ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
4 ವರ್ಷದಿಂದ ಸತಾಯಿಸಿದ ಪಾರ್ಲೆ ಆಗ್ರೋ ಕಂಪನಿ
ಮನೆಯವರು ಮಹದೇಶ್ವರ ಬೆಟ್ಟಕ್ಕೆ ಹೋದಾಗ ಮಗ ಆತ್ಮಹತ್ಯೆ
ಮೈಸೂರು: ಯುವಕನೋರ್ವ ಜಮೀನು ಪಡೆದು ಉದ್ಯೋಗ ನೀಡದ ಖಾಸಗಿ ಕಂಪನಿ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಬಳಿ ನಡೆದಿದೆ. ಅದೇ ಊರಿನ ನಿವಾಸಿ ಸಿದ್ದರಾಜು(28) ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕು ನಿಲ್ಲಿಸಿದ್ದಾರೆ
ಯುವಕ ಸಿದ್ದರಾಜು ಪಾರ್ಲೆ ಆಗ್ರೋ ಕಂಪನಿ ವಿರುದ್ಧ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣದ ಹಿನ್ನೆಲೆ ಕಂಪನಿ ಶಾಖೆ ಮುಖ್ಯಸ್ಥ ರಾಮಪ್ರಸಾದ್, ಎಚ್‌ಆರ್ ಮುಷೀದ್ ಉಲ್ಲಾಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಿದ್ದರಾಜು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಐಎಡಿಬಿ ಕಚೇರಿಯು ಸಿದ್ದರಾಜು ತಂದೆ ಸಿದ್ದೇಗೌಡ ಅವರ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ಜಾಗದಲ್ಲಿ ಪಾರ್ಲೆ ಆಗ್ರೋ ಕಂಪನಿ ನಿರ್ಮಾಣ ಮಾಡಿತ್ತು. ಮಾತ್ರವಲ್ಲದೆ, ಸಿದ್ದರಾಜುಗೆ ಕೆಲಸ ಕೊಡುವ ಭರವಸೆ ನೀಡಿತ್ತು.
ಇದನ್ನು ಓದಿ: ಲಾಂಗ್, ಮಚ್ಚು ಹಿಡಿದು ರೀಲ್ಸ್ ಮಾಡಿದ್ರೆ ಹುಷಾರ್.. ಇಬ್ಬರನ್ನು ಅರೆಸ್ಟ್ ಮಾಡಿದ ವೇಮಗಲ್ ಪೊಲೀಸರು
ಆದರೆ ನಾಲ್ಕು ವರ್ಷದಿಂದ ಸಿದ್ದರಾಜುಗೆ ಕೆಲಸ ನೀಡಲು ನಿರಾಕರಣೆ ಮಾಡಿದೆ. ಅತ್ತ ಕೆಲಸದ ವಿಚಾರವಾಗಿ ಕಂಪನಿ, ಕೆಐಎಡಿಬಿ ಕಚೇರಿ ಅಲೆದು ಸಿದ್ದರಾಜು ಹೈರಾಣಾಗಿದ್ದ. ಮನೆಯವರು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ವೇಳೆ ನೇಣಿಗೆ ಶರಣಾಗಿದ್ದಾನೆ.
ಡೆತ್ನೋಟ್ನಲ್ಲಿ ರೈತರ ಮಕ್ಕಳ ಸಾವಿಗೆ ಕಾರಣವಾದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾನೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ