ಇದು ರಿಯಲ್ ಜೂಟ್ ಬೋಲೆ ಕವಾ ಕಾಟೆ ಅಂತೆ!
ಪರಿಣಿತಿ ಚೋಪ್ರಾ ಭಾವಿ ಪತಿಯ ಮೇಲೆ ಕಾಗೆ ಕಣ್ಣು
ಸುಳ್ಳು ಹೇಳುವವರಿಗೆ ಕಾಗೆ ಬಂದು ಕಚ್ಚು ಬಿಡುತ್ತಾ..?
ನವದೆಹಲಿ: ಜೂಟ್ ಬೋಲೆ ಕವಾ ಕಾಟೆ.. ಮಕ್ಕಳಿಗೆ ಹೇಳುವ ಈ ಕಥೆಯನ್ನ ಬಹಳಷ್ಟು ಜನ ಕೇಳಿರ್ತಾರೆ. ಸುಳ್ಳು ಹೇಳಿದ್ರೆ ಕಾಗೆ ಬಂದು ಕಚ್ಚು ಬಿಡುತ್ತಪ್ಪಾ ಅಂತಾ ಕಥೆ ಕಟ್ಟುತ್ತಾರೆ. ಆದ್ರೆ, ಈ ಕಥೆ ನಿಜವಾಗಿ ನಡೆದಿರೋದನ್ನ ಕಂಡವರು ಯಾರು ಇಲ್ಲ. ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರ ಒಂದು ಫೋಟೋ ಇವತ್ತು ವೈರಲ್ ಆಗಿದ್ದು, ಬಿಜೆಪಿ ನಾಯಕರು ಸಖತ್ ಟಾಂಗ್ ಕೊಟ್ಟಿದ್ದಾರೆ.
ಆಪ್ ಪಕ್ಷದ ಯುವ ಸಂಸದ, ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರ ಪ್ರೀತಿಯ ಹುಡುಗ ಯಾರಿಗೆ ಗೊತ್ತಿಲ್ಲ ಹೇಳಿ. ಇತ್ತೀಚೆಗೆ ಪರಿಣಿತಿ ಚೋಪ್ರಾ ಜೊತೆ ಎಂಗೇಜ್ ಆದ ರಾಘವ್ ಚಡ್ಡಾ ಸಾಕಷ್ಟು ಸುದ್ದಿಯಾಗಿದ್ರು. ನಿನ್ನೆ ಸಂಸತ್ ಭವನದ ಮುಂದೆ ಫೋನ್‌ನಲ್ಲಿ ಮಾತನಾಡುತ್ತಿದ್ದ ರಾಘವ್ ಚಡ್ಡಾ ಅವರಿಗೆ ಕಾಗೆಯೊಂದು ಹಾರಿಕೊಂಡು ಬಂದು ಕುಕ್ಕಲು ಯತ್ನಿಸಿದೆ. ರಾಘವ್ ಚಡ್ಡಾ ಕಾಗೆಯಿಂದ ತಪ್ಪಿಸಿಕೊಂಡಿರೋ ಫೋಟೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ: ‘ನಾನು ಬೆಳ್ಳುಳ್ಳಿ, ಮೊಟ್ಟೆ ತಿನ್ನಲ್ಲ..’ ಬರೀ ಇಷ್ಟಕ್ಕೇ ಟ್ರೋಲ್ ಆದ್ರು ಸುಧಾ ಮೂರ್ತಿ!
ರಾಘವ್ ಚಡ್ಡಾ ಅವರ ಈ ಫೋಟೋವನ್ನು ಟ್ವೀಟ್ ಮಾಡಿರುವ ಬಿಜೆಪಿ ನಾಯಕರು ಕಾಲೆಳೆದಿದ್ದಾರೆ. ಜೂಟ್ ಬೋಲೋ ಕವ್ವಾ ಕಾತೆ ಹಾಡನ್ನು ನಾವು ಕೇಳಿದ್ದೆವು. ಆದರೆ ಪ್ರತ್ಯಕ್ಷವಾಗಿ ನೋಡಿರಲಿಲ್ಲ. ಸುಳ್ಳು ಹೇಳಿದವರಿಗೆ ಕಾಗೆ ಕುಕ್ಕುತ್ತೆ ಎಂದು ರಾಘವ್ ಚಡ್ಡಾ ಅವರನ್ನು ಗೇಲಿ ಮಾಡಿದ್ದಾರೆ. ಬಿಜೆಪಿ ಮಾಡಿರುವ ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದ್ದು, ಸಾವಿರಾರು ಜನ ರೀ ಟ್ವೀಟ್ ಮಾಡುತ್ತಾ ವೈರಲ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
झूठ बोले कौवा काटे 👇
आज तक सिर्फ सुना था, आज देख भी लिया कौवे ने झूठे को काटा ! pic.twitter.com/W5pPc3Ouab
— BJP Delhi (@BJP4Delhi) July 26, 2023