newsfirstkannada.com

ರಾಜ್ಯ ರಾಜಧಾನಿಯಲ್ಲೊಂದು ನಡೀತು ಮನಕಲಕುವ ಘಟನೆ; ಪತ್ನಿ, ಮಕ್ಕಳನ್ನ ಕೊಂದು ವ್ಯಕ್ತಿ ಆತ್ಮಹತ್ಯೆಗೆ ಶರಣು

Share :

03-08-2023

    ರಾಜ್ಯ ರಾಜಧಾನಿಯಲ್ಲೊಂದು ಮನಕಲಕುವ ಘಟನೆ

    ಕಿಟಕಿಯಲ್ಲಿ ಇಣುಕಿ ನೋಡಿದಾಗ ಆಗಿತ್ತು ಶಾಕ್​

    ಸಹೋದರನಿಂದ ಬಯಲಾಯ್ತು ಸಾವಿನ ವಿಷಯ

ಬೆಂಗಳೂರು: 6 ವರ್ಷದ ದಾಂಪತ್ಯ ಜೀವನದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದ್ರೆ, ಈಗ ಆ ಸಂಸಾರದಲ್ಲೀಗ ನೀರವ ಮೌನ. ಬಾಗಿಲು ಹಾಕಿದ್ದ ಮನೆಯಲ್ಲಿ ಸಿಕ್ಕಿದ್ದು, ನಾಲ್ವರ ಮೃತದೇಹ. ಪುಟ್ಟ ಮಕ್ಕಳು ಕೂಡ ಇಲ್ಲಿ ಮುಚ್ಚಿದ ಕಣ್ಣನ್ನ ಬಿಟ್ಟಿಲ್ಲ. ನಗುಮುಖದ ದಂಪತಿ, 6 ವರ್ಷದ ಸುಖ ದಾಂಪತ್ಯ, ಇಬ್ಬರು ಮುದ್ದಾದ ಹೆಣ್ಣುಮಕ್ಕಳು, ಕೈ ತುಂಬಾ ಸಂಬಳ ಕೊಡುವ ಉದ್ಯೋಗ. ಇನ್ನೇನು​ ಬೇಕು ಒಂದೊಳ್ಳೆ ಜೀವನಕ್ಕೆ. ಆದರೆ ಇದೀಗ ಮೋಡದ ಕಪ್ಪು ಬಿಳುಪಿನ ಹೊನಲಲ್ಲಿ ಮನೆಮಂದಿಯೆಲ್ಲಾ ಉಸಿರು ಚೆಲ್ಲಿ ಮಲಗಿದ್ದಾರೆ.

ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ?

ಬೆಂಗಳೂರಿನ ಕಾಡುಗೋಡಿ ಸಮೀಪದ ಸಾಯಿ ಗಾರ್ಡನ್​ನಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರೋ ಘಟನೆ ಬೆಳಕಿಗೆ ಬಂದಿದೆ. 31 ವರ್ಷದ ಪತಿ ವೀರಾರ್ಜುನ ವಿಜಯ್​, 29 ವರ್ಷದ ಪತ್ನಿ ಹೇಮಾವತಿ, ಎರಡುವರೆ ವರ್ಷದ ಮೋಕ್ಷ ಹಾಗೂ ನಾಲ್ಕು ವರ್ಷದ ಸೃಷ್ಟಿ ಬಾರದ ಲೋಕಕ್ಕೆ ತೆರಳಿದ್ದಾರೆ. ಮೇಲುನೋಟಕ್ಕೆ ಮನೆ ಯಜಮಾನ ವೀರಾರ್ಜುನ ವಿಜಯ್ ಹೆಂಡತಿ ಮಕ್ಕಳನ್ನ ಕೊಂದು ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ವೀರಾರ್ಜುನ ವಿಜಯ್ ಐಟಿಪಿಎಲ್​​ನಲ್ಲಿರುವ ಯೂರೋ ಪಿಲ್ಸ್​​ ಎಂಬಲ್ಲಿ ಕೆಲಸ ಮಾಡುತ್ತಿದ್ರು. ಪತ್ನಿ ಹೇಮಾವತಿ ಹೌಸ್​​ ವೈಫ್​​. ಆಂಧ್ರ ಮೂಲದವರಾದ ಇವ್ರು ಸದ್ಯ ಬೆಂಗಳೂರಿನಲ್ಲಿಯೇ ವಾಸವಿದ್ರು.

ಸಹೋದರನಿಂದ ಬಯಲಾಯ್ತು ನಾಲ್ವರ ಸಾವು

ಮೃತ ಹೇಮಾವತಿ ಸಹೋದರ ಪ್ರತಿ‌ ದಿನ ಕರೆ ಮಾಡಿ ಸಹೋದರಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಅದೇ ರೀತಿ ಕಳೆದ ತಿಂಗಳು 31 ರಿಂದ ಸಹೋದರಿಗೆ ಕರೆ ಮಾಡುತ್ತಲ್ಲೇ ಬಂದಿದ್ದಾರೆ. ಆದ್ರೆ ಹೇಮಾವತಿಯಿಂದ ನೋ ರಿಪ್ಲೈ. ನಿನ್ನೆ ಪೋನ್​ ಸ್ವಿಚ್ ಆಫ್​ ಆಗಿದೆ. ಈ ಹಿನ್ನೆಲೆ ಆಂಧ್ರದಿಂದ ಸಹೋದರಿ ಮನೆಗೆ ಬಂದಿದ್ದಾರೆ. ಈ ವೇಳೆ ಎಷ್ಟೇ‌ ಬಾಗಿಲು ಬಡಿದರು ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ, ಅಕ್ಕ ಪಕ್ಕದವರನ್ನ ವಿಚಾರಿಸಿ ಸೆಕ್ಯೂರಿಟಿಯನ್ನು ಹೇಮಾವತಿ ಸಹೋದರ ವಿಚಾರಿಸಿದ್ದಾರೆ. ಈ ವೇಳೆ ಕಳೆದ 31 ರಿಂದ ಎಲ್ಲೂ ಕಾಣಿಸಲಿಲ್ಲ ಹಾಗೂ ಹೊರಗೆ ಹೋಗುದಾಗಿಯೂ ತಿಳಿಸಿಲ್ಲ ಎಂದು ಸೆಕ್ಯುರಿಟಿ ಮಾಹಿತಿ ನೀಡಿದ್ದಾರೆ. ಕೂಡಲೇ ಮನೆ ಬಳಿ ಬಂದು ಕಿಟಕಿಯಲ್ಲಿ ಇಣುಕಿ ನೋಡಿದಾಗ ಮೃತ ದೇಹಗಳು ಪತ್ತೆಯಾಗಿವೆ. ಹೇಮಾವತಿ ಸಹೋದರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಕಾಡುಗೋಡಿ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಎಫ್​ಎಸ್​​ಎಲ್​ ತಂಡ ಕೂಡ ಸ್ಥಳಕ್ಕೆ ದೌಡಾಯಿಸಿದ್ದು ನಾಲ್ವರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನೂ ಇಡೀ ಕುಟುಂಬವೇ ಹೀಗೆ ಸಾವನ್ನಪ್ಪಲು ಕಾರಣವೇನು ಅಂತ ತಿಳಿದುಬಂದಿಲ್ಲ. ಆರು ವರ್ಷದ ಸುಖ ಸಂಸಾರವನ್ನ. ಹೀಗೆ ತಮ್ಮ ಕೈಯಾರೆ ತಾವೇ ಅಂತ್ಯಗೊಳಿಸಿದ್ದು, ದುಡುಕಿನ ನಿರ್ಧಾರ. ಬೆಟ್ಟದಂತಹ ಸಮಸ್ಯೆಗೂ ಪರಿಹಾರ ಸಿಕ್ಕೆ ಸಿಗುತ್ತೆ, ದುಡುಕಿನ ನಿರ್ಧಾರ ಎಲ್ಲವನ್ನೂ ಅಳಿಸಿ ಹಾಕುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯ ರಾಜಧಾನಿಯಲ್ಲೊಂದು ನಡೀತು ಮನಕಲಕುವ ಘಟನೆ; ಪತ್ನಿ, ಮಕ್ಕಳನ್ನ ಕೊಂದು ವ್ಯಕ್ತಿ ಆತ್ಮಹತ್ಯೆಗೆ ಶರಣು

https://newsfirstlive.com/wp-content/uploads/2023/08/samantha-1.jpg

Load More