newsfirstkannada.com

ದಿನಕ್ಕೆ 500 ಕರೆಗಳು.. ಪ್ರಥಮ್‌ಗೆ ದರ್ಶನ್‌ ಅಭಿಮಾನಿಗಳಿಂದ ಜೀವ ಬೆದರಿಕೆ; ಪೊಲೀಸರಿಗೆ ಕಂಪ್ಲೇಂಟ್!

Share :

Published June 19, 2024 at 1:52pm

Update June 19, 2024 at 2:07pm

    ದರ್ಶನ್ ಬಂಧನದ ಬಗ್ಗೆ ಮಾತನಾಡಿದ್ದ ನಟ ಪ್ರಥಮ್‌ಗೆ ಬೆದರಿಕೆ

    ಜ್ಞಾನಭಾರತಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು

    ಇನ್ಮೇಲೆ ನನಗೆ ಬೆದರಿಕೆ ಕರೆಗಳು, ಮೆಸೇಜ್‌ಗಳು ಬಂದ್ರೆ ಎಚ್ಚರ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್ ಪೊಲೀಸರ ಕಸ್ಟಡಿಯಲ್ಲಿದೆ. ನಟ ದರ್ಶನ್ ವಿರುದ್ಧ ಕೊಲೆ ಆರೋಪ ಕೇಳಿ ಬಂದ ಮೇಲೆ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಪ್ರತಿಕ್ರಿಯೆ ನೀಡಿದ್ದರು. ಈ ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹಲವು ನಟರು, ಈ ಕೇಸ್‌ನಲ್ಲಿ ನ್ಯಾಯ ಸಿಗಬೇಕು ಅನ್ನೋ ಮನವಿ ಮಾಡಿದ್ದಾರೆ.

ದರ್ಶನ್ ಅವರ ಬಂಧನದ ಬಗ್ಗೆ ಮಾತನಾಡಿದ್ದಕ್ಕೆ ನಟ ಪ್ರಥಮ್‌ಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಲಾಗಿದೆ. ಪ್ರಥಮ್ ಅವರು ಜ್ಞಾನಭಾರತಿ ನಗರ ಪೊಲೀಸ್ ಠಾಣೆಗೆ ತೆರಳಿ ತಮಗೆ ಎದುರಾಗಿರುವ ಜೀವ ಬೆದರಿಕೆಯ ಬಗ್ಗೆ ಕಂಪ್ಲೇಂಟ್ ಕೊಟ್ಟು ಬಂದಿದ್ದಾರೆ. ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ನನಗೆ ದಿನಕ್ಕೆ 500 ಕರೆಗಳು ನಿರಂತರವಾಗಿ ಬರುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ದರ್ಶನ್ ಮಾತ್ರವಲ್ಲ.. ಅಭಿಮಾನಿಗಳಿಗೂ ಇದೆ ಹಬ್ಬ.. ಬಾಲ ಕಟ್ ಮಾಡಲು ಲಿಸ್ಟ್ ರೆಡಿ..! 

ಇತ್ತೀಚೆಗೆ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾದ ವಿಚಾರಕ್ಕೆ ನಟ ಪ್ರಥಮ್ ಅವರು ಮಾತನಾಡಿದ್ದರು. ಕೆಲ ಅಂದಾಭಿಮಾನಿಗಳ ವಿರುದ್ಧ ಕಿಡಿ ಕಾರಿದ್ದ ಪ್ರಥಮ್ ಅವರ ಮೇಲೆ ಈಗ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಹಲವರು, ಸೋಷಿಯಲ್ ಮೀಡಿಯಾದಲ್ಲೂ ಪೋಸ್ಟ್‌ಗಳನ್ನು ಹಾಕಿದ್ದಾರೆ. ಈ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಪ್ರಥಮ್ ಅವರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ. ದೂರು ಸ್ವೀಕರಿಸಿರುವ ಪ್ರಥಮ್ ಅವರಿಗೆ ಪೊಲೀಸರು ರಕ್ಷಣೆ ಕೊಡುವ ಭರವಸೆ ಕೊಟ್ಟಿದ್ದಾರೆ.

ಅಂಧಾಭಿಮಾನಕ್ಕೆ ಪ್ರಥಮ್ ಹೇಳಿದ್ದೇನು?
ನಟ ದರ್ಶನ್ ಅವರ ಬಂಧನದ ಬಗ್ಗೆ ಮಾತನಾಡಿದ್ದ ಪ್ರಥಮ್ ಅವರು ಜೀವನ ದೊಡ್ಡದು. ಯಾರಿಗೋಸ್ಕರವೋ ಹಾಳು ಮಾಡಿಕೊಳ್ಳಬೇಡಿ. ನಾನು ಶಾಂತಿಯಿಂದಲೇ ಇದ್ದೆ. ನೀವು ಅತಿಯಾಗಿ ನಮ್ಮ ಕರ್ನಾಟಕದ ಅಳಿಯ ತಂಡದ ಆಫೀಸ್ ನಂಬರ್‌ಗೆ ಬೆದರಿಕೆ ಹಾಕುತಿದ್ದೀರಾ. ಇನ್ಮೇಲೆ ನನಗೆ ಬರೋ ಕರೆ, ಮೆಸೇಜ್, ಸೋಷಿಯಲ್ ಮೀಡಿಯಾ ಎಚ್ಚರಿಕೆ ಎಲ್ಲವನ್ನು ಪೊಲೀಸರು ನೋಡಿಕೊಳ್ತಾರೆ. ಬದುಕು ಸುಂದರವಾದದ್ದು, ಅಂಧಾಭಿಮಾನಿಗಳೇ, ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ ಎಂದು ಪ್ರಥಮ್ ಕಿವಿಮಾತು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಿನಕ್ಕೆ 500 ಕರೆಗಳು.. ಪ್ರಥಮ್‌ಗೆ ದರ್ಶನ್‌ ಅಭಿಮಾನಿಗಳಿಂದ ಜೀವ ಬೆದರಿಕೆ; ಪೊಲೀಸರಿಗೆ ಕಂಪ್ಲೇಂಟ್!

https://newsfirstlive.com/wp-content/uploads/2024/06/Pratham-On-Darshan-Case.jpg

Load More