newsfirstkannada.com

ಪ್ರಥಮ ಚುಂಬನಂ ದಂತ ಭಗ್ನಂ.. ಫಸ್ಟ್ ನೈಟ್‌ ಕೋಣೆಯಲ್ಲಿ ವಧುಗಾಗಿ ಕಾಯುತ್ತಿದ್ದ ವರನ ಮೇಲೆ ಬಿದ್ದ ಸೀಲಿಂಗ್ ಫ್ಯಾನ್

Share :

19-06-2023

  ಅಯ್ಯೋ ಪಾಪ ಮೊದಲ ರಾತ್ರಿಯೇ ವರನಿಗೆ ಹಿಂಗಾಗಬಾರದಿತ್ತು!

  ಅಲಂಕಾರವಾಗಿದ್ದ ಫಸ್ಟ್‌ ನೈಟ್ ಕೋಣೆಯಲ್ಲಿ ಮಲಗಿದ್ದ ಮದುಮಗ

  ಅದ್ಧೂರಿಯಾಗಿ ಮದುವೆಯಾಗಿದ್ದ ವರನಿಗೆ ಮಾರನೇ ದಿನವೇ ಆಘಾತ

ಅಯ್ಯೋ ಪಾಪ ಹಿಂಗಾಗಬಾರದಿತ್ತು.. ಈ ಸ್ಟೋರಿ ಓದಿದ ಮೇಲೆ ಎಂಥವರಿಗೂ ಹೀಗೆ ಅನ್ನಿಸದೇ ಇರಲ್ಲ. ಯಾಕಂದ್ರೆ ಮೊದಲ ರಾತ್ರಿಯಲ್ಲಿ ವಧುಗಾಗಿ ಕಾಯುತ್ತಿದ್ದ ನವವರನಿಗೆ ಸೀಲಿಂಗ್ ಫ್ಯಾನ್ ವಿಲನ್ ಆಗಿ ಪರಿಣಮಿಸಿದೆ. ಫಸ್ಟ್ ನೈಟ್‌ ಅಲ್ಲಿ ಫುಲ್ ರೆಡಿಯಾಗಿದ್ದ ಮದುಮಗ ಈಗ ಆಸ್ಪತ್ರೆಯ ಬೆಡ್‌ ಮೇಲೆ ಮಲಗುವಂತಾಗಿದೆ.

ಪ್ರಥಮ ಚುಂಬನಂ ದಂತ ಭಗ್ನಂ ಅನ್ನೋ ಮಾತಿದೆ. ಇದು ಇಲ್ಲಿ ನಿಜವಾಗಿದೆ. ಅಸಲಿಗೆ ಇಂತಹದೊಂದು ಶಾಕಿಂಗ್ ಘಟನೆ ನಡೆದಿರೋದು ರಾಜಸ್ಥಾನದ ನಾಗಪುರ ಜಿಲ್ಲೆಯ ಮಕ್ರಾನಾ ಪಟ್ಟಣದಲ್ಲಿ.

ಅದ್ಧೂರಿಯಾಗಿ ಮದುವೆಯಾಗಿದ್ದ ಮದುಮಗ ಮಾರನೇ ದಿನವೇ ಮೊದಲ ರಾತ್ರಿಗೆ ರೆಡಿಯಾಗಿದ್ದ. ಮೊದಲ ರಾತ್ರಿಗೆ ಕೋಣೆಯನ್ನು ಹೂಗಳ ಅಲಂಕಾರದಿಂದ ಭರ್ಜರಿಯಾಗಿ ರೆಡಿ ಮಾಡಲಾಗಿತ್ತು. ಇನ್ನೆನ್ನು ಫಸ್ಟ್ ನೈಟ್ ಕೋಣೆ ವಧು ಕೂಡ ಬರಬೇಕಿತ್ತು. ಅಷ್ಟರಲ್ಲೇ ರೂಮ್‌ನಲ್ಲಿದ್ದ ಸೀಲಿಂಗ್ ಫ್ಯಾನ್ ಸಡನ್ ಆಗಿ ವರನ ಮೇಲೆ ಬಿದ್ದಿದೆ. ಫ್ಯಾನ್ ಬಿದ್ದ ರಭಸಕ್ಕೆ ಮದುಮಗ ಜೋರಾಗಿ ಕಿರುಚಾಡಿದ್ದಾನೆ. ಕೂಡಲೇ ಮನೆಯವರು ಮದುಮಗನನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.

ಸೀಲಿಂಗ್ ಫ್ಯಾನ್ ಬಿದ್ದ ರಭಸಕ್ಕೆ ಮದುಮಗನ ಕುತ್ತಿಗೆಗೆ ಗಂಭೀರ ಗಾಯವಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ಆತನ ಕುತ್ತಿಗೆಗೆ 26 ಸ್ಟಿಚ್‌ಗಳನ್ನು ಹಾಕಿದ್ದಾರೆ. ಫಸ್ಟ್ ನೈಟ್ ಬೆಡ್‌ ಮೇಲಿದ್ದ ಮದುಮಗ ಆಸ್ಪತ್ರೆಯ ಬೆಡ್‌ ಮೇಲೆ ರೆಸ್ಟ್ ತೆಗೆದುಕೊಳ್ಳುತ್ತಿದ್ದಾನೆ. ಮದುಮಗನ ಮನೆಯವರು ಸದ್ಯ ಪ್ರಾಣಕ್ಕೆ ಅಪಾಯವಾಗಲಿಲ್ಲ ಅಂತಾ ನಿಟ್ಟುಸಿರು ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪ್ರಥಮ ಚುಂಬನಂ ದಂತ ಭಗ್ನಂ.. ಫಸ್ಟ್ ನೈಟ್‌ ಕೋಣೆಯಲ್ಲಿ ವಧುಗಾಗಿ ಕಾಯುತ್ತಿದ್ದ ವರನ ಮೇಲೆ ಬಿದ್ದ ಸೀಲಿಂಗ್ ಫ್ಯಾನ್

https://newsfirstlive.com/wp-content/uploads/2023/06/Rajasthan-Fan.jpg

Load More