newsfirstkannada.com

ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸೋದಾಗಿ ವಂಚನೆ ಆರೋಪ; ಮಹಿಳೆ ಸೇರಿ ಇಬ್ಬರ ಮೇಲೆ ದೂರು ದಾಖಲು

Share :

30-08-2023

    ಕೆಲಸ ಕೊಡಿಸೋ ನೆಪದಲ್ಲಿ ಲಕ್ಷ, ಲಕ್ಷ ವಂಚಿಸಿದ ಆರೋಪ

    ಮೋಸ ಮಾಡಿ ಮೊಬೈಲ್‌ ಸ್ವೀಚ್ ಆಫ್ ಮಾಡಿಕೊಂಡ ಮಹಿಳೆ

    ರೇಪ್ ಕೇಸ್ ಹಾಕಿ ಒಳಗೆ ಕಳುಹಿಸಿಬಿಡುತ್ತೇನೆಂದು ಬೆದರಿಕೆ

ಶಿವಮೊಗ್ಗ: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ಶ್ವೇತಾ ಎಂಬ ಮಹಿಳೆ ಸೇರಿದಂತೆ ಇಬ್ಬರ ಮೇಲೆ ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ. ನಮಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನಮ್ಮನ್ನು ನಂಬಿಸಿ ನಮ್ಮಿಂದ ಹಣವನ್ನು ಪಡೆದುಕೊಂಡು ಮೋಸ ಮಾಡಿದ್ದಾರೆ. ನಾವು ಹಣ ಕೇಳಲು ಹೋದಾಗ ಬೆದರಿಕೆ ಹಾಕಿದ್ದಾರೆ. ಅವರುಗಳ ಮೇಲೆ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ದೊರಕಿಸಿ ಕೊಡುವಂತೆ ಅರ್ಜುನ್ ಎಂಬುವವರು ರಿಪ್ಪನ್‌ಪೇಟೆ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಐಪಿಸಿ ಸೆಕ್ಷನ್ 406, 420, 506ರ ಅಡಿಯಲ್ಲಿ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ವಂಚನೆ ಆರೋಪ?
ತೀರ್ಥಹಳ್ಳಿ ತಾಲ್ಲೂಕಿನ ಸೀಬಿನಕೆರೆ ಇಂದಿರಾನಗರ ನಿವಾಸಿ ಅರ್ಜುನ್ ಅವರ ಪತ್ನಿ ಚೈತ್ರಾ ಎನ್.ಆರ್ ರವರಿಗೆ ರಿಪ್ಪನ್‌ಪೇಟೆ ನಿವಾಸಿ ಶ್ವೇತಾ ಕೋಂ ರಿಶಾಂತ್ ರವರು ವಂಚಿಸಿದ್ದಾರೆ ಎಂದು ದೂರಲಾಗಿದೆ. ಚೈತ್ರಾ ಅವರಿಗೆ ಡಿಗ್ರಿ ವಿದ್ಯಾರ್ಹತೆಯ ಮೇರೆಗೆ ಶ್ವೇತಾ ಅವರು ರೈಲ್ವೆ ಇಲಾಖೆಯಲ್ಲಿ ಹೆಚ್‌ಆರ್ ಉದ್ಯೋಗವನ್ನು ಕೊಡಿಸುವುದಾಗಿ ನಂಬಿಸಿ 2022 ರ ಜುಲೈ 22 ರಂದು 19,600 ರೂಪಾಯಿ ಅನ್ನು ಶ್ವೇತಾ ಅವರ ನಂಬರ್‌ಗೆ ಹಣವನ್ನು ಫೋನ್ ಪೇ ಮುಖಾಂತರ ಹಾಕಿಸಿಕೊಂಡಿದ್ದಾರೆ. ಆ ನಂತರ ನಾನು ಡಿಡಿ ಹಾಕಿದ್ದೇನೆ ಬಂದ ನಂತರ ರಶೀದಿ ಕಳುಹಿಸುತ್ತೇನೆ ಅಂತಾ ಹೇಳಿದ್ದಾರೆ.

2022 ರ ಆ. 05 ರಂದು ನಿಮಗೆ ಉದ್ಯೋಗ ಸಿಕ್ಕಿದೆ 1.5 ಲಕ್ಷ ರೂ ಹಣ ಹಾಕಬೇಕು ಎಂದು ನಂಬಿಸಿ ರೂ. 50 ಸಾವಿರ ಹಣ ಮತ್ತು 2022 ಆ. 06 ರಂದು 1 ಲಕ್ಷ ಹಣವನ್ನು ಅದೇ ನಂಬರಿಗೆ ಫೋನ್ ಪೇ ಮುಖಾಂತರ ಹಾಕಿಸಿಕೊಂಡಿದ್ದಾರೆ. ನಿಮ್ಮದು ಮೆಡಿಕಲ್, ಪೊಲೀಸ್ ವೆರಿಫಿಕೇಷನ್‌ ಆಗಿದೆ ನಾವು ಹಣಕೊಟ್ಟು ಮಾಡಿಸಿರುತ್ತೇವೆ. ನವೆಂಬರ್ 6 ರಂದು ಬೆಂಗಳೂರಿನ ರೈಲ್ವೆ ಕಚೇರಿಯಲ್ಲಿ ಸಹಿ ಮಾಡಲಿಕ್ಕಿದೆ ಎಂದು ಹೇಳಿ ರೈಲ್ವೆ ಟಿಕೆಟ್ ಅವರೆ ಬುಕ್ ಮಾಡಿ ಹೇಳಿದ್ದು, ನಂತರ ಮತ್ತು ಅವರ ಹೆಂಡತಿ ಚೈತ್ರಾ ಬೆಂಗಳೂರಿಗೆ ಹೋದಾಗ ಶ್ವೇತಾ ಅಲ್ಲಿ ರೈಲ್ವೆ ಕಚೇರಿಯ ಹತ್ತಿರ ಕರೆದುಕೊಂಡು ಹೋಗಿದ್ದಾರೆ. ನಮ್ಮನ್ನು ಹೊರಗೆ ಕೂರಿಸಿ ಯಾರೋ ಆಫಿಸರ್ ಬಂದಿಲ್ಲ ಎಂದು ಹೇಳಿ ಯಾವುದೋ ಪೇಪರ್‌ಗೆ ಸಹಿ ಮಾಡಿಸಿಕೊಂಡು ನಾಳೆ ನಾನೇ ಮಿಟ್ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಅರ್ಜುನ್ ದೂರಿನಲ್ಲಿ ತಿಳಿಸಿದ್ದಾರೆ.

ಇದಾದ ನಂತರ ವಿಜಯಪುರದ ಪ್ರಶಾಂತ್ ದೇಶಪಾಂಡೆ ಎಂಬುವವರನ್ನು ಪರಿಚಯಿಸಿ ಇವರೇ ಕೆಲಸ ಕೊಡಿಸುವವರು ಎಂದು ಶ್ವೇತಾ ಅವರು ಹೇಳಿದ್ದಾರಂತೆ. ಪ್ರಶಾಂತ್‌ ದೇಶಪಾಂಡೆರವರೇ ನಿಮಗೆ ಕೆಲಸ ಕೊಡಿಸುವವರು ಅವರೊಂದಿಗೆ ಇನ್ನು ಮುಂದೆ ಮಾತನಾಡಿಕೊಳ್ಳಿ ಎಂದು ಅವರ ಫೋನ್ ನಂಬರ್‌ಗಳನ್ನು ಕೊಟ್ಟಿದ್ದಾರೆ. ನಂತರ ಅರ್ಜುನ್ ಅವರೊಂದಿಗೆ ಮಾತನಾಡುತ್ತಿದ್ದ ಇವರು 2023 ರ ಜ. 18 ರಂದು ಪ್ರಶಾಂತ್‌ ದೇಶಪಾಂಡೆರವರು ಫೋನ್ ಮಾಡಿ ನಿಮ್ಮ ಹೆಂಡತಿಗೆ ಮಾತ್ರ ಜಾಬ್ ಆಗಿದೆ ಬೆಂಗಳೂರಿಗೆ ಬನ್ನಿ ಎಂದು ಹೇಳಿದಾಗ ಅರ್ಜುನ್ ರವರು ತನ್ನ ಸ್ನೇಹಿತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ನಿಲುವಾಗಿಲು ಗ್ರಾಮದ ಆದರ್ಶವನ್ನು ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ‘ನಾನು ಇಸ್ರೋ ವಿಜ್ಞಾನಿ, ಲ್ಯಾಂಡರ್ ವಿನ್ಯಾಸ ಮಾಡಿದ್ದು ನಾನೇ’ ಎಂದು ಸಂದರ್ಶನ ಕೊಡ್ತಿದ್ದ ಕಿಲಾಡಿ ಲಾಕ್..!

ಬೆಂಗಳೂರಿಂದ ಹುಬ್ಬಳ್ಳಿಯಲ್ಲಿ ಕೆಲಸ ಕೊಡಿಸುವ ಭರವಸೆ 

ಅಲ್ಲಿ ಪ್ರಶಾಂತ್ ದೇಶಪಾಂಡೆ ಅವರಿಂದ ಆದರ್ಶನ ಪರಿಚಯ ಮಾಡಿಕೊಂಡು ಹುಬ್ಬಳ್ಳಿಯಲ್ಲಿ ರೈಲ್ವೆ ಕೆಲಸ ನಡೀತಿದೆ ನಿನಗೆ ಟೆಂಡರ್ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಅವನಿಂದ 2023 ರ ಮಾ.1ರಂದು ಮಧ್ಯಾಹ್ನ 3-30 ಗಂಟೆಯ ಸಮಯದಲ್ಲಿ ಬೆಂಗಳೂರಿನ ಗಾಂಧಿನಗರದ ಚಿಕನ್ ಕೌಂಟಿ ಹೊಟೇಲ್‌ನಲ್ಲಿ 5 ಲಕ್ಷ ರೂಪಾಯಿ ನಗದು ಹಣವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಆಗಾಗ ಆದರ್ಶನ ನಂಬರಿನಿಂದ ಪ್ರಶಾಂತ ದೇಶಪಾಂಡೆಯ ನಂಬರಿಗೆ ಫೋನ್ ಪೇ ಮುಖಾಂತರ 1,26,650 ರೂ. ಹಣ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ ಮಲವಗೊಪ್ಪದ ಬಿ.ವಿ.ನವೀನ್ ಕುಮಾರ್‌ಗೆ ಶ್ವೇತಾರವರು ಪರಿಚಯ ಮಾಡಿಕೊಂಡು ಅವರ ಪತ್ನಿ ಅಶ್ವಿನಿಗೆ ರೈಲ್ವೆ ಇಲಾಖೆಯಲ್ಲಿ ಡಿ ದರ್ಜೆ ನೌಕರಿ ಕೊಡಿಸುವುದಾಗಿ 3,42,500 ರೂ. ಹಣವನ್ನು ಶ್ವೇತಾ ರವರು ಫೋನ್ ಫೇ ಹಾಗೂ ನೆಫ್ಟ್ ಮೂಲಕ ಹಾಕಿಸಿಕೊಂಡಿರುವುದಾಗಿ ನವೀನ್ ಅರ್ಜುನ್‌ಗೆ ಆರೋಪಿಸಿದ್ದಾರೆ. ಅರ್ಜುನ್ ರಿಂದ ಒಟ್ಟು 4.02 ಲಕ್ಷ ರೂ. ಹಣವನ್ನು ಆದರ್ಶನಿಂದ 6.50 ಲಕ್ಷ ರೂ. ಹಣವನ್ನು ನವೀನ್ ರವರಿಂದ 3,42,500 ರೂ. ಹಣವನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಪಡೆದುಕೊಂಡು ಶ್ವೇತಾ ಮತ್ತು ಪ್ರಶಾಂತ ದೇಶಪಾಂಡೆ ಯಾವ ಕೆಲಸವನ್ನು ಕೊಡಿಸದೇ ಸಬೂಬುಗಳನ್ನು ಹೇಳುತ್ತಾ ಒಂದು ಈಗ ಮೊಬೈಲ್‌ಗಳನ್ನು ಸ್ವೀಚ್ ಆಫ್ ಮಾಡಿಕೊಂಡಿದ್ದಾರಂತೆ. ದೂರುದಾರ ಅರ್ಜುನ್, ಆದರ್ಶ ಮತ್ತು ನವೀನ್‌ ಆ.22 ರಂದು ಬೆಳಗ್ಗೆ 10-00 ಗಂಟೆಗೆ ಹಣವನ್ನು ಕೇಳಲು ರಿಪ್ಪನ್‌ಪೇಟೆಯ ಶ್ವೇತಾ ರವರ ಶಾಪ್‌ಗೆ ಬಂದಾಗ ನಿಮ್ಮ ಮೇಲೆ ರೇಪ್ ಕೇಸ್ ಹಾಕಿ ಒಳಗೆ ಕಳುಹಿಸಿಬಿಡುತ್ತೇನೆಂದು ಬೆದರಿಕೆ ಹಾಕಿದ್ದಾರೆ ಎಂದು ಅರ್ಜುನ್ ದೂರಿನಲ್ಲಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸೋದಾಗಿ ವಂಚನೆ ಆರೋಪ; ಮಹಿಳೆ ಸೇರಿ ಇಬ್ಬರ ಮೇಲೆ ದೂರು ದಾಖಲು

https://newsfirstlive.com/wp-content/uploads/2023/08/Shivamogga-Arrest.jpg

Load More