newsfirstkannada.com

485 ಗ್ರಾಂ ಚಿನ್ನ, 17 ಕ್ಯಾರೆಟ್ ವಜ್ರ.. ಚೆನ್ನೈ ಉದ್ಯಮಿ ಸೂಟ್‌ಕೇಸ್‌ ಕದ್ದು ಪರಾರಿಯಾಗಿದ್ದ ಕ್ಯಾಬ್‌ ಚಾಲಕನ ಬಂಧನ

Share :

02-09-2023

  ಮದುವೆಗೆಂದು ಚೆನ್ನೈ ಇಂದ ಬೆಂಗಳೂರಿಗೆ ಬಂದಿದ್ದ ಉದ್ಯಮಿ

  ಸೂಟ್‌ಕೇಸ್‌ನಲ್ಲಿದ್ದ ಚಿನ್ನ, ವಜ್ರಾಭರಣಗಳನ್ನು ದೋಚಿ ಪರಾರಿ

  30 ಲಕ್ಷ ರೂಪಾಯಿ ಮೌಲ್ಯದ 485 ಗ್ರಾಂ ಚಿನ್ನ, ವಜ್ರ ಕಳ್ಳತನ

ಬೆಂಗಳೂರು: ಚೆನ್ನೈ ಉದ್ಯಮಿಯ ವಜ್ರ ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದ ಕ್ಯಾಬ್ ಚಾಲಕನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕಾರು ಚಾಲಕನನ್ನು ರಾಜಾನುಕುಂಟೆ ಮೂಲದ ನಂದೀಶ್ ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಚೆನ್ನೈ ಮೂಲದ ಉದ್ಯಮಿಯೊಬ್ಬರು ಬೆಂಗಳೂರಿಗೆ ಮದುವೆಗೆಂದು ಬಂದಿದ್ದರು. ಉದ್ಯಮಿ ಯಲಹಂಕ ಬಳಿಯ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಮದುವೆ ಮುಗಿಸಿ ವಾಪಸ್ ತೆರಳಲು ರೆಡಿಯಾಗಿದ್ದಾಗ ಉದ್ಯಮಿಯ ಸೂಟ್‌ಕೇಸ್‌ ಕಳ್ಳತನ ಮಾಡಲಾಗಿತ್ತು. ಈ ವೇಳೆ 30 ಲಕ್ಷ ರೂಪಾಯಿ ಮೌಲ್ಯದ 485 ಗ್ರಾಂ ಚಿನ್ನ, 17 ಕ್ಯಾರೆಟ್ ತೂಕದ ವಜ್ರ ಕಳುವಾಗಿತ್ತು.

ಇದನ್ನೂ ಓದಿ: ಅಣ್ತಮ್ಮ ನಾವ್‌ ಬಂದ್ರೂ ರೆಸ್ಪೆಕ್ಟ್‌ ಕೊಡಲ್ವಾ.. ಬೆಂಗಳೂರಲ್ಲಿ ಪುಡಿ ರೌಡಿಗಳಿಂದ ಡೆಡ್ಲಿ ಅಟ್ಯಾಕ್‌!

ಚಿನ್ನ, ವಜ್ರಾಭರಣಗಳನ್ನು ಕಳೆದುಕೊಂಡಿದ್ದ ಉದ್ಯಮಿ ಕೂಡಲೇ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಉದ್ಯಮಿಯ ವಜ್ರ ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ರಾಜಾನುಕುಂಟೆ ಮೂಲದ ಕ್ಯಾಬ್ ಚಾಲಕ ನಂದೀಶ್, ಈ ಹಿಂದೆ ಕೂಡ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

485 ಗ್ರಾಂ ಚಿನ್ನ, 17 ಕ್ಯಾರೆಟ್ ವಜ್ರ.. ಚೆನ್ನೈ ಉದ್ಯಮಿ ಸೂಟ್‌ಕೇಸ್‌ ಕದ್ದು ಪರಾರಿಯಾಗಿದ್ದ ಕ್ಯಾಬ್‌ ಚಾಲಕನ ಬಂಧನ

https://newsfirstlive.com/wp-content/uploads/2023/09/Bangalore-Cab-Driver.jpg

Load More