newsfirstkannada.com

ಭೀಕರ ಅಪಘಾತ.. ಶಿವಮೊಗ್ಗದಲ್ಲಿ ಕಾರು, ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; ಏನಾಯ್ತು?

Share :

Published July 3, 2024 at 3:38pm

  ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಕಾರು ಖಾಸಗಿ ಬಸ್‌ಗೆ ಡಿಕ್ಕಿ

  ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ ಪಲ್ಟಿ ಹೊಡೆದ ಖಾಸಗಿ ಬಸ್

  15ಕ್ಕೂ ಹೆಚ್ಚು ಪ್ರಯಾಣಿಕರು ಶಿರಾಳಕೊಪ್ಪದಿಂದ ಬಸ್‌ನಲ್ಲಿ ಪ್ರಯಾಣ

ಶಿವಮೊಗ್ಗ ಜಿಲ್ಲೆಯ ಜಾವಗಟ್ಟಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಚಾಲಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಕಾರಿಗೆ ಡಿಕ್ಕಿಯಾದ ಪರಿಣಾಮ ಖಾಸಗಿ ಬಸ್ ಪಲ್ಟಿಯಾಗಿದೆ.

ಇದನ್ನೂ ಓದಿ: ತೆಪ್ಪ ಮಗುಚಿ ದುರಂತ.. ಇಸ್ಪೀಟ್ ಆಡುತ್ತಿದ್ದ 7ರಲ್ಲಿ ಮೂವರ ಮೃತದೇಹ ಪತ್ತೆ; ಪ್ರತ್ಯಕ್ಷದರ್ಶಿ ಹೇಳಿದ್ದೇನು? 

ಶಿಕಾರಿಪುರ ತಾಲೂಕಿನ ಜಾವಗಟ್ಟಿ ಬಳಿಯ ದೇವಿಕೊಪ್ಪ ಕೆರೆ ಏರಿ ಮೇಲೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ. ಕಾರು ಚಾಲಕ ಜಖಂ ಆದ ಕಾರಿನಲ್ಲಿ ಸಿಲುಕಿಕೊಂಡಿದ್ದು, ರಕ್ಷಿಸಲು ಸಾಧ್ಯವಾಗಿಲ್ಲ.

ರಾಜಲಕ್ಷಿ ಹೆಸರಿನ ಖಾಸಗಿ ಬಸ್ ಶಿರಾಳಕೊಪ್ಪದಿಂದ ಶಿವಮೊಗ್ಗಕ್ಕೆ ಹೋಗುತ್ತಿತ್ತು. ಬಸ್‌ನಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಶಿವಮೊಗ್ಗ ಕಡೆಯಿಂದ ಕಾರು ಹಾಗೂ ಶಿರಾಳಕೊಪ್ಪ ಕಡೆಯಿಂದ ಬರುತ್ತಿದ್ದ ಬಸ್ ಶಿಕಾರಿಪುರ ತಾಲೂಕಿನ ಜಾವಗಟ್ಟಿ ಬಳಿಯ ದೇವಿಕೊಪ್ಪ ಕೆರೆ ಏರಿ ಅಪಘಾತಕ್ಕೀಡಾಗಿವೆ. ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳನ್ನು ರವಾನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಅಪಘಾತ.. ಶಿವಮೊಗ್ಗದಲ್ಲಿ ಕಾರು, ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; ಏನಾಯ್ತು?

https://newsfirstlive.com/wp-content/uploads/2024/07/Shivamogga-Bus-Accident.jpg

Load More