ಪಾದರಕ್ಷೆ ಒಳಗೆ ಅಡಗಿ ಕುಳಿತ್ತಿದ್ದ ನಾಗರ ಹಾವು
ಸ್ನೇಕ್ ಸುರೇಶ್ ಪೂಜಾರಿಯಿಂದ ಅಡಗಿದ್ದ ನಾಗರ ಹಾವಿನ ರಕ್ಷಣೆ
ಹಾವು ಪತ್ತೆಯಾದರೆ ಹೊಡೆದು ಕೊಲ್ಲಬೇಡಿ ಎಂದ ಉರಗ ತಜ್ಞ
ಕೊಡಗು: ಸದ್ಯ ವಾತಾವರಣದಲ್ಲಿ ವ್ಯತ್ಯಾಸವಿದೆ. ಒಮ್ಮೆ ಮಳೆ ಬಂದರೆ ಮತ್ತೆಮ್ಮೆ ಬಿಸಿಲು ಮೂಡುವುದು, ಅದರಲ್ಲೂ ಬೆಳಗ್ಗಿನ ಜಾವ ಚಳಿ ಇರುತ್ತದೆ. ಆದರೆ ಈ ಸಮಯದಲ್ಲಿ ಪಾದರಕ್ಷೆ ಧರಿಸುವ ಮುನ್ನ ಗಮನಿಸಿ ತೊಡುವುದು ಒಳಿತು. ಯಾಕಂದ್ರೆ ಹಾವು ಇರ್ಬೋದು ಕಣ್ರಿ.
ಹೌದು. ಕೊಡಗು ಜಿಲ್ಲೆ ಸಿದ್ದಾಪುರ ಸಮೀಪದ ನೆಲ್ಯಾಹುದಿಕೇರಿ ಗ್ರಾಮದ ಶಾಲಿವರ ಮನೆಯಲ್ಲಿ ಪಾದರಕ್ಷೆ ಒಳಗೆ ನಾಗರ ಹಾವೊಂದು ಅಡಗಿ ಕುಳಿತ್ತಿತ್ತು. ಈ ವಿಚಾರ ಗೊತ್ತಾದಂತೆ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸುರೇಶ್ ಪೂಜಾರಿ ಅಡಗಿದ್ದ ನಾಗರ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದ್ದಾರೆ. ಬಳಿಕ ಅರಣ್ಯಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ.
ಶೂ ಒಳಗಿದ್ದ ಬುಸ್ ಬುಸ್ ನಾಗಪ್ಪ#Snake #Shoes #CobraSnake pic.twitter.com/8WCFsMSPZp
— NewsFirst Kannada (@NewsFirstKan) September 17, 2023
ಮುಂಜಾನೆ ಕೆಲಸಕ್ಕೆ ತೆರಳಲು ಶೂ ಹಾಕಲು ತೆಗೆದಾಗ ಅದರಲ್ಲಿ ಉರಗ ಪತ್ತೆಯಾಗಿದೆ ತಕ್ಷಣವೇ ಉರಗ ರಕ್ಷಕ ಸ್ನೇಕ್ ಸುರೇಶ್ ಗೆ ಮಾಹಿತಿ ನೀಡಲಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಸುರೇಶ್ ಹಾವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಸುರೇಶ್ ಶಾಲೆ, ಕಛೇರಿ, ಕೆಲಸಕ್ಕೆಂದು ತರಾತುರಿಯಲ್ಲಿ ಶೂ ಹಾಕುವಾಗ ಎಚ್ಚರ ವಹಿಸಬೇಕು ಹಾಗೂ ಹಾವು ಪತ್ತೆಯಾದರೆ ಹೊಡೆದು ಕೊಲ್ಲದೆ ಉರಗ ತಜ್ಞರಿಗೆ ಕರೆಮಾಡುವಂತೆ ಮನವಿ ಮಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ