newsfirstkannada.com

ಅಬ್ಬಾ.. ಪಟಾಕಿ ಹೊಡೆಯುತ್ತಿದ್ದ ಪುಟ್ಟ ಬಾಲಕನ ಮೇಲೆ ಹರಿದ ಕಾರು; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

Share :

16-11-2023

    ಪಟಾಕಿ ಸಿಡಿಸುತ್ತಿದ್ದ ಬಾಲಕನ ಮೇಲೆ ಏಕಾಏಕಿ ಹರಿದ ಕಾರು

    ಮನೆಯಿಂದ ಪಟಾಕಿ ಹೊಡೆಯಲು ಹೋದ ಬಾಲಕನಿಗೆ ಆಪತ್ತು

    ಬಾಲಕನ ಮೇಲೆ ಕಾರು ಹತ್ತಿಸಿದ ನಂತರವೂ ಮುಂದೆ ಹೋದ ಚಾಲಕ

ಸೂರತ್‌: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಹೊಡೆಯುವಾಗ ಮಕ್ಕಳ ಮೇಲೆ ಪೋಷಕರು ಎಷ್ಟು ಎಚ್ಚರ ವಹಿಸಿದ್ರು ಕಡಿಮೆನೇ. ಪಟಾಕಿ ಸಿಡಿಸೋ ಖುಷಿಯಲ್ಲಿ ಏನಾದ್ರು ಅಪಾಯ ಸಂಭವಿಸಿದ್ರೆ ಆಮೇಲೆ ಅವರು ಅನುಭವಿಸೋ ನೋವು ಅಷ್ಟಿಷ್ಟಲ್ಲ. ಆದ್ರೆ, ಗುಜರಾತ್‌ನಲ್ಲಿ ತನ್ನ ಪಾಡಿಗೆ ತಾನು ಪಟಾಕಿ ಹೊಡೆಯಲು ಹೋದ ಬಾಲಕನಿಗೆ ಕಾರು ಚಾಲಕ ಅನಾಹುತ ತಂದೊಡ್ಡಿದ್ದಾನೆ.

ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದ 7 ವರ್ಷದ ಪುಟ್ಟ ಬಾಲಕನ ಮೇಲೆ ಕಾರು ಹರಿದ ಘಟನೆ ಸೂರತ್​ನಲ್ಲಿ ನಡೆದಿದೆ. ಬಾಲಕನೋರ್ವ ಮನೆಯಿಂದ ಹೊರ ಬಂದು ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದ. ಈ ವೇಳೆ ಏಕಾಏಕಿ ತಿರುವಿನಿಂದ ಬಂದ ಕಾರು ಬಾಲಕನ ಮೇಲೆ ಹರಿದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

બાળક પર ફરી વળી કાર, જુઓ સીસીટીવી#Surat #Accident #CCTV #SuratCCTV #KhabriMedia #khabriGujarat pic.twitter.com/KTr3rEAK6t

— khabri Gujarat (@KhabriGujarat) November 15, 2023

ಬಾಲಕನ ಮೇಲೆ ಕಾರು ಹತ್ತಿಸಿದ ನಂತರವೂ ಚಾಲಕ ಕಾರನ್ನು ಹಾಗೇ ಮುಂದೆ ಸಾಗಿದ್ದಾನೆ. ಆದ್ರೆ ಟೈಯರ್ ಬಾಲಕನ ಮೇಲೆ ಹತ್ತದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಚಾಲಕನ ನಿರ್ಲಕ್ಷ್ಯದಿಂದ ಬಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಪಟಾಕಿ ಹೊಡೆಯುತ್ತಿದ್ದ ಪುಟ್ಟ ಬಾಲಕನ ಮೇಲೆ ಹರಿದ ಕಾರು; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

https://newsfirstlive.com/wp-content/uploads/2023/11/Car-CCTV-Video-1.jpg

Load More