newsfirstkannada.com

×

ಅಕ್ಕನ ಮಗಳ ಫೋಟೋ ಮಿಸ್​ಯೂಸ್​​.. ಲೋನ್​ ಆ್ಯಪ್​ ಕಿರುಕುಳಕ್ಕೆ ನೇಣು ಹಾಕಿಕೊಂಡ ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ

Share :

Published September 1, 2023 at 12:07pm

Update September 1, 2023 at 12:10pm

    ಲೋನ್​ ಆ್ಯಪ್​ ಕಿರುಕುಳಕ್ಕೆ ಸಾವನ್ನಪ್ಪಿದ ಕಬಡ್ಡಿ ಆಟಗಾರ

    ‘ಬೇಬಿ ಫಾರ್​ ಸೇಲ್’​ ಎಂದು ಕಿರುಕುಳ ನೀಡಿದ್ದ ಲೋನ್​ ಆ್ಯಪ್​

    ಬೆಚ್ಚಿ ಬೀಳಿಸಿದೆ ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರನ ಆತ್ಮಹತ್ಯೆ ಪ್ರಕರಣ

ಮಂಗಳೂರು: ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಪುದುವೆಟ್ಟುವಿನಲ್ಲಿ ನಡೆದಿದೆ. ಸ್ವರಾಜ್(24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಸ್ವರಾಜ್ ನಿನ್ನೆ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಲೋನ್ ಆ್ಯಪ್​ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಲೋನ್ ಆ್ಯಪ್ ನಿಂದ ‘Baby for sale’ ಅಂತಾ ಕಿರುಕುಳ ಬೇಸತ್ತು ನೇಣು ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.

‘ಬೇಬಿ ಫಾರ್​ ಸೇಲ್​’

ಸ್ವರಾಜ್​ ವಾಟ್ಸ್​ಆ್ಯಪ್​ನಲ್ಲಿ ಅಕ್ಕನ ಮಗಳ ಫೋಟೊ ಹಾಕಿದ್ದ. ಈ ಫೋಟೋವನ್ನು ಲೋನ್ ಆ್ಯಪ್​ ಖದೀಮರು ‘Baby for sale’ ಅಂತಾ ಎಡಿಟ್ ಮಾಡಿ ಆತನ ಸ್ನೇಹಿತರು ಮತ್ತು ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಹಂಚಿಕೊಂಡಿದ್ದಾರೆ. ಆದರೆ ಅದಕ್ಕೂ ಮುನ್ನ ಲೋನ್​ ಆ್ಯಪ್​ನವರ ಬ್ಲಾಕ್ ಮೇಲ್ ತಡೆಯಲಾಗದೇ ಆ.30 ರಂದು 30 ಸಾವಿರ ಹಣ ಕಟ್ಟಿದ್ದನು. ಆ.31 ರಂದು ಮಧ್ಯಾನ್ನ  2 ಗಂಟೆಗೆ ಡೆಡ್ ಲೈನ್ ನೀಡಿದ್ದ ಆ್ಯಪ್
ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ಕನ ಮಗಳ ಫೋಟೋ ಮಿಸ್​ಯೂಸ್​​.. ಲೋನ್​ ಆ್ಯಪ್​ ಕಿರುಕುಳಕ್ಕೆ ನೇಣು ಹಾಕಿಕೊಂಡ ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ

https://newsfirstlive.com/wp-content/uploads/2023/09/Swaraj-Suicide.jpg

Load More