ವೀರೇಂದ್ರ ಸೆಹ್ವಾಗ್ ಮಾಡಿದ ಒಂದೇ ಒಂದು ತಮಾಷೆ ಇವತ್ತು ವೈರಲ್
ಸೆಹ್ವಾಗ್ ಟ್ವೀಟ್ ಮಾಡಿದ ತಕ್ಷಣ ಅಭಿಮಾನಿಗಳಿಂದ ಫುಲ್ ಟ್ರೋಲ್
ಆದಿಪುರುಷ ಪ್ರಭಾಸ್ ಫ್ಯಾನ್ಸ್ ರಿಯಾಕ್ಷನ್ ಕೂಡ ಸಖತ್ ಇಂಟ್ರೆಸ್ಟಿಂಗ್
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮಾಡಿದ ಒಂದೇ ಒಂದು ತಮಾಷೆಯ ಟ್ವೀಟ್ ಇವತ್ತು ಸಂಚಲನವನ್ನೇ ಸೃಷ್ಟಿಸಿದೆ. ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳಂತೂ ವೀರೂ ಮೇಲೆ ಗದಾಪ್ರಹಾರವನ್ನೇ ನಡೆಸಿದ್ದಾರೆ. ವೀರೇಂದ್ರ ಸೆಹ್ವಾಗ್ ಮಾಡಿದ ಆ ಕಮೆಂಟ್ ಹಾಗೂ ಪ್ರಭಾಸ್ ಫ್ಯಾನ್ಸ್ ಕೊಟ್ಟ ರಿಯಾಕ್ಷನ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ.
ವಿವಾದಗಳಿಂದಲೇ ಸುದ್ದಿಯಾಗಿರೋ ಆದಿಪುರುಷ ಸಿನಿಮಾ ವಿವಾದಗಳಿಂದಲೇ ಸೋಲಿನ ಮುಖವಾಡವನ್ನ ಧರಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ಆದಿಪುರುಷ ಚಿತ್ರದ ಕಲೆಕ್ಷನ್ ಕಡಿಮೆ ಆಗ್ತಿದ್ದಂತೆ ವಿಮರ್ಶೆಗಳು ಭರ್ಜರಿಯಾಗಿವೆ. ಈ ಸದ್ದು, ಗದ್ದಲದ ಮಧ್ಯೆ ಇವತ್ತು ಮಾಜಿ ಸ್ಫೋಟಕ ಬ್ಯಾಟ್ಸ್‌ಮೆನ್ ವೀರೇಂದ್ರ ಸೆಹ್ವಾಗ್ ಆದಿಪುರುಷನ ಬಗ್ಗೆ ಕಿಂಡಲ್ ಮಾಡಿದ್ದು ಪ್ರಭಾಸ್ ಅಭಿಮಾನಿಗಳು ಸಖತ್ ಟ್ರೋಲ್ ಮಾಡಿದ್ದಾರೆ.
ಆದಿಪುರುಷ ಸಿನಿಮಾ ನೋಡಿದ ಮೇಲೆ ಕಟ್ಟಪ್ಪಾ ಬಾಹುಬಲಿಯನ್ನ ಯಾಕೆ ಕೊಲೆ ಮಾಡಿದ ಅನ್ನೋದು ಗೊತ್ತಾಗಿದೆ. ಆದಿಪುರುಷ ಚಿತ್ರದ ಬಗ್ಗೆ ಎಲ್ಲರೂ ಅಭಿಪ್ರಾಯ ಹಂಚಿಕೊಳ್ಳುವಾಗ ವೀರೇಂದ್ರ ಸೆಹ್ವಾಗ್ ಹೀಗಂತಾ ವ್ಯಂಗ್ಯವಾಡಿದ್ದಾರೆ. ಸೆಹ್ವಾಗ್ ಬರೆದಿರುವ ಈ ಕಮೆಂಟ್ ನೋಡಿದ ಪ್ರಭಾಸ್ ಅಭಿಮಾನಿಗಳು ಕೆರಳಿ ಕೆಂಡವಾಗಿದ್ದಾರೆ. ಸೆಹ್ವಾಗ್ ಟ್ವೀಟ್ ತಕ್ಷಣ ಪ್ರಭಾಸ್ ಅಭಿಮಾನಿಗಳು ಸಖತ್ ಟ್ರೋಲ್ ಮಾಡಿದ್ದಾರೆ. ಓಂ ರಾವುತ್ ನಿರ್ದೇಶನದ ಆದಿಪುರುಷ ಚಿತ್ರ ಬಿಡುಗಡೆಯಾದ ನಂತರ ಎಲ್ಲೆಡೆಯಿಂದ ಟ್ರೋಲ್ ಆಗುತ್ತಿದೆ. ಈ ಟ್ರೋಲರ್‌ಗಳ ಪಟ್ಟಿಗೆ ಇವತ್ತು ವೀರೇಂದ್ರ ಸೆಹ್ವಾಗ್ ಕೂಡ ಸೇರಿಕೊಂಡಿದ್ದಾರೆ.
ಸೆಹ್ವಾಗ್ ಟ್ವೀಟ್‌ಗೆ ರಿಪ್ಲೈ ಮಾಡಿರುವ ಪ್ರಭಾಸ್ ಅಭಿಮಾನಿಗಳು, ಈ ಹಿಂದೆ ಧೋನಿ ನಿಮ್ಮನ್ನು ಏಕೆ ತಪ್ಪಿಸಿದ್ದಾರೆಂದು ನನಗೆ ಇಂದು ಅರ್ಥವಾಯಿತು. ಕೆಲವು ಪಂದ್ಯಗಳಲ್ಲಿ ನೀವು ಡಕ್ ಔಟ್ ಆಗಿದ್ದೀರಿ. ಕೆಲವು ಪಂದ್ಯಗಳಲ್ಲಿ ನೀವು ಇತಿಹಾಸವನ್ನು ನಿರ್ಮಿಸಿದ್ದೀರಿ ನಾವು ಕೂಡ ಡಾರ್ಲಿಂಗ್ ಪ್ರಭಾಸ್ ಅವರಿಂದ ಕಮ್ ಬ್ಯಾಕ್ ಆಗುವುದನ್ನ ನೋಡಲು ಕಾಯುತ್ತಿದ್ದೇವೆ. ಒಂದು ದಿನ ಅವರು ಮತ್ತೆ ಎದ್ದು ಬಂದರೆ ಅದು ಇತಿಹಾಸವಾಗುತ್ತದೆ ಎಂದು ಟಾಂಗ್ ಕೊಟ್ಟಿದ್ದಾರೆ. ಆದಿಪುರುಷನನ್ನು ಕೆಣಕಿದ ಸೆಹ್ವಾಗ್ ಹಾಗೂ ಪ್ರಭಾಸ್ ಫ್ಯಾನ್ಸ್‌ಗಳ ಬಡಿದಾಟ ಇಷ್ಟಕ್ಕೆ ನಿಲ್ಲುವ ಲಕ್ಷಣವೂ ಕಾಣುತ್ತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Adipurush dekhkar pata chala Katappa ne Bahubali ko kyun maara tha 😀
— Virender Sehwag (@virendersehwag) June 25, 2023