳೂರು ಹೋಟೆಲ್‌ನಲ್ಲಿ ಮತ್ತೊಂದು ಹೈಪ್ರೊಫೈಲ್ ಫೈಟ್‌

Share :

12-06-2023

  ಕುಡಿದ ಮತ್ತಿನಲ್ಲಿ ಡ್ರಿಂಕ್ಸ್ ಬಾಟಲಿನಿಂದ ಹಲ್ಲೆ ಆರೋಪ

  ವೈಷ್ಣವಿ ಗ್ರೂಪ್ಸ್‌ ಬಿಲ್ಡರ್‌ ಪುತ್ರನ ಮೇಲೆ ದೂರು ದಾಖಲು

  ನಲಪಾಡ್, ವಿದ್ವತ್ ಮಾದರಿಯ ಮತ್ತೊಂದು ಗಲಾಟೆ

ಬೆಂಗಳೂರು: ಕುಡಿದ ಮತ್ತಿನಲ್ಲಿ ಡ್ರಿಂಕ್ಸ್ ಬಾಟಲಿನಿಂದ ಹಲ್ಲೆ ಮಾಡಿರುವ ಘಟನೆ ನಗರದ ಫೋರ್ ಸೀಜನ್ ಹೋಟೆಲ್‌ನಲ್ಲಿ ನಡೆದಿದೆ. ಪ್ರತಿಷ್ಠಿತ ಬಿಲ್ಡರ್ ಮಗನ ಮೇಲೆ ಮತ್ತೊಬ್ಬ ಬಿಲ್ಡರ್, ಡ್ರಿಂಕ್ಸ್ ಬಾಟಲಿನಿಂದ ಮುಖ ಹಾಗೂ ಕೈ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಕಳೆದ ಜೂನ್ 9ರಂದು ಫೋರ್ ಸೀಜನ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ವೈಷ್ಣವಿ ಬಿಲ್ಡರ್ಸ್ ಮಾಲೀಕ ಗೋವಿಂದರಾಜು ಪುತ್ರ ದರ್ಶನ್‌ ಅವರು ಬಿಲ್ಡರ್ ವೇದಾಂತ್ ದುಗ್ಗರ್ ಅವರಿಗೆ ಡ್ರಿಂಕ್ಸ್ ಬಾಟಲಿನಿಂದ ಮುಖ ಹಾಗೂ ಕೈ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ವೈಷ್ಣವಿ ಗ್ರೂಪ್ಸ್‌ ಗೋವಿಂದರಾಜು ಪುತ್ರ ದರ್ಶನ್‌ ಗೋವಿಂದರಾಜು ವಿರುದ್ಧ ಬಿಲ್ಡರ್ ವೇದಾಂತ್ ದುಗ್ಗರ್ ವಿರುದ್ಧ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 307, 504ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕುಡಿದ ಮತ್ತಿನಲ್ಲಿ ವೈಷ್ಣವಿ ಬಿಲ್ಡರ್ ಮಾಲೀಕ ಗೋವಿಂದರಾಜ್ ಮಗ ದರ್ಶನ್ ಹಾಗೂ ದುಗ್ಗರ್ ನಡುವೆ ಗಲಾಟೆ ನಡೆದಿದೆ. ಘಟನೆಯಾದ ಬಳಿಕ ಗಾಯಾಳು ದರ್ಶನ್‌ನನ್ನು ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ನಂತರ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

2018ರಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ನಲಪಾಡ್ ಹಾಗೂ ವಿದ್ವತ್ ಮಧ್ಯೆ ಇಂತಹದೇ ಗಲಾಟೆ ನಡೆದಿತ್ತು. ಇದೇ ಮಾದರಿಯಲ್ಲಿ ಈಗ ಬೆಂಗಳೂರಿನ ಫೋರ್ ಸೀಜನ್ ಹೋಟೆಲ್‌ನಲ್ಲಿ ವೈಷ್ಣವಿ ಬಿಲ್ಡರ್ ಮಾಲೀಕ ಗೋವಿಂದರಾಜ್ ಮಗ ದರ್ಶನ್, ಬಿಲ್ಡರ್ ದುಗ್ಗರ್ ಹಲ್ಲೆ ಮಾಡಿದ್ದಾರೆ ಅನ್ನೋ ದೂರು ದಾಖಲಾಗಿದೆ. ಆರ್.ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಗಲಾಟೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬಿಲ್ಡರ್ ಮಗನ ಮೇಲೆ ಹಲ್ಲೆ ಮಾಡಿದ ಮತ್ತೊಬ್ಬ ಬಿಲ್ಡರ್; ಬೆಂಗಳೂರು ಹೋಟೆಲ್‌ನಲ್ಲಿ ಮತ್ತೊಂದು ಹೈಪ್ರೊಫೈಲ್ ಫೈಟ್‌

https://newsfirstlive.com/wp-content/uploads/2023/06/Bangalore-Hotel.jpg

Load More