newsfirstkannada.com

VIDEO: ಚಲಿಸುವಾಗ ಹೊತ್ತಿ ಉರಿದ ಡಬಲ್ ಡೆಕ್ಕರ್‌ AC ಬಸ್‌.. ಕಿಟಕಿ ಗ್ಲಾಸ್ ಹೊಡೆದು ಹಾರಿದ ಪ್ರಯಾಣಿಕರು

Share :

16-11-2023

    ಹೊತ್ತಿ ಉರಿದ ಬಸ್‌ನಿಂದ ಜಿಗಿಯುವಾಗ ಪ್ರಯಾಣಿಕರಿಗೆ ಗಾಯ

    ಚಲಿಸುತ್ತಿದ್ದ ಬಸ್‌ನಲ್ಲಿ ಸುಮಾರು 60 ಪ್ರಯಾಣಿಕರು ಇದ್ದರು

    ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಡಬಲ್ ಡೆಕ್ಕರ್ ಬಸ್‌

ನೋಯ್ಡಾ: ಉತ್ತರಪ್ರದೇಶದ ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುವ ಎಸಿ ಬಸ್‌ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಚಲಿಸುತ್ತಿದ್ದ ಬಸ್‌ನಲ್ಲಿದ್ದ ಸುಮಾರು 60 ಪ್ರಯಾಣಿಕರು ತಮ್ಮನ್ನು ರಕ್ಷಿಸಿಕೊಳ್ಳಲು ಬಸ್‌ನಿಂದ ಜಂಪ್ ಮಾಡಿದ್ದಾರೆ. ಸೆಕ್ಟರ್ -37 ನೋಯ್ಡಾದಿಂದ ಬಿಹಾರದ ಸಿವಾನ್‌ಗೆ ಹೋಗುತ್ತಿದ್ದ ಖಾಸಗಿ ಡಬಲ್ ಡೆಕ್ಕರ್ AC ಬಸ್‌ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ.

AC ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಹಾಗೂ ನಿರ್ವಾಹಕ ತಕ್ಷಣ ಬಸ್‌ನಲ್ಲಿದ್ದ ಸುಮಾರು 60 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸೋ ಪ್ರಯತ್ನ ಮಾಡಿದ್ದಾರೆ. ಬೆಂಕಿಯ ತೀವ್ರತೆಗೆ ಬಸ್‌ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೌತಮ್ ಬುದ್ಧನಗರದ ಮುಖ್ಯ ಅಗ್ನಿಶಾಮಕ ಅಧಿಕಾರಿ (ಸಿಎಫ್‌ಒ) ಪ್ರದೀಪ್ ಕುಮಾರ್ ಅವರು ಡಬಲ್ ಡೆಕ್ಕರ್ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.

ನಾವು ಮಾಹಿತಿ ಪಡೆದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ್ದೇವೆ. ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಮೊದಲು ಪ್ರಯಾಣಿಕರನ್ನು ರಕ್ಷಿಸಿ ನಂತರ ಬೆಂಕಿ ನಂದಿಸಿದೆವು. ಬಸ್‌ನಿಂದ ಜಿಗಿಯುವಾಗ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಪ್ರದೀಪ್‌ ಕುಮಾರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಚಲಿಸುವಾಗ ಹೊತ್ತಿ ಉರಿದ ಡಬಲ್ ಡೆಕ್ಕರ್‌ AC ಬಸ್‌.. ಕಿಟಕಿ ಗ್ಲಾಸ್ ಹೊಡೆದು ಹಾರಿದ ಪ್ರಯಾಣಿಕರು

https://newsfirstlive.com/wp-content/uploads/2023/11/Bus-Fire-1.jpg

Load More