ವಿಚಿತ್ರ ಸಂಪ್ರದಾಯಕ್ಕೆ ಮಗುವೊಂದು ಬಲಿಯಾದ ಪ್ರಕರಣ
ಕಾಡುಗೊಲ್ಲರ ವಿಚಿತ್ರ ಸಂಪ್ರದಾಯಕ್ಕೆ ಪುಟಾಣಿ ಕಂದ ಬಲಿ
ಊರಾಚೆಗಿದ್ದ ತಾಯಿ, ಮಗು.. ಇದಕ್ಕೆ ಕಾರಣವೇ ಈ ವಿಚಿತ್ರ ಸಂಪ್ರದಾಯ
ತುಮಕೂರು: ವಿಚಿತ್ರ ಆಚರಣೆ ಮರುಳಾಗಿ ಊರ ಹೊರಗಿಟ್ಟಿದ್ದ ಹಸುಗೂಸೊಂದು ಸಾವನ್ನಪ್ಪಿದ ಘಟನೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಮಲ್ಲೆನಹಳ್ಳಿ ಗೊಲ್ಲರಹಟ್ಟಿಯ ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ಎಂದು ಗುರುತಿಸಲಾಗಿದೆ.
ಕಾಡುಗೊಲ್ಲರ ವಿಚಿತ್ರ ಸಂಪ್ರದಾಯದಿಂದ ಊರಿನಲ್ಲಿ ಬಾಣಂತಿ ಮತ್ತು ಮಗುವನ್ನ ಊರ ಹೊರಗಿಟ್ಟಿದ್ದರು. ಮಳೆ, ಗಾಳಿಯಿದ್ದರೂ ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಯೇ ಇದ್ದರು. ಆದರೆ ವಿಪರೀತ ಶೀತದಿಂದ ಮಗು ಬಳಲಿದೆ.
ಕೊನೆಗೆ ಶೀತದಿಂದ ಬಳಲುತ್ತಿದ್ದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯ ಐಸಿಯುನಲ್ಲಿಯೇ ಇಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಹಸುಗೂಸು ಪ್ರಾಣಬಿಟ್ಟಿದೆ.
ವಿಚಿತ್ರ ಆಚರಣೆಯಿಂದ ಹಸುಗೂಸು ಬಲಿ
ಕಾಡುಗೊಲ್ಲರು ಕುಟುಂಬಸ್ಥರು ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಬಾಣಂತಿ ಮತ್ತು ಮಗುವನ್ನ ಊರ ಹೊರಗಿಟ್ಟಿದ್ದರು. ಹೀಗಾಗಿ ಮಗುವಿಗೆ ಶೀತ ಕಾಣಿಸಿಕೊಂಡಿತ್ತು. ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬಿದ್ದು ಪುಟ್ಟ ಕಂದ ವಿಚಿತ್ರ ಸಂಪ್ರದಾಯಕ್ಕೆ ಬಲಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ